ಖಾರ ಮಸಾಲೆ: 'ಲಿಂಬೆ ಹಣ್ಣಿನಂಥಾ ಹುಡುಗಾ ಬಂದಾ ನೋಡು'

Upayuktha
0


-ಶ್ರೀನಿವಾಸ ಜಾಲವಾದಿ, ಸುರಪುರ


'ಲಂಬಿಹಣ್ಣ ಮನ್ಯಾಗ ಎಲ್ಲಾರೂ ಮುಗದರಲಾ?' ಮಲ್ಯಾ ಕೇಳಿದ

'ಎಲ್ಲಾರೂ ಕೋಟ೯, ಪೋಲೀಸ ಸ್ಟೇಶನ್ ಆಂಡ್ ಬೇಲ್' ಎಂದಳು ರಾಶಿ

'ಅಂವಾ ಇನ್ನೊಬ್ಬ ಉಳದಿದ್ದ ಅವ್ನೂ ತಂದಾರ ಈಗ ಬಯಲಿಗಿ!' ಮಲ್ಲಿ ಅಂದಳು

'ಯಾಂವ ಸೂರಪ್ಪ ಏನು?' ಕೇಳಿದ ಕತ್ತಲ್ಯಾ

'ಲಿಂಬೆಹಣ್ಣಿನಂತ ಹುಡುಗ ಬಂದಾ ನೋಡು ಅಂತ ಹಾಡಂಗ ಆಗೇತಿ' ಎಂದ ಗುಡುಮ್ಯಾ

'ಇಲ್ಲಿ ಲಿಂಗ ಸಮಾನತೆ ಐತಿ!' ಎಂದ ಲಗಾಟಿ


'ಅಂದ್ರs ಉಜ್ವಲದು ಬ್ಯಾರೇ, ಇಂವಾ ಸೂರಪ್ಪಂದು ಬ್ಯಾರೇ ಬ್ಯಾರೇ ಸೆಕ್ಷನ್ ಅದಾವು' ! ಎಂದ ಕತ್ತಲ್ಯಾ

'ಅಂದ್ರs ಲೇಡಿಜ ಆ್ಯಂಡ್ ಜೇಂಟ್ಸ ಅಂತ ಬ್ಯಾರೇ ರೀತಿ ವಿಂಗಡಣೆ ಮಾಡ್ಯಾರೇನು?' ಎಂದ ಗುಡುಮ್ಯಾ

'ಹಂ ಹೌಂದು, ಆದ್ರs ಲಿಂಬೆಹಣ್ಣಿನ ಶ್ರೀಮತಿದು ಎರಡು ಕೋಟಿ ಕಾರು ಎಲ್ಲೈತೆ ಈಗ?' ಅಂತ ಕೇಳಿದ ಲಗಾಟಿ

'ಅದ್ಯಾಕ ಈಗ? ಎಲ್ಲಾದಕ್ಕೂ ಕಾಲನೇ ಉತ್ತರ ಕೊಡತೈತಿ ಅಂತ ಲಿಂಬೆ ಉವಾಚ' ಎಂದ ಕತ್ತಲ್ಯಾ

'ಮತ್ತ ಈ ನೀಟ್ ಪಾಟ ಎಲ್ಲಾ ಬೋಗಸಂತ ಹೌದಾ?' ಎಂದ ಮಲ್ಯಾ

'ಅದನ್ನು ನಮ್ಮ ಧರ್ಮೇಂದ್ರ ಅವರಿಗೆ ಕೇಳಬೇಕು' ಎಂದಳು ರಾಶಿ


'ಮತ್ತs ನಮ್ಮ ಸಂಸ್ಕೃತಿ ಶಿವಣ್ಣ ಅಕೆಡೆಮಿ ಮೀಟಿಂಗ್ದ ಬಗ್ಗೆ ಸಮರ್ಥನೆ ಮಾಡ್ಕೊಂಡಾರಲಾ?' ಕೇಳ್ದ ಕೆತ್ತೆಬಿಜೆ ಕಾರಬಾರಿ

'ಹೌದು ಮತ್ತs 'ಕೈ' ನೇಮಕ ಮಾಡೇತಿ ಮತ್ತ ಅದರ ಬಾಸ್ ಎಲ್ಲಿ ಕರಿತಾರು ಅಲ್ಲಿ ಹೋಗ್ಬೇಕಾಕೈತಿ' ಎಂದ ಮಲ್ಯಾ

'ಹಂಗಂತs ಮೊದಲೇ ಬರಿಸಗೊಂಡ ಬಿಡಬೇಕು' ಅಂತು ಕೆತ್ತೆಬಿಜೆ

'ಚನ್ನಪಟ್ಣದ ಗೊಂಬೆ ಏನು ಶಕುನ ಹೇಳೇತಿ?' ಕಾರಬಾರಿ ಕೇಳ್ದ

'ಅದ್ನ ಲಿಂಬಿಹಣ್ಣಿಗಿ ಕೇಳ್ಬೇಕಂದ್ರs ಇನ್ನಾ ಅದೇ ಗದ್ಲದಾಗ ಐತಿ' ಎಂದಳು ರಾಣಿ

'ಈ ಎಲ್ಲಾ ಗದ್ಲದಾಗ ಟಿವಿ ಬಂದ ಮಾಡಿ ಎಲ್ಲಾರೂ ಯೋಗಾ ಮಾಡ್ರಿ ಆರೋಗ್ಯರೇ ಸುಧಾರಣೆ ಆಕೈತಿ ಅಂತ ಎಲ್ಲಾರೂ ಹೇಳಕತ್ತಾರ' ಎಂದ ಕೆತ್ತೆಬಿಜಿ


'ಮತ್ತs ಟಿವ್ಯಾಗ ನೋಡೇ ಮಾಡ್ಬೇಕಲ ಅದ್ನೆ ಬಂದ್ ಮಾಡ್ತಿದ್ರs ಹ್ಯಾಂಗ?' ಅಂದ ಲಗಾಟಿ

'ಅದನ್ನ ಚಾಲೂ ಮಾಡಿದ್ರs 'ಅದರ' ಕಾಟ, ಬಂದ ಮಾಡಿದ್ರs ನಿನ್ನ ಕಾಟ' ಎಂದ ಕೆತ್ತೆಬಿಜಿ

'ಹಂಗಾರ ಎಲ್ಲಾರೂ ಸೇರಿ ಲಗಾಟಿ ಹೊಡದ್ರಾತು' ಅಂದ ಗುಡುಮ್ಯಾ

ಇದ್ಕ ಎಲ್ಲಾರೂ ಜೋರಾಗಿ ನಕ್ಕು ಲಿಂಬಿಹಣ್ಣು ತರಲು ಹೋಗಬೇಕನ್ನುದಕ್ಕ.....


'ಏ ಅಂತೂ ಇಂತೂ ಡಿಸೆಂಬರ್ದಾಗ ಮಂಡ್ಯ ಸಾಹಿತ್ಯ ಸಮ್ಮೇಳನ ಅಂತ ಟಗರು ಡಿಸೈಡ್ ಮಾಡೇತ್ರಲೇ!' ಅಂತ ಕತ್ತಲ್ಯಾ ಜೋರಾಗಿ ಒದರಿದ

'ಇನ್ನಾ ಝಪಿ ಟಿಪಿ ಎಲೆಕ್ಷನ್ ಅದಾವು, ಅದರಾಗ ಏನಾಕೈತಿ ನೋಡ್ಕೊಂಡ ಸಮ್ಮೇಳನ ಮಾಡತಾರ ತಗೋ' ಎಂದ ಗುಡುಮ್ಯಾ

'ಅಷ್ಟೊತ್ತಿಗೆ ನಾಲ್ಕೈದು ಡಿಸಿಎಂ ಬಂದಿರ್ತಾರು ಮತ್ತ ಅವರಿಗೂ ಕೇಳ್ಬೇಕಲಾ?' ಎಂದು ನಕ್ಕ ಲಗಾಟಿ

'ಸಮ್ಮೇಳನದ ಅಧ್ಯಕ್ಷರನ್ನು ಸರ್ಕಾರನೇ ಆಯ್ಕೆ ಮಾಡ್ತದಂತs!' ಎಂದ ಕುಳುಮ್ಯಾ


'ಅಂದ್ರs ಆ ಜಮೀರನ್ನ ಮಾಡಿದರ ನಡಿತದಲಾ?' ಎಂದ ಲಗಾಟಿ

'ಏ ಅದಕ್ಕs ಟಗರ ಬಂಡೆ 'ಹೂಂ' ಅನ್ಬೇಕಲಾ?' ಅಂದಳು ರಾಣಿ

'ಟಗರ ಇದ್ರs ರಾಜಣ್ಣನ್ನ ಇಲ್ಲಾಂದ್ರs ಭೈರತಿನ್ನ ಮಾಡ್ರಿ ಅಂತ ಹೇಳ್ಬಹುದs, ಬಂಡೆ ಇದ್ರs ನಮ್ಮ ಸುರೇಶನ್ನ ಮಾಡ್ರಿ ನಡಿತೈತಿ ಅಂತ ಅಂದ್ರೂ ಅನಬಹುದು!' ಎಂದಳು ರಾಶಿ


'ಅಲ್ಲಾ ಇದಕ್ಕ' ಮಜೋ 'ಒಪ್ಪತಾರೇನು?' ಕೇಳಿದ ಕಾಕಾ

'ಯಾವ ಮಜೋ ನ್ನ ಕೇಳಿ ಇಲ್ಲಿ ಮಾಡಂಗಿಲ್ಲ, ನಮ್ಮ 'ಗ್ಯಾರಂಟಿ' ಇದು ಐತಿ, ಮಾಡ್ಬೇಕು ಇಲ್ಲಾ ನೋ ಸಮ್ಮೇಳನ!' ಅಂತ ಹೇಳಿದರೂ ಆಶ್ಚರ್ಯ ಇಲ್ಲ ಬಿಡು' ಎಂದ ಕಾಳ್ಯಾ


'ವಿಶ್ವನಾಥ ಮತ್ತs ಹೊಳ್ಳಿ ಈಗ ಟಗರಿಗಿ ತಿರಿಗಿ ಬಿದ್ದಾರಲಾ? ಅದ್ಕs ವಿಶ್ವಗ ಮಾಡಿ 'ನಾತ' ಬರಲಾರದಂಗ ಮಾಡ್ಬಹುದು' ಎಂದ ರಬಡ್ಯಾ

'ಈ ಸಮ್ಮೇಳನದಾಗ 'ಪೆನ್ಡ್ರೈವ್ ಹಾಗೂ ಅದರ ವಿವಿಧ ಉಪಯೋಗಗಳು' ಮತ್ತs 'ದೇವರ 'ದರ್ಶನ'ವು ತುಂಬಾ 'ಪವಿತ್ರ' ಎಂಬ ಗೋಷ್ಠಿ ಇಟ್ಟು, ಅದರ ಬಗ್ಗೆ ಸಂವಾದ ಕಾರ್ಯಕ್ರಮ ಇಡಬೇಕು' ಎಂದು ಟಾಂಟ್ ಹೊಡ್ಡ ಕಾಳ್ಯಾ


'ಮದುವೆ ಮತ್ತು ವಿಚ್ಛೇದನಗಳು ಒಂದೇ ದಿನ ಆದರೆ ಹೇಗೆ?' ಅಂತನೂ ಒಂದ ಗೋಷ್ಠಿ ಇರಲಿ' ಎಂದ ಗುಡುಮ್ಯಾ

'ಇದರ ಸಂವಾದಕ್ಕ'ನಿ' ವೇದಿ 'ತಾ' ಆ್ಯಂಡ್ 'ಚಂ' ದನ ಅವರನ್ನು ಸ್ಪೇಶಿಯಲ್ ಗೆಸ್ಟ್ ಅಂತ ಆಮಂತ್ರಿಸಬೇಕು' ಎಂದ ಲಗಾಟಿ

'ಚನ್ನ' ಪಟ್ಟಣದ ಸೋದರರು ಹಾಗೂ ಕುಮ್ಮಣ್ಣನ ಯೋಗಿ' ಅಂತ ಒಂದು ವಿಷಯನೂ ಇರಲಿ' ಎಂದ ಕಾಕಾ

'ಹಂಗೇ, ಡಿಸಿಎಂ ಎಷ್ಟಿರಬೇಕು? ಹಾಗೂ ಟಗರಿಗೆ ಸ್ವಾಮಿಜಿ ಮಾಡಿದ ಪ್ರಾರ್ಥನೆ ಏನು?' ಅಂತ ಈ ವಿಷಯದ ಬಗ್ಗೆ ಕಾಲೇಜು ವಿದಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಫಸ್ಟ್ ಪ್ರೈಜ್ ಪಡೆದವರನ್ನ ಎಂಎಲ್ಸಿಯಾಗಿ ನಾಮಿನೇಟ್ ಮಾಡಬೇಕು' ಎಂದ ಕಾಳ್ಯಾ


'ಹಂಗಿದ್ರs ನಾ ಪ್ರಬಂಧ ಬರೀತಿನಿ, ಯಾರಿಗೆರೆ ಹಿಡ್ಡು ಫಸ್ಟ್ ಪ್ರೈಜ್ ತಗತಿನಿ' ಎಂದ ಟಕಳು

'ಏ ಮತ್ತs ಇದೊಂದು ದೊಡ್ಡ ಹಗರಣ ಆಗಿ, ಮತ್ತ ಎಸ್ಐಟಿಗರೇ ಇಲ್ಲಾ ಸಿಐಡಿಗಿ ಕೊಡ್ಬೇಕಾಕೈತಿ ನೋಡು' ಎಂದು ರಾಣಿ ನಕ್ಕಳು

'ಆಗ್ಲಿ ಈಗ ನಡದೈತಲಾ ನಿಗಮದ ತನಿಖೆ ಹಂಗ ನಡಿಲಿ ತೊಗೊ' ಎಂದ ಕಾಕಾ

'ಇಲ್ಲಿ ಎಲ್ಲಾ ಹೊಡದ್ಯಾಡಿದವ್ರು ದಿಲ್ಯಾಗ ಎಂಪಿಗಳ ಮೀಟಿಂಗ್ದಾಗ ಎಲ್ಲಾ ಒಬ್ರಿಗೊಬ್ರು ಅಪ್ಗೊಂಡಾರಂತಲಾ?' ಎಂದ ಗುಂಡ್ಯಾ

'ಅವರೆಲ್ಲಾ ಒಂದೇ ಇರ್ತಾರು, ಇವ್ರು ಇಲ್ಲಿ ಕಾರ್ಯಕರ್ತರು ಹಳ್ಳ್ಯಾಗ ಬಡಿದಾಡಿ ಸಾಯ್ತಾರು' ಎಂದ ಕಾಕಾ


'ಅಂದ್ರs ಅಭೀ ಪಿಚ್ಚರ್ ಬಾಕಿ ಹೈ!' ಅಂದಂಗಾತು ಎಂದ ಗಲಾಟಿ

'ಮತ್ತs ಮಂಡ್ಯದಾಗ ಸಾಹಿತ್ಯ ಸಮ್ಮೇಳನ 'ಕೈ' ಕಛೇರಿಯಾಗ ಮಾಡ್ರಿ ಅಂತ ಬಂಡೆ ಹೇಳಿದ್ರs ಆಗ ಏನ್ಮಾಡ್ತಿರಿ?' ಅಂತ ಕತ್ತಲ್ಯಾ ಸಹಸ್ರಮಾನದ ಪ್ರಶ್ನೆ ಒಗೆದ

ಅದನ್ನ ಕೇಳಿ ಎಲ್ಲಾ ಗಪ್ ಚುಪ್ ಆಗಿ ಮನಿಗಿ ಹೋದರು



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top