ಕಲಬುರ್ಗಿಗೆ ಕಾಲಿಟ್ಟ "ಹರ್ಮನ್ ಚಹಾವಾಲಾ"

Upayuktha
0

 ಚಹಾ ಪ್ರಿಯರಿಗೆ ಉತ್ತಮ ಕೊಡುಗೆ ಕೆಕೆಆರ್ ಡಿಬಿ ಉಪ ಕಾರ್ಯದರ್ಶಿ ಪ್ರಮೀಳಾ ಆಶಯ



ಕಲಬುರ್ಗಿ: ಚಹಾ ಉದ್ಯಮ ರಂಗದಲ್ಲಿ ಹೆಸರಾಂತ "ಹರ್ಮನ್ ಚಹಾವಾಲಾ" ಬ್ರಾಂಡ್ ನ ಚಹಾ ಮಳಿಗೆ ಕಲ್ಬುರ್ಗಿಯ ಎಸ್. ಎಂ ಪಂಡಿತ್ ರಂಗಮಂದಿರದ ಸಮೀಪ ಇಂದು ಶುಕ್ರವಾರ ಶುಭ ಆರಂಭಗೊಳ್ಳುವುದರೊಂದಿಗೆ ಚಹಾ ಪ್ರಿಯರಿಗೆ ಸಂತಸ ತಂದಿದೆ. 


ಕಲ್ಬುರ್ಗಿಯಲ್ಲಿ ನೂತನ "ಹರ್ಮನ್ ಚಹಾ ವಾಲಾ " ಅಂಗಡಿಯನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಎಂ.ಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಚಹಾ ಪ್ರಿಯರ ಸಂಖ್ಯೆಯು ದಿನದಿಂದ ದಿನಕ್ಕೆ ಗಣನೀಯವಾಗಿ ವೃದ್ಧಿಯಾಗುತ್ತಿದ್ದು ಹರ್ಮನ್ ಚಹಾವಾಲಾ ಕಲ್ಬುರ್ಗಿಗೆ ಕಾಲಿಡುವಂತೆ ಮಾಡಿ ಶುಚಿ ಮತ್ತು ರುಚಿಯಾದ ವಾತಾವರಣದಲ್ಲಿ ಚಹಾ ಮಳಿಗೆ ಆರಂಭಿಸಿ ಚಹಾ ಉದ್ಯಮ ರಂಗಕ್ಕೆ ಹೊಸ ಆಯಮ ನೀಡಿದ್ದಾರೆ. 


ಚಹಾವು ಪ್ರೀತಿಯನ್ನು ಹಂಚಿಕೊಳ್ಳಲು ಬಾಂಧವ್ಯವನ್ನು ವೃದ್ಧಿಸಲು ಒಂದು ಆಪ್ತ ಪಾನೀಯವಾಗಿದ್ದು ಹರ್ಮನ್ ಚಹಾವಾಲಾ ಕಲ್ಬುರ್ಗಿಯ ಚಹಾಪ್ರಿಯರ ಮನ ತಣಿಸಲಿ ಹಾಗೂ ಚಹಾ ಉದ್ಯಮ ರಂಗ ಬೆಳೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಕಾರ್ಪೊರೇಟರ್ ಹಾಗೂ ಸಮಾಜ ಸೇವಕರಾದ ಉಮೇಶ್ ಶೆಟ್ಟಿ ಮಾತನಾಡಿ ಚಹಾ ಮಳಿಗೆಯನ್ನು ಪ್ರಾರಂಭ ಮಾಡುವುದರೊಂದಿಗೆ ಮೆಹ್ತಾ ಬಳಗದವರು ಪ್ರೀತಿಯನ್ನು ಹಂಚಿಕೊಂಡಿದ್ದಾರೆ.


ಚಹಾ ಒಂದು ಬಾಂಧವ್ಯ ಸೃಷ್ಟಿಯ ಮತ್ತು ಹರ್ಮನ್ ಚಹಾವಾಲಾ ಕಲ್ಬುರ್ಗಿಗೆ ಕಾಲಿಟ್ಟು ಉತ್ತಮ ಕಾರ್ಯ ಆರಂಭಗೊಂಡಂತಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮಾತನಾಡಿ ಹರ್ಮನ್ ಚಹಾ ವಾಲಾ ಚಹಾ ಉದ್ಯಮ ರಂಗದಲ್ಲಿ ಹೆಸರು ಹೊಂದಿದ್ದು ಕಲ್ಬುರ್ಗಿಯಲ್ಲಿ ಮಳಿಗೆ ಪ್ರಾರಂಭವಾಗುವುದರೊಂದಿಗೆ ಇಲ್ಲಿ "ಚಾಯ್ ಪೆ ಚರ್ಚೆ"ಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಪ್ರೀತಿ ವಿಶ್ವಾಸ ತುಂಬುವ ಸ್ವಾದಿಷ್ಟ ಹರ್ಮನ್ ಚಹಾಕ್ಕೆ ಚಹಾ ಪ್ರಿಯರು ಸ್ಪಂದಿಸಲಿ. ಮುಂದಿನ ದಿನಗಳಲ್ಲಿ ಕಲ್ಬುರ್ಗಿ ವಿಮಾನ ನಿಲ್ದಾಣ ಕೆ ಕೆ ಆರ್ ಟಿ ಸಿ ಬಸ್ ನಿಲ್ದಾಣಗಳಲ್ಲಿ ನೂತನ ಮಳಿಗೆ ಪ್ರಾರಂಭಿಸುವಂತಾಗಲಿ ಎಂದು ಶುಭ ಹಾರೈಸಿದರು. 


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಸಾರಂಗ್ ಮೆಹ್ತಾ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಮೇಘ ಮೆಹ್ತಾ, ರಜನಿ ಮೆಹ್ತಾ, ಅಕ್ಷತಾ ಮೆಹ್ತಾ, ರಿಷಬ್ ಮೆಹ್ತಾ, ಪ್ರಮೋದ್ ಪೆದ್ದರ್ ಪೇಟ, ಅಯೂಬ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Advt Slider:
To Top