ಬೆಂಗಳೂರು: ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶೇಷಾದ್ರಿಪುರ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ವಾರ್ಷಿಕೋತ್ಸವದ ಪ್ರಯುಕ್ತ ಜುಲೈ 25 ಗುರುವಾರ ಸಂಜೆ ಏರ್ಪಡಿಸಿದ್ದ "ವ್ಯಾಸ ವೇದ - ದಾಸ ನಾದ" ಎಂಬ ಶೀರ್ಷಿಕೆಯಲ್ಲಿ ಯುವ ಗಾಯಕ ವರದೇಂದ್ರ ಗಂಗಾಖೇಡ್ ಅವರು ಹಲವಾರು ಅಪರೂಪದ ಹರಿದಾಸರ ಕೃತಿಗಳನ್ನು ಪ್ರಸ್ತುತ ಪಡಿಸಿದರು.
ಇವರು ಹಾಡಿದ ಕೃತಿಗಳಿಗೆ ಮ||ಶಾ||ಸಂ|| ಡಾ|| ವೇಣುಗೋಪಾಲಾಚಾರ್ ಅಗ್ನಿಹೋತ್ರಿ ಅವರು ವ್ಯಾಖ್ಯಾನ ಮಾಡಿದರು. ಇವರಿಬ್ಬರ ಗಾಯನ ಮತ್ತು ವ್ಯಾಖ್ಯಾನಕ್ಕೆ ಹಾರ್ಮೋನಿಯಂ ವಾದನದಲ್ಲಿ ತೇಜಸ್ ಕಾಟೋಟಿ, ತಬಲಾ ವಾದನದಲ್ಲಿ ಪ್ರಮೋದ್ ಗಬ್ಬೂರ್ ಮತ್ತು ಕೇಶವ ಜೋಶಿ, ತಾಳದಲ್ಲಿ ವೆಂಕಟೇಶ್ ಪುರೋಹಿತ್ ಸಾಥ್ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ