ಕಲ್ಬುರ್ಗಿಯ ಗೋದೂತಾಯಿ ದೊಡ್ಡಪ್ಪ ಅಪ್ಪ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ (ಜುಲೈ 9 ರಂದು) ನಡೆದ "ಪತ್ರಿಕಾ ದಿನ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಐದು ವರ್ಷಗಳ ಹಿಂದೆ ಭಾರತ ಪತ್ರಿಕಾ ರಂಗದ ವ್ಯವಹಾರವು ರೂ. 30 ಸಾವಿರ ಕೋಟಿ ಇದ್ದು ಈಗ ಅದು 45 ಸಾವಿರ ಕೋಟಿ ರೂಪಾಯಿಯಷ್ಟಾಗಿದೆ. ಆದಾಯದಲ್ಲಿ ಶೇಕಡ 65 ರಷ್ಟು ಹೆಚ್ಚಳವಾಗಿದ್ದು ಪತ್ರಿಕೆಗಳ ಪ್ರಸಾರ ಶೇಕಡ 15 ರಷ್ಟು ಹೆಚ್ಚಳವಾಗಿದೆ. ಜನರ ಕೈಗೆ ದೀಪ ಕೊಡುವ ಮತ್ತು ಅಭಿವೃದ್ಧಿ ಪರ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತ ಆತಂಕ ಸವಾಲುಗಳ ನಡುವೆಯೂ ಸ್ಮಾರ್ಟ್ ಫೋನ್ ಗಳ ಪರಿಣಾಮದ ಮಧ್ಯೆ ಕಾರ್ಯ ಮಾಡಬೇಕಾಗಿದೆ ಎಂದು ಅವರು ನುಡಿದರು.
ಇದೀಗ ಪತ್ರಿಕಾ ರಂಗವು ಸ್ಮಾರ್ಟ್ ಆಗುವ ಕಾಲ ಪರಿಪಕ್ವವಾಗಿದೆ. ಭಾರತದಲ್ಲಿ ಇನ್ನೆರಡು ವರ್ಷಗಳಲ್ಲಿ ಮೂರನೇ ಒಂದರಷ್ಟು ಯುವಕರು 15 ಮತ್ತು 34ರ ವಯೋಮಾನದವರಾಗಲಿದ್ದು ಇಂದು ಶೇಕಡ 60ರಷ್ಟು ಯುವಕರು ಅಂದರೆ 25 ಕೋಟಿಯಷ್ಟು ಜನರು ಸಾಮಾಜಿಕ ಜಾಲತಾಣವನ್ನು ಬಳಸುತ್ತಿದ್ದಾರೆ. ಪತ್ರಿಕೆಗಳ ಮುದ್ರಣ ಹಾಗೂ ಪ್ರಸಾರ ಕುಸಿತಕ್ಕೆ ಕಾರಣವಾಗುವ ಭಯದ ನಡುವೆ ಡಿಜಿಟಲ್ ಹಾವಳಿ ತಡೆಗೆ ಪರ್ಯಾಯ ವ್ಯವಸ್ಥೆಗಳೊಂದಿಗೆ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸುವ ಕಾಲ ಕೂಡಿಬಂದಿದೆ. ಪತ್ರಿಕೋದ್ಯಮ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಪತ್ರಿಕೆ, ರೇಡಿಯೋ ಟಿವಿ, ಬಹುರಾಷ್ಟ್ರೀಯ ಕಂಪನಿಗಳ ಸಾರ್ವಜನಿಕ ಸಂಪರ್ಕ ಹುದ್ದೆ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪತ್ರಿಕೋದ್ಯಮ ಮತ್ತು ಸಮೂಹ ಸಮೂಹನ ಭಾಗಗಳಲ್ಲಿ ಉಪನ್ಯಾಸಕರಾಗುವ ಮತ್ತು ಸಚಿವಾಲಯಗಳಲ್ಲಿ ಮಾಧ್ಯಮ ಸಲಹೆಗಾರರಾಗುವ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾ ಗುತ್ತಿದ್ದು ನಿರಾಶೆ ಹೊಂದುವ ಆತಂಕ ಬೇಡ. ಪತ್ರಿಕೋದ್ಯಮ ರಂಗಕ್ಕೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಆಸಕ್ತರಾಗಿ ಶಿಕ್ಷಣ ಹೊಂದಬೇಕು ಎಂದು ಡಾ. ಪೆರ್ಲ ಕರೆ ನೀಡಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುಟ್ಟಮಣಿ ದೇವಿದಾಸ್ ಮಾತನಾಡಿ, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಪತ್ರಿಕೆ ,ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳನ್ನು ಬಳಸಿ ಜ್ಞಾನ ಸಂಪನ್ನರಾಗಬೇಕು ಎಂದರು. ವಿಭಾಗದ ಮುಖ್ಯಸ್ಥರಾದ ಕೃಪಾ ಸಾಗರ್ ಗೊಬ್ಬೂರ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿ ಹರ್ಮನ್ ಮೋಗ್ಲಿಂಗ್ ನಿಂದ ಆರಂಭಗೊಂಡು 181 ವರ್ಷ ಸಂದ ಕನ್ನಡ ಪತ್ರಿಕಾ ರಂಗವು ಇಂದು ಹೆಮ್ಮೆರವಾಗಿ ಬೆಳೆದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾದ ಸೀಮಾ ಪಾಟೀಲ್, ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪ್ರಸಾದ ಅಷ್ಟಗಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ರಕ್ಷಿತಾ ದಾಮ ನಿರೂಪಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಮೂಹನದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ