ರೋಟರಿ ಕ್ಲಬ್ ಯುವ ಪದಗ್ರಹಣ: ದಶಮಾನ ವರ್ಷದ ಅಧ್ಯಕ್ಷರಾಗಿ ಅಶ್ವಿನಿ ಕೃಷ್ಣ ಮುಳಿಯ

Upayuktha
0

ಕಾರ್ಯದರ್ಶಿ ವಚನಾ ಜಯರಾಂ, ಕೋಶಾಧಿಕಾರಿಯಾಗಿ ಅಭಿಷ್ ಕೆ.



ಪುತ್ತೂರು:  ರೋಟರಿ ಕ್ಲಬ್ ಯುವ ಸ್ಥಾಪಿತವಾಗಿ ಹತ್ತನೇ ವರ್ಷದ ಸಂಭ್ರಮದಲ್ಲಿದೆ. 2024-25 ಅವಧಿಯ ಅಧ್ಯಕ್ಷೆಯಾಗಿ ಅಶ್ವಿನಿ ಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ವಚನ ಜಯರಾಂ ಕೋಶಾಧಿಕಾರಿಯಾಗಿ ಅಭಿಷ್ ಕೆ ಅವರು ಇವತ್ತು ಪದಗ್ರಹಣ ಗೊಳ್ಳಲಿದ್ದಾರೆ. ಪದಗ್ರಹಣವನ್ನು PDG ಡಾ. ಗೌರಿ ಹಡಿಗಾಲ್ ಇವರು ನೆರವೇರಿಸಲಿದ್ದಾರೆ.


ಕ್ಲಬ್ ನ ಕ್ಲಬ್ ಸರ್ವಿಸ್ ಡೈರೆಕ್ಟರ್ ಆಗಿ ಕುಸುಮ್ ರಾಜ್, ವೊಕೇಷನಲ್ ಸರ್ವಿಸ್ ಡೈರೆಕ್ಟರ್ ಆಗಿ ಗೌರವ ಭಾರದ್ವಾಜ್, ಕಮ್ಯುನಿಟಿ ಸರ್ವಿಸ್ ಡೈರೆಕ್ಟರ್ ಆಗಿ ನಿಹಾಲ್ ಶೆಟ್ಟಿ, ಇಂಟರ್ನ್ಯಾಷನಲ್ ಸರ್ವಿಸ್ ಡೈರೆಕ್ಟರ್ ಆಗಿ ವಿನೀತ್ ಶೆಣೈ,  ಯುತ್ ಸರ್ವಿಸ್ ಡೈರೆಕ್ಟರ್ ಆಗಿ ಸುದರ್ಶನ್ ರೈ ಇವರು ಆಯ್ಕೆಯಾಗಿದ್ದಾರೆ. ಬುಲೆಟಿನ್ ಎಡಿಟರ್ ಆಗಿ ಡಾ. ದೀಪಕ್ ಕೆ ಬಿ ಕ್ಲಬ್ ನ, ಅಸಿಸ್ಟೆಂಟ್ ಗವರ್ನರ್ ಆಗಿ ಡಾ. ಹರ್ಷಕುಮಾರ್ ರೈ, ಜೋನಲ್ ಲಿಫ್ಟಿನೆಂಟ್ ಆಗಿ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಕಾರ್ಯನಿರ್ವಹಿಸಲಿದ್ದಾರೆ.


ಮೆಂಬರ್ ಶಿಪ್ ಚೇರ್ ಮೆನ್ ಆಗಿ ಡಾ. ಯದುರಾಜ್, TRF ಚೇರ್ ಮೆನ್ ಆಗಿ ಸ್ವಸ್ತಿಕ ಶೆಟ್ಟಿ, ಪಬ್ಲಿಕ್ ಇಮೇಜ್ ಚೇರ್ಮನ್ ಆಗಿ ಸುದರ್ಶನ್ ಹಾರಕರೆ, clcc/wins ಚೇರ್ ಮೆನ್ ಆಗಿ ಕನಿಷ್ಕ, ಡಿಸ್ಟ್ರಿಕ್ಟ್ ಪ್ರೊಜೆಕ್ಟ್ ಚೇರ್ಮೆನ್ ಆಗಿ ರತ್ನಾಕರ ರೈ, ಪೋಲಿಯೋ ಪ್ಲಸ್ ಚೇರ್ ಮೆನ್ ಆಗಿ ಸೋನ ಪ್ರದೀಪ್, ಕ್ಲಬ್ ಲರ್ನಿಂಗ್ ಫೇಸಿಲಿಟೇಟರ್ ಆಗಿ ಉಮೇಶ್ ನಾಯಕ್ ಹಾಗೂ ಸರ್ಜೆಂಟ್ ಎಟ್ ಆರ್ಮ್ ಆಗಿ ತ್ರಿವೇಣಿ ಗಣೇಶ್ ಇವರು ಆಯ್ಕೆಯಾಗಿರುತ್ತಾರೆ.


ಸಂಧ್ಯಾ ಸುರಕ್ಷಾ ಆರೋಗ್ಯ ಮದ್ಯಪಾನ ಡ್ರಗ್ ಡಿ ಎಡಿಕ್ಷನ್ ಕಾರ್ಯಕ್ರಮಗಳು, ಸರ್ವೈಕಲ್ ಕ್ಯಾನ್ಸರ್ ಬಗ್ಗೆ ಯೋಜನೆಗಳು, ಕುಡಿಯುವ ನೀರಿನ ಕೊಡುಗೆಗಳು, ಅಂಗನವಾಡಿ ಶಾಲೆಗೆ ಕೊಡುಗೆಗಳು, ರೋಡ್ ಸೇಫ್ಟಿ ಕಾರ್ಯಕ್ರಮಗಳು, ಮೆಂಟಲ್ ಹೆಲ್ತ್ ಹಾಗೂ ಶಾಲಾ-ಕಾಲೇಜು ಮಕ್ಕಳಿಗೆ ಸಾಫ್ಟ್ ಸ್ಕಿಲ್ ಟ್ರೈನಿಂಗ್ ಹಾಗೂ ಪ್ರೈಮರಿ ಹೆಲ್ತ್ ಸೆಂಟರ್ ಗಳಿಗೆ ECG ಮೆಷಿನ್ ಮತ್ತು CRR ಬಗ್ಗೆ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಕಾಲೇಜು ಮಕ್ಕಳಿಗೆ ಅರಿವು ಹಾಗೂ ಪ್ರಾತ್ಯಕ್ಷತೆ ನೀಡುವ ಬಗ್ಗೆ ಈ ವರ್ಷದ ಯೋಚನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ ಇವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top