ಕುಂಬಳೆ: ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠದ 2024-25ನೇ ವರ್ಷದ ಪ್ರತಿಭಾ ಭಾರತೀ ಉದ್ಘಾಟನಾ ಕಾರ್ಯಕ್ರಮವು ಶುಕ್ರವಾರ ಜರಗಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ ಕೆ.ಎಸ್. ಭಟ್ ಎರ್ನಾಕುಳಂ, ನಿವೃತ್ತ ಬ್ಯಾಂಕ್ ಅಧಿಕಾರಿಗಳು ಇವರು ಮಾತನಾಡುತ್ತಾ 'ವಿದ್ಯಾರ್ಥಿದೆಸೆಯಿಂದಲೇ ಉತ್ತಮ ಜೀವನ ಸಾಗಬೇಕಾದರೆ ವಿದ್ಯಾರ್ಥಿಗಳಿಗೆ ಮುಂದಿನ ಜೀವನದ ಗುರಿ ಮತ್ತು ಕನಸು ಇರಬೇಕು' ಎಂದರಲ್ಲದೆ, ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ಅವರ ಜೀವನಾದರ್ಶಗಳನ್ನು ಉದಾಹರಣೆಯಾಗಿ ನೀಡಿದರು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ಕಾರ್ಯಕ್ರಮ ಬಹಳ ಉತ್ತಮವಾಗಿ ಮೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ಶಾಲೆಯ ಎಲ್ಲಾ ತರಗತಿಯ ಮಕ್ಕಳಿಂದಲೂ ಪ್ರತಿಭಾ ಪ್ರದರ್ಶನ ನಡೆಯಿತು. ಹತ್ತನೇ ತರಗತಿಯ ಕು| ವೈಷ್ಣವಿ ಸಭಾಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ಯಾಮ್ ಭಟ್ ದರ್ಭೆ ಮಾರ್ಗ ಹಾಗೂ ಸಹ ಮುಖ್ಯ ಶಿಕ್ಷಕಿ ಶ್ರೀಮತಿ ಚಿತ್ರ ಸರಸ್ವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರಾರ್ಥನೆ ಹಾಗೂ 10ನೇ ತರಗತಿಯ ಕು|ಕೃತಿ ಸ್ವಾಗತಿಸಿ ಕು|ವೈಷ್ಣವಿ ವಂದಿಸಿದಳು. ಕು|ಅಕ್ಷರ ಹಾಗೂ ಕು|ಪೃಥ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ