|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಫಿಲೋಮಿನಾ ಪ.ಪೂ ವಿದ್ಯಾರ್ಥಿಗಳು ಅಂ.ರಾ. ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್‌ಗೆ ಆಯ್ಕೆ

ಫಿಲೋಮಿನಾ ಪ.ಪೂ ವಿದ್ಯಾರ್ಥಿಗಳು ಅಂ.ರಾ. ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್‌ಗೆ ಆಯ್ಕೆ
ಪುತ್ತೂರು:
ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ಇವರು ಆಯೋಜಿಸಿದ 2024ನೇ ರಾಷ್ಟ್ರಮಟ್ಟದ ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್  ಅಂತರಾಷ್ಟ್ರ ಮಟ್ಟದ ಆಯ್ಕೆ ಶಿಬಿರದಲ್ಲಿ  ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.


ಪ್ರಥಮ ವಿಜ್ಞಾನ ವಿಭಾಗದ ದಿಗಂತ್ ವಿ ಎಸ್, ಆರ್ ಅಮನ್ ರಾಜ್ ಹಾಗೂ ಅನ್ವಿತ್ ರೈ ಬಾರಿಕೆ ಇವರು ಆಯ್ಕೆಯಾಗಿರುತ್ತಾರೆ. ಇವರು ಆಗಸ್ಟ್ ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯುವ ಜೀವ ರಕ್ಷಕ ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.


ಇವರುಗಳಿಗೆ ಈಜು ತರಬೇತುದಾರರಾದ ಪಾರ್ಥ ವಾರಣಾಸಿ, ನಿರೂಪ ಜಿ ಆರ್, ರೋಹಿತ್ ಪ್ರಕಾಶ್, ದೀಕ್ಷಿತ್ ರಾವ್ ಇವರು ತರಬೇತಿ ನೀಡಿರುತ್ತಾರೆ. ದಿಗಂತ್ ವಿ ಎಸ್  ಇವರು ಕೂರ್ನಡ್ಕ ನಿವಾಸಿ ವಿಶ್ವನಾಥ್ ಎಸ್ ಹಾಗೂ ವೀಣಾ ಕುಮಾರಿ.ಕೆ ದಂಪತಿಗಳ ಪುತ್ರ, ಆರ್ ಅಮನ್ ರಾಜ್ ದರ್ಬೆ ನಿವಾಸಿ ರಾಜೇಶ್ ಹಾಗೂ ಅಶ್ವಿನಿ ರಾಜೇಶ್ ದಂಪತಿಗಳ ಪುತ್ರ ಹಾಗೂ ಅನ್ವಿತ್ ರೈ ಬಾರಿಕೆ ಇವರು ಕುಂಬ್ರ ನಿವಾಸಿ ಅನಿಲ್ ಕುಮಾರ್ ರೈ ಬಾರಿಕೆ ಹಾಗೂ ದಿವ್ಯಾ ಅನಿಲ್ ರೈ ದಂಪತಿಗಳ ಪುತ್ರನಾಗಿದ್ದಾನೆ.


ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಕ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


0 Comments

Post a Comment

Post a Comment (0)

Previous Post Next Post