ಬಳ್ಳಾರಿ: ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ, ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

Upayuktha
0




ಬಳ್ಳಾರಿ: 
ದಾವಣಗೆರೆಯಲ್ಲಿ ಕರ್ನಾಟಕ ಸ್ಫೋಟ್ಸ್ ಅಸೋಸಿಯೇಶನ್ಸ್ ಮತ್ತು ಗೋಜಿರಿಯೋ ಕರಾಟೆ ಕೆನ್ರುಕಾನ್ ಇಂಡಿಯಾ, ಇವರು 1ನೇ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯನ್ನು ಜು.15, 16 ರಂದು  ದಾವಣಗೆರೆ ನಗರದ ಎ.ಕೆ.ಎಸ್. ಕನ್‌ವೆನ್ಷನ್ ಹಾಲ್‌ನಲ್ಲಿ ನಡೆಸಿದರು. ಈ ಸ್ಪರ್ಧೆಯ ಮುಖ್ಯಸ್ಥರಾಗಿ ಹಾನ್ಸಿ ಅನ್ನಪ್ಪ ಮಾರ್ಕಲ್, ಹಾನ್ಸಿ ರಾಜೇಶ್ ಗರವಾಲ್ ಇವರು ವಹಿಸಿದ್ದರು.

ಈ ಸ್ಪರ್ಧೆಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಸುಮಾರು 1500 ಕರಾಟೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.


ಈ ಸ್ಪರ್ಧೆಯಲ್ಲಿ ನಮ್ಮ ಟ್ರಸ್ಟಿನ 15 ವರ್ಷದ ಒಳಗಿನ ವಿಭಾಗದಲ್ಲಿ ನಂದೀಶ್ ಪಿ.ಎಸ್. ಕಠಾದಲ್ಲಿ ತೃತೀಯ, ತೇಜಸ್ ಪಿ.ಎಸ್. ಕಠಾದಲ್ಲಿ ತೃತೀಯ, ಶಿವಲಿಂಗೇಶ್ ಕಠಾದಲ್ಲಿ ತೃತೀಯ, ಕುಮಟಿಯಲ್ಲಿ ತೃತೀಯ, ಪಾಟೀಲ್ ವಿಹಾನ್ ರೆಡ್ಡಿ ಕಠಾದಲ್ಲಿ ತೃತೀಯ, ಪಿಯಾನ್ಸ್ ಜೈನ್ ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತೀಯ, ಸುಜೇಯ್ ವಿಠಲ್ ಕೆ.ಆರ್. ಕಠಾದಲ್ಲಿ ದ್ವಿತೀಯ ಬಹುಮಾನ ಪಡೆದರು. 


ಕುಮಟಿಯಲ್ಲಿ ತೃತೀಯ, ಕು|| ಪ್ರಜ್ಞ ಎಂ. ಕಠಾದಲ್ಲಿ ತೃತಿಯ, ರಿತೀಶ್ ಬಿ. ಕಠಾದಲ್ಲಿ ತೃತೀಯ, ಶ್ರೇಯಸ್ ಬಿ.ಎಸ್. ಕುಮಟಿಯಲ್ಲಿ ತೃತೀಯ, ವಿಶ್ವಾಸ ಕೆ. ಕಠಾದಲ್ಲಿ ದ್ವಿತೀಯ, ಮಂಜುನಾಥ ಇ. ಕಠಾದಲ್ಲಿ ತೃತಿಯ, ಕುಮಟಿಯಲ್ಲಿ ತೃತೀಯ. 15 ವರ್ಷ ಮೇಲ್ಪಟ್ಟ ಸೀನಿಯರ್ ವಿಭಾಗದಲ್ಲಿ ಕುಮ್ಮರಿ ಗೌರಿ ಕಠಾದಲ್ಲಿ ದ್ವಿತಿಯ, ಕುಮಟಿಯಲ್ಲಿ ದ್ವಿತೀಯ, ಹೆಚ್. ಸ್ನೇಹ ಕಠಾದಲ್ಲಿ ತೃತೀಯ, ಕುಮಟಿಯಲ್ಲಿ ತೃತೀಯ. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಟ್ರಸ್ಟಿನ ಗೌರವಾಧ್ಯಕ್ಷ ವಿಕ್ರಮ್ ಮಹಿಪಾಲ್, ಸಂಚಾಲಕ ಶಬರಿ ರವಿಚಂದ್ರ ಮತ್ತು ತರಬೇತಿದಾರ ಬಂಡ್ರಾಳ್ ಎಂ.  ಮೃತ್ಯುಂಜಯ ಸ್ವಾಮಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Advt Slider:
To Top