ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿಬಿಎ ವಿಭಾಗದ 2021 ರ ಬ್ಯಾಚ್ ವಿದ್ಯಾರ್ಥಿಗಳಿಗೆ ವಿದಾಯ ಕಾರ್ಯಕ್ರಮ "ಚೀರಿಯೊ" ವಿವಿ ಕ್ಯಾಂಪಸ್ ನಲ್ಲಿ ಇತ್ತೀಚೆಗೆ ನಡೆಯಿತು.
ಐಎಂಸಿಯ ಸಂಶೋಧನಾ ಸಂಯೋಜಕಿ ಡಾ. ಶೈಲಶ್ರೀ ವಿ.ಟಿ. ಸಭಿಕರನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ವೇದಿಕೆಯ ಮೇಲೆ ಮತ್ತು ಹೊರಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
2021ರ ಬ್ಯಾಚ್‌ನ ಪ್ರತಿ ವಿದ್ಯಾರ್ಥಿಗೆ ಕಾಲೇಜಿನ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ನೃತ್ಯ, ಹಾಡುಗಾರಿಕೆ ಮತ್ತು ವಿವಿಧ ಆಕರ್ಷಕ ಆಟಗಳನ್ನು ಆಯೋಜಿಸಲಾಗಿತ್ತು.
ನಿರ್ವಹಣೆ ಮತ್ತು ವಾಣಿಜ್ಯ ಸಂಸ್ಥೆಯ ಡೀನ್ ಡಾ. ವೆಂಕಟೇಶ್ ಅಮೀನ್ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ಬಿಬಿಎ ವಿಭಾಗದ ಮುಖ್ಯಸ್ಥೆ ಪ್ರೊ. ಶಿಲ್ಪಾ ಕೆ, ಬಿಬಿಎ ವಿಭಾಗದ ಕೋರ್ಸ್ ಸಂಯೋಜಕರಾದ ಪ್ರೊ. ಶ್ವೇತಾ ಎನ್ ಎಸ್, ಸಾಂಸ್ಕೃತಿಕ ಸಂಚಾಲಕರಾದ ಪ್ರೊ. ಅರ್ಚನಾ ಎಸ್ ಮತ್ತು ಪ್ರೊ. ಪ್ರತಿಜ್ಞಾ, ಎಲ್ಲಾ ಅಧ್ಯಾಪಕರು ಸಹಕರಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ