- ಶ್ರೀನಿವಾಸ ಜಾಲವಾದಿ, ಸುರಪುರ
'ಏನಪಾ ಕಾಳ್ಯಾ ಏನೈತಿ ಹೊಸಾದು?' ಕೇಳಿದ ಕಾಕಾ
'ಎಲ್ಲಾ ಹೊಸಾದೆ ಐತಿ, ಹಳಿದೆಲ್ಲಾ ಹೋಯ್ತಿ' ಎಂದ ಕಾಳ್ಯಾ ನಕ್ಕ
'ಮತ್ತs ಕೇಳಿ ಇಲ್ಲೋ ಇಂಡಿಯಾ ವರ್ಲ್ಡ್ ಕಪ್ ಗೆದ್ದು ಮೀಸಿ ತಿರುವೇತಿ!' ಎಂದ ಸ್ಪೀಡ ಬ್ರೇಕರ್
'ಹೋಯಿಂದು ಹೋಯಿಂದು.....ಏನ್ ಕ್ಯಾಚ್ ಹಿಡ್ದನಲೇ ಯಪ್ಪಾ ಆ ಕುರ್ಸಾಲ್ಯಾ ಲಾಸ್ಟಿಗಿ!' ಎಂದು ಆಶ್ಚರ್ಯದಿಂದ ಹೇಳಿದ ಲಗಾಟಿ
'ಏ ಅಂವಾ ಕುರ್ಸಾಲ್ಯಾ ಅಲ್ಲಲೇ ಖೋಡಿ, ಅಂವಾ ಸೂರ್ಯಕುಮಾರ' ಎಂದ ಟುಮ್ಯಾ
'ಹಾಂ ಹೌದೇಳು,ನಾ ಪ್ರೀತಿಯಿಂದ ಅವ್ನಿಗಿ ಕುರ್ಸಾಲ್ಯಾ ಅಂತ ಕರದಿನಿ' ಎಂದ ಲಗಾಟಿ
'ಏ ಭಾರಿ ಆಡಿದ್ರs ತಗೋ, ಕೋಹ್ಲಿ, ಬೂಮ್ರಾ, ಪಾಂಡ್ಯಾ' ಎಂದ ಕ್ರಿಕೇಟ್ ಪ್ರೇಮಿ ಟಕಳು
'ಇದು ಧೋನಿಗೆ ಗುರುದಕ್ಷಿಣೆ ಕೊಟ್ಟಂಗ ಆತು' ಎಂದಳು ರಾಣಿ
'ಮತ್ತs ಕೋಹ್ಲಿಗೂ ಲಾಸ್ಟ್ ಮ್ಯಾಚ್, ರೋಹಿತ ಶರ್ಮಾ ಕ್ಯಾಪ್ಟನ್ಶಿಪ್ನ್ಯಾಗ ಇದು ಮೂರನೇ ಸಲ ಅಂತ ವಿಶ್ವಕಪ್ ಗೆದ್ದಿದ್ದು' ಎಂದ ಕಾಳ್ಯಾ
'ಹೌದು ದ.ಆಫ್ರೀಕಾದ ವಿರುದ್ಧ ಭಾರಿ ರೋಚಕ ಪಂದ್ಯ ಇದು' ಎಂದಳು ರಾಶಿ
'ಹೌದೌದು.... ನಮ್ಮ ಡ್ಯಾಶಿಂಗ್ ಹರಟೆ ಟೀಂನಿಂದ ಎಲ್ಲಾರಿಗೂ ಅಭಿನಂದನೆಗಳು ಹೇಳೂಣ' ಅಂದ ಲಗಾಟಿ
'ಹಂ... ಮತ್ತs ಡಿಸಿಎಂ ಡಿಶುಂ ಡಿಶುಂ ಫೈಟಿಂಗ್ ಶುರು ಆಗೇತಲಾ?' ಎಂದ ಸ್ಪೀಡ ಬ್ರೇಕರ್
'ಬರೇ ಫೈಟಿಂಗ್ ಅಲ್ಲಾ ಈ ಸಲ ಯುದ್ಧನೇ ಶುರು ಆಗೇತಿ' ಎಂದ ಕಾಳ್ಯಾ
'ಮದ್ಲ ಡಿಸಿಎಂ ಅಂತ ಶುರು ಆಗಿದ್ದು ಈಗ ಸಿಎಂ ನಮ್ಮ ಹುಡಗ್ಗ ಕೊಡ್ರಿ ಅಂತ ಡೈರೆಕ್ಟ್ ಕೇಳೂ ಹಂತಕ್ಕs ಬಂದು ಮುಟ್ಟೇತಿ' ಎಂದ ಗುಟ್ಕಾಕಿಂಗ್
'ಇಂವಾ ಯಾವಲೇ ಹೊಸಾ ಗಿರಾಕಿ?' ಎಂದ ಕಾಕಾ
'ಇಂವಾ ಕಾಕಾ, ಗುಟ್ಕಾಕಿಂಗ್ ಅಂತ ಹೊಸ್ದಾಗಿ ಬಂದಾನು' ಎಂದ ಕಾಳ್ಯಾ
'ಏನ್ ಗುಟ್ಕಾಕಿಂಗ್ನೋ ಏನ್ ಸಿಗರೇಟ ಕಿಂಗೋ ಒಂದು ಗೊತ್ತಾಗವಲ್ತು' ಎಂದ ಕಾಕಾ
'ಹಂ ಹೌದು, ಹಿಂಗೇ ಸೇಮ್ ಬಂಡೆಕ್ಕೂ ಆಗೇತಿ ನೋಡು ಫುಲ್ ಕನ್ಪ್ಯೂಜ್!' ಅಂತ ನಕ್ಕ ರಬಡ್ಯಾ
'ಹ್ಯಾಂಗ? ಹಂಗ್ಯಾಂಗ ಆತು?' ಎಂದ ಕಾಕಾ
'ಏನಿಲ್ಲಾ ಒಬ್ಬ ಸ್ವಾಮಿ ಕಡೆ ಹೇಳಸ್ಲಿಕ್ಕೆ ಹೋಗ್ಯಾರು, ಅದು ಅವರಿಗೆ ತಿರುಗು ಬಾಣ ಆಗೇತಿ' ಎಂದ ಗುಡುಮ್ಯಾ
'ಹೌದು, ನೋಡಪಾ ಟಗರು, ನೀ ಈಗಾಗ್ಲೇ ಅಧಿಕಾರ ಬೇಕಾದಷ್ಟು ಅನುಭವಿಸಿದಿ, ಈಗ ನಮ್ಮ ಬಂಡೆ......ಪಾಪ ಭಾಳ ಖರ್ಚು ಮಾಡ್ಕೊಂಡತಿ, ಅದ್ಕಿಷ್ಟು ಬಿಡು ನಿನ್ನ ಕುರ್ಚಿ' ಅಂತ ಸ್ವಾಮಿಜಿ ಹೇಳ್ಯಾರು' ಎಂದಳು ರಾಶಿ
'ಅದ್ಕs ಸಹಕಾರ ಮಂತ್ರಿ ಇದ್ರs, ಏ ಹಂಗ್ಯಾಂಗ ಆಕ್ಕತಿ ಬಿಡಂಗಿಲ್ಲ ನಾವು ಕುರ್ಚಿ' ಅಂತ ಚೋಟಾ ಬಾಂಬ್ ಹಾಕೇತಿ' ಅಂದ ಲಗಾಟಿ
'ಅಷ್ಟ ಅಲ್ಲs, ಈಗ ನಿಮ್ಮ ಪೀಠ ಬಿಡ್ರಿ ನಾನೇ ಸ್ವಾಮಿ ಆಕ್ಕಿನಿ ಕಾವಿ ಉಟ್ಕೊಂಡು ಅಂತನೂ ಸಹಕಾರಿ ಬೋಲ್ಯಾ' ಎಂದ ಬಾಶಾ
'ಏ ಆ ಸ್ವಾಮಿ ಕಡಿಂದ ಇವ್ರೇ ಇದ್ರs ಹಿಂಗಿಂಗ ಅನ್ನರಿ ಅಂತ ಹೇಳಸ್ಯಾರು ಅಂತನೂ ಅಂದತಿ' ಎಂದ ಗುಟ್ಕಾಕಿಂಗ್
'ಅದ್ಕs ಮರಿಬಂಡೆ ಗರಂ ಆಗೇತಿ, ಏ ಸಹಕಾರಿ ನೀ ಇನ್ನೊಮ್ಮೆ ಹ್ಯಾಂಗ ಆರ್ಸಿ ಬರ್ತಿ ನೋಡಾಮು ಅಂತ ಹೇಳೇತಿ ಅದು' ಎಂದ ಸ್ಪೀಡ ಬ್ರೇಕರ್
' ಅಲ್ಲ ಈಗ ತಾ ಬಕ್ಕಬಾರ್ಲೆ ಬಿದ್ದದ್ದು ನೆಪ್ಪ ಹಾರ್ಯಾನೇನು ಅಂವಾ?' ಎಂದ ಕಾಕಾ
'ಏ ಈಗ ಮತ್ತs ಚನ್ನಪಟ್ಣಕ್ಕ ರೇಡಿ ಆಗೇತಿ ಇದೇ ಗ್ಯಾಂಗ್' ಎಂದಳು ರಾಣಿ
'ಅಲ್ಲಿ ಹೃದಯವಂತನ ಹೆಣ್ತಿನ್ನ ತಂದು ನಿಂದರ್ಸಬೇಕಂತ ಮಾಡ್ಯಾನ ಕುಮ್ಮಣ್ಣ' ಎಂದ ಲಗಾಟಿ
'ಅಕಡೇ ಎಲೆಕ್ಷನ್ ಮಾಡ್ಕೊಂತ ಹೋಗು, ನನ್ನ ಕುರ್ಚಿ ತಂಟೆಕ್ಕ ಬರಬ್ಯಾಡಂತ ಅಂದತಿ ಬಂಡೆಕ್ಕ ಟಗರು' ಅಂದ ಟಕಳು
' ಅಂದ್ರs ಅಂವಾ ಕರ್ಚ ಮಾಡಾಂವಾ, ಇಂವಾ ಅದರ ಫಲ ಉಣ್ಣಾಂವ ಅಂದಂಗಾತು' ಅಂದ ಕಾಕಾ
'ಹಂ ಎಸ್ ಎಸ್, ಹೌದು ಎಂದ ಲಗಾಟಿ ಅಂದ, ಹಂ ಕೇಳಿರಿಲ್ಲೋ ಮೊನ್ನೆ ಒಬ್ಬಂವಾ ಟ್ರಕ್ ಡ್ರೈವರ್ ಗುಟ್ಕಾ ಬಾಯಾಗಿಂದು ಉಗುಳಬೇಕಂತ ತಲಿ ಹೊರಗೆ ಹಾಕ್ಯಾನ, ಎದುರಿಗಿ ಬಂದ ಇನ್ನೊಂದು ಟ್ರಕ್ನವಾ ಇವ್ನ ರುಂಡಾನೇ ಹೊಡ್ಕೊಂಡು ಹೋಗ್ಯಾನಂತ' ಅಂದ
'ಇವು ಅದ್ಕೆ ಗುಟ್ಕಾ ತಿನ್ನೂವುಕ ಹೇಳಿದರ ಎಲ್ಲಿ ಕೇಳ್ತಾವು?
ತಿಂದೇ ಸಾಯ್ತಿನಿ ಅಂತಾವು' ಅಂತ ಅಂದ ಗುಡುಮ್ಯಾ
'ಇನ್ನೊಬ್ಬ ಮಂತ್ರಿ ಭೂಪಾಲದಾಗ ಗಂಡಸರಿಗಿ ಮನ್ಯಾಗೆ ಕುಂತು ಕುಡಿರಿ, ಅಂದ್ರs ಅಲ್ಲಿ ನಿಮ್ಮ ಹೆಂಡ್ತಿ ಮಕ್ಕಳನ ನೋಡಿ ಕುಡಿಯೂದು ಬಿಡ್ತಿರಿ ಅಂತ ಹೇಳ್ಯಾನು' ಅಂದ ಲಗಾಟಿ
'ಎಂಥೆಂಥಾ ಐಡಿಯಾ ಬರ್ತಾವು ನೋಡ್ರಿ ಇವ್ರಿಗಿ, ಕುಡಕರ ಹೆಂಡ್ರು ಬಂದು ಲಗಾಸ್ತಾರ ಅವ್ನಿಗಿ' ಅಂದಳು ರಾಶಿ
'ಮೊದಲ ಮಳಿಗೆ ಅಯೋಧ್ಯಾ ಗುಡಿ ಮುಂದಿನ ರಸ್ತೆ ಢಮಾರ್ ಆಗೇತಂತ' ಕಾಕಾ ಹೇಳಿದ
'ಎದ್ನೊ ಬಿದ್ನೋ ಅಂತ ಜಲ್ದಿ ಜಲ್ದಿ ತರಾತುರಿಯಿಂದ ಕೆಲ್ಸ ಮಾಡಿ ವೋಟ ತಗೊಬೇಕನ್ನವರಿಗೆ ಮತ್ತs ಇನ್ನೇನು ಆಗಾಕ ಸಾಧ್ಯ ಹೇಳ್ರಿ?' ಎಂದಳು ರಾಣಿ
'ಈ ಕಡಿ ಅಯ್ಯೊಧ್ಯಾನೂ ದಕ್ಲಿಲ್ಲ,ಆ ಕಡೆಗೆ ಗುಂಡಿ ಬೀಳೂದು ನಿಲ್ಲಲಿಲ್ಲ' ಎಂದ ಕಾಳ್ಯಾ
'ಅಲ್ಲಾ ಆ ಶತೃಘ್ನಸಿನ್ನಾನ ಮಗಳು ಸೋನಾಕ್ಷಿ ಲಗ್ನ ಆದ ಐದನೇ ದಿನಕ್ಕೆ ಗರ್ಭಿಣಿ ಆಗ್ಯಾಳಂತ ದವಾಖಾನಿಗಿ ಹೋಗಿದ್ಲಂತ!' ಎಂದ ಗುಡುಮ್ಯಾ
'ಅದೇ ಹಾಡಾ ಬಂದಿತ್ತಲ್ಲs ಮೊನ್ನೆ ಮೊನ್ನೆ ಸಿನಿಮಾದಾಗ, ಮೊದಲು ಮಕ್ಕಳ್ಗಾಬೇಕು ಆಮ್ಯಾಲ ಲಗ್ನs ಆಗಬೇಕು ಅಂತ, ಅದನ್ನು ಖರೇ ಮಾಡ್ಯಾರ ನೋಡ ಇವ್ರು' ಎಂದ ಸ್ಪೀಡ ಬ್ರೇಕರ್
'ಕಳ್ಳಭಟ್ಟಿ ಕುಡ್ದು ಸತ್ರರಂದ್ರs ಅದ್ನs ಮಾರಿದ ಪೀಡೆಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವ ಕಾನೂನು ತಂದಿದ್ದಾರೆ'ಡಿಸಿಎಂ ಡಿಶೂಂ ಡಿಶೂಂ-ಇಂಡಿಯಾ ಕಪ್'
'ಏನಪಾ ಕಾಳ್ಯಾ ಏನೈತಿ ಹೊಸಾದು?' ಕೇಳಿದ ಕಾಕಾ
'ಎಲ್ಲಾ ಹೊಸಾದೆ ಐತಿ, ಹಳಿದೆಲ್ಲಾ ಹೋಯ್ತಿ' ಎಂದ ಕಾಳ್ಯಾ ನಕ್ಕ
'ಮತ್ತs ಕೇಳಿ ಇಲ್ಲೋ ಇಂಡಿಯಾ ವರ್ಲ್ಡ್ ಕಪ್ ಗೆದ್ದು ಮೀಸಿ ತಿರುವೇತಿ!' ಎಂದ ಸ್ಪೀಡ ಬ್ರೇಕರ್
'ಹೋಯಿಂದು ಹೋಯಿಂದು.....ಏನ್ ಕ್ಯಾಚ್ ಹಿಡ್ದನಲೇ ಯಪ್ಪಾ ಆ ಕುರ್ಸಾಲ್ಯಾ ಲಾಸ್ಟಿಗಿ!' ಎಂದು ಆಶ್ಚರ್ಯದಿಂದ ಹೇಳಿದ ಲಗಾಟಿ
'ಏ ಅಂವಾ ಕುರ್ಸಾಲ್ಯಾ ಅಲ್ಲಲೇ ಖೋಡಿ, ಅಂವಾ ಸೂರ್ಯಕುಮಾರ' ಎಂದ ಟುಮ್ಯಾ
'ಹಾಂ ಹೌದೇಳು,ನಾ ಪ್ರೀತಿಯಿಂದ ಅವ್ನಿಗಿ ಕುರ್ಸಾಲ್ಯಾ ಅಂತ ಕರದಿನಿ' ಎಂದ ಲಗಾಟಿ
'ಏ ಭಾರಿ ಆಡಿದ್ರs ತಗೋ, ಕೋಹ್ಲಿ,ಬೂಮ್ರಾ, ಪಾಂಡ್ಯಾ' ಎಂದ ಕ್ರಿಕೇಟ್ ಪ್ರೇಮಿ ಟಕಳು
'ಇದು ಧೋನಿಗೆ ಗುರುದಕ್ಷಿಣೆ ಕೊಟ್ಟಂಗ ಆತು' ಎಂದಳು ರಾಣಿ
'ಮತ್ತs ಕೋಹ್ಲಿಗೂ ಲಾಸ್ಟ್ ಮ್ಯಾಚ್, ರೋಹಿತ ಶರ್ಮಾ ಕ್ಯಾಪ್ಟನ್ಶಿಪ್ನ್ಯಾಗ ಇದು ಮೂರನೇ ಸಲ ಅಂತ ವಿಶ್ವಕಪ್ ಗೆದ್ದಿದ್ದು' ಎಂದ ಕಾಳ್ಯಾ
'ಹೌದು ದ.ಆಫ್ರೀಕಾದ ವಿರುದ್ಧ ಭಾರಿ ರೋಚಕ ಪಂದ್ಯ ಇದು' ಎಂದಳು ರಾಶಿ
'ಹೌದೌದು.... ನಮ್ಮ ಡ್ಯಾಶಿಂಗ್ ಹರಟೆ ಟೀಂನಿಂದ ಎಲ್ಲಾರಿಗೂ ಅಭಿನಂದನೆಗಳು ಹೇಳೂಣ' ಅಂದ ಲಗಾಟಿ
'ಹಂ... ಮತ್ತs ಡಿಸಿಎಂ ಡಿಶುಂ ಡಿಶುಂ ಫೈಟಿಂಗ್ ಶುರು ಆಗೇತಲಾ?' ಎಂದ ಸ್ಪೀಡ ಬ್ರೇಕರ್
'ಬರೇ ಫೈಟಿಂಗ್ ಅಲ್ಲಾ ಈ ಸಲ ಯುದ್ಧನೇ ಶುರು ಆಗೇತಿ' ಎಂದ ಕಾಳ್ಯಾ
'ಮದ್ಲ ಡಿಸಿಎಂ ಅಂತ ಶುರು ಆಗಿದ್ದು ಈಗ ಸಿಎಂ ನಮ್ಮ ಹುಡಗ್ಗ ಕೊಡ್ರಿ ಅಂತ ಡೈರೆಕ್ಟ್ ಕೇಳೂ ಹಂತಕ್ಕs ಬಂದು ಮುಟ್ಟೇತಿ' ಎಂದ ಗುಟ್ಕಾಕಿಂಗ್
'ಇಂವಾ ಯಾವಲೇ ಹೊಸಾ ಗಿರಾಕಿ?' ಎಂದ ಕಾಕಾ
'ಇಂವಾ ಕಾಕಾ, ಗುಟ್ಕಾಕಿಂಗ್ ಅಂತ ಹೊಸ್ದಾಗಿ ಬಂದಾನು' ಎಂದ ಕಾಳ್ಯಾ
'ಏನ್ ಗುಟ್ಕಾಕಿಂಗ್ನೋ ಏನ್ ಸಿಗರೇಟ ಕಿಂಗೋ ಒಂದು ಗೊತ್ತಾಗವಲ್ತು' ಎಂದ ಕಾಕಾ
'ಹಂ ಹೌದು, ಹಿಂಗೇ ಸೇಮ್ ಬಂಡೆಕ್ಕೂ ಆಗೇತಿ ನೋಡು ಫುಲ್ ಕನ್ಪ್ಯೂಜ್!' ಅಂತ ನಕ್ಕ ರಬಡ್ಯಾ
'ಹ್ಯಾಂಗ? ಹಂಗ್ಯಾಂಗ ಆತು?' ಎಂದ ಕಾಕಾ
'ಏನಿಲ್ಲಾ ಒಬ್ಬ ಸ್ವಾಮಿ ಕಡೆ ಹೇಳಸ್ಲಿಕ್ಕೆ ಹೋಗ್ಯಾರು, ಅದು ಅವರಿಗೆ ತಿರುಗು ಬಾಣ ಆಗೇತಿ' ಎಂದ ಗುಡುಮ್ಯಾ
'ಹೌದು, ನೋಡಪಾ ಟಗರು, ನೀ ಈಗಾಗ್ಲೇ ಅಧಿಕಾರ ಬೇಕಾದಷ್ಟು ಅನುಭವಿಸಿದಿ, ಈಗ ನಮ್ಮ ಬಂಡೆ......ಪಾಪ ಭಾಳ ಖರ್ಚು ಮಾಡ್ಕೊಂಡತಿ, ಅದ್ಕಿಷ್ಟು ಬಿಡು ನಿನ್ನ ಕುರ್ಚಿ' ಅಂತ ಸ್ವಾಮಿಜಿ ಹೇಳ್ಯಾರು' ಎಂದಳು ರಾಶಿ
'ಅದ್ಕs ಸಹಕಾರ ಮಂತ್ರಿ ಇದ್ರs, ಏ ಹಂಗ್ಯಾಂಗ ಆಕ್ಕತಿ ಬಿಡಂಗಿಲ್ಲ ನಾವು ಕುರ್ಚಿ' ಅಂತ ಚೋಟಾ ಬಾಂಬ್ ಹಾಕೇತಿ' ಅಂದ ಲಗಾಟಿ
'ಅಷ್ಟ ಅಲ್ಲs, ಈಗ ನಿಮ್ಮ ಪೀಠ ಬಿಡ್ರಿ ನಾನೇ ಸ್ವಾಮಿ ಆಕ್ಕಿನಿ ಕಾವಿ ಉಟ್ಕೊಂಡು ಅಂತನೂ ಸಹಕಾರಿ ಬೋಲ್ಯಾ' ಎಂದ ಬಾಶಾ
'ಏ ಆ ಸ್ವಾಮಿ ಕಡಿಂದ ಇವ್ರೇ ಇದ್ರs ಹಿಂಗಿಂಗ ಅನ್ನರಿ ಅಂತ ಹೇಳಸ್ಯಾರು ಅಂತನೂ ಅಂದತಿ' ಎಂದ ಗುಟ್ಕಾಕಿಂಗ್
'ಅದ್ಕs ಮರಿಬಂಡೆ ಗರಂ ಆಗೇತಿ, ಏ ಸಹಕಾರಿ ನೀ ಇನ್ನೊಮ್ಮೆ ಹ್ಯಾಂಗ ಆರ್ಸಿ ಬರ್ತಿ ನೋಡಾಮು ಅಂತ ಹೇಳೇತಿ ಅದು' ಎಂದ ಸ್ಪೀಡ ಬ್ರೇಕರ್
' ಅಲ್ಲ ಈಗ ತಾ ಬಕ್ಕಬಾರ್ಲೆ ಬಿದ್ದದ್ದು ನೆಪ್ಪ ಹಾರ್ಯಾನೇನು ಅಂವಾ?' ಎಂದ ಕಾಕಾ
'ಏ ಈಗ ಮತ್ತs ಚನ್ನಪಟ್ಣಕ್ಕ ರೇಡಿ ಆಗೇತಿ ಇದೇ ಗ್ಯಾಂಗ್' ಎಂದಳು ರಾಣಿ
'ಅಲ್ಲಿ ಹೃದಯವಂತನ ಹೆಣ್ತಿನ್ನ ತಂದು ನಿಂದರ್ಸಬೇಕಂತ ಮಾಡ್ಯಾನ ಕುಮ್ಮಣ್ಣ' ಎಂದ ಲಗಾಟಿ
'ಅಕಡೇ ಎಲೆಕ್ಷನ್ ಮಾಡ್ಕೊಂತ ಹೋಗು, ನನ್ನ ಕುರ್ಚಿ ತಂಟೆಕ್ಕ ಬರಬ್ಯಾಡಂತ ಅಂದತಿ ಬಂಡೆಕ್ಕ ಟಗರು' ಅಂದ ಟಕಳು
' ಅಂದ್ರs ಅಂವಾ ಕರ್ಚ ಮಾಡಾಂವಾ, ಇಂವಾ ಅದರ ಫಲ ಉಣ್ಣಾಂವ ಅಂದಂಗಾತು' ಅಂದ ಕಾಕಾ
'ಹಂ ಎಸ್ ಎಸ್, ಹೌದು ಎಂದ ಲಗಾಟಿ ಅಂದ, ಹಂ ಕೇಳಿರಿಲ್ಲೋ ಮೊನ್ನೆ ಒಬ್ಬಂವಾ ಟ್ರಕ್ ಡ್ರೈವರ್ ಗುಟ್ಕಾ ಬಾಯಾಗಿಂದು ಉಗುಳಬೇಕಂತ ತಲಿ ಹೊರಗೆ ಹಾಕ್ಯಾನ, ಎದುರಿಗಿ ಬಂದ ಇನ್ನೊಂದು ಟ್ರಕ್ನವಾ ಇವ್ನ ರುಂಡಾನೇ ಹೊಡ್ಕೊಂಡು ಹೋಗ್ಯಾನಂತ' ಅಂದ
'ಇವು ಅದ್ಕೆ ಗುಟ್ಕಾ ತಿನ್ನೂವುಕ ಹೇಳಿದರ ಎಲ್ಲಿ ಕೇಳ್ತಾವು?
ತಿಂದೇ ಸಾಯ್ತಿನಿ ಅಂತಾವು' ಅಂತ ಅಂದ ಗುಡುಮ್ಯಾ
'ಇನ್ನೊಬ್ಬ ಮಂತ್ರಿ ಭೂಪಾಲದಾಗ ಗಂಡಸರಿಗಿ ಮನ್ಯಾಗೆ ಕುಂತು ಕುಡಿರಿ, ಅಂದ್ರs ಅಲ್ಲಿ ನಿಮ್ಮ ಹೆಂಡ್ತಿ ಮಕ್ಕಳನ ನೋಡಿ ಕುಡಿಯೂದು ಬಿಡ್ತಿರಿ ಅಂತ ಹೇಳ್ಯಾನು' ಅಂದ ಲಗಾಟಿ
'ಎಂಥೆಂಥಾ ಐಡಿಯಾ ಬರ್ತಾವು ನೋಡ್ರಿ ಇವ್ರಿಗಿ, ಕುಡಕರ ಹೆಂಡ್ರು ಬಂದು ಲಗಾಸ್ತಾರ ಅವ್ನಿಗಿ' ಅಂದಳು ರಾಶಿ
'ಮೊದಲ ಮಳಿಗೆ ಅಯೋಧ್ಯಾ ಗುಡಿ ಮುಂದಿನ ರಸ್ತೆ ಢಮಾರ್ ಆಗೇತಂತ' ಕಾಕಾ ಹೇಳಿದ
'ಎದ್ನೊ ಬಿದ್ನೋ ಅಂತ ಜಲ್ದಿ ಜಲ್ದಿ ತರಾತುರಿಯಿಂದ ಕೆಲ್ಸ ಮಾಡಿ ವೋಟ ತಗೊಬೇಕನ್ನವರಿಗೆ ಮತ್ತs ಇನ್ನೇನು ಆಗಾಕ ಸಾಧ್ಯ ಹೇಳ್ರಿ?' ಎಂದಳು ರಾಣಿ
ತಮಿಳುನಾಡಿನ ಸ್ಟಾಲಿನ್' ಎಂದ ಕಾಳ್ಯಾ
'ಬೆಸ್ಟ್ ಕೆಲ್ಸ ಮಾಡ್ಯಾರಪಾ ಅವರಿಗೆ ಥ್ಯಾಂಕ್ಸ್, ನಮ್ಮಲ್ಲೂ ಮಾಡಬೇಕು ಇದ್ನ' ಎಂದಳು ರಾಣಿ
'ನಮ್ಮಲ್ಲಿ ಇನ್ನೂ ಜಾಸ್ತಿ ಕುಡಿಲಿ..... ಗ್ಯಾರಂಟಿಗೆ ರೊಕ್ಕ ಬರ್ಲಿ ಅಂತ ಅಂತಾರೊ ಯಪ್ಪಾ' ಅಂತ ನಕ್ಕ ಟಕಳು
'ಇನ್ನೊಂದು ರಾಯಬರೆಲಿಯೊಳಗೆ ನಡೆದ ಲಗ್ನದಾಗ ಬಿರ್ಯಾನಿಯೊಳಗ ಲೆಗ್ ಪೀಸ್ನೇ ಇಲ್ಲ ಅಂತ ಹೊಡದ್ಯಾಡಿ ಲಗ್ನನೇ ಕ್ಯಾನ್ಸಲ್ ಆಯ್ತಂತಪಾ!' ಎಂದ ಕಾಳ್ಯಾ
'ಅಬಬಬಾ! ಎಂಥಾ ಪರಿಸ್ಥಿತಿ ಬಂತು ನೋಡ್ರಿ, ಲೆಗ್ ಪೀಸ್ ಗೆ ಲಗ್ನ ಕ್ಯಾನ್ಸಲ್ ಮಾಡೂ ತಾಕತ್ ಅದ ಅಂದ್ರs, ಜನರಿಗೆ ದೇಶಾನೇ ಬದ್ಲಿ ಮಾಡುವ ಶಕ್ತಿ ಇರಂಗಿಲ್ಲೇನು?' ಅಂತ ಕಾಳ್ಯಾ ಅಂದಿದ್ದು ಕೇಳಿ ಎಲ್ಲಾ ಗಪ್ ಚುಪ್ ಆಗಿ ಬಿಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ