ನಿತ್ಯ ಬಳಕೆಯಾದಾಗ ಭಾಷೆ ಜೀವಂತ: ರಮ್ಯಾ ಜೋಶಿ

Upayuktha
0


ಉಜಿರೆ: ಯಾವುದೇ ಭಾಷೆ ಜೀವಂತವಾಗಿರಬೇಕಾದರೆ ಅದು ಪ್ರತಿನಿತ್ಯ ಬಳಕೆಯಾಗುವುದು ಅಗತ್ಯ ಎಂದು ಬೆಳ್ತಂಗಡಿಯ ವಾಣಿ ಪಿಯು ಕಾಲೇಜಿನ ಹಿಂದಿ ಉಪನ್ಯಾಸಕಿ ರಮ್ಯಾ ಜೋಶಿ ಅಭಿಪ್ರಾಯಪಟ್ಟರು.


ಉಜಿರೆಯ ಶ್ರೀ ಧ.ಮಂ. ಕಾಲೇಜಿನಲ್ಲಿ ಜು.25 ರಂದು ಅವರು ಹಿಂದಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.


ಭಾರತದ ಎಲ್ಲ ಭಾಷೆಗಳು ನದಿಗಳಿದ್ದಂತೆ. ಆದರೆ ಹಿಂದಿ ಭಾಷೆ ಮಹಾನದಿ. ಅದು ಕೇವಲ ಅನುವಾದದ ಭಾಷೆಯಲ್ಲ; ಸಂವಾದದ ಭಾಷೆ. ನಿತ್ಯ ಜೀವನದಲ್ಲಿ ಹಿಂದಿ ಬಳಕೆ ಮಾಡಬೇಕು ಎಂದು ಅವರು ಹೇಳಿದರು.


ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್ ಸಹಿತ ವಿವಿಧ ಭಾಷಾ ಸಂಘಗಳು ಆಯಾ ಭಾಷೆ ಕುರಿತು ಪ್ರಸಾರ, ಪ್ರಚಾರ ನಡೆಸುತ್ತವೆ. ಅದೇ ರೀತಿ ಹಿಂದಿ ಸಂಘದ ವಿದ್ಯಾರ್ಥಿಗಳೂ ಸಂಘದ ಕಾರ್ಯಕ್ರಮಗಳಲ್ಲಿ ಏಕತೆಯಿಂದ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಉತ್ತೇಜಿಸುವುದೇ ವಿವಿಧ ಸಂಘಗಳ ಮುಖ್ಯ ಉದ್ದೇಶವಾಗಿದೆ ಎಂದರು.


ಸಂಘದ ನೂತನ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು. ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಲಾಯಿತು.


ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರುತಿ ಸ್ವಾಗತಿಸಿದರು. ಇಂಚರ ವಂದಿಸಿ, ದಾರಿಣಿ ನಿರೂಪಿಸಿದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top