ಮಂಗಳೂರು: ಮಹೀಂದ್ರಾದ ಟ್ರಕ್ ಮತ್ತು ಬಸ್ ವಿಭಾಗವು (ಎಂಟಿಬಿಡಿ) 4 ವರ್ಷಗಳ ನಂತರ 2024ರ ಆರ್ಥಿಕ ವರ್ಷದಲ್ಲಿ ಉದ್ಯಮ ವ್ಯವಹಾರದ ಗಾತ್ರದಲ್ಲಿ ಬಲಿಷ್ಠವಾದ 46% ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸಿದೆ. ಇದರಿಂದ ಉತ್ತೇಜಿತವಾದ ಕಂಪನಿಯು ಜುಲೈ ತಿಂಗಳಲ್ಲಿ ಅತ್ಯಾಧುನಿಕ ಮತ್ತು ಸುಸಜ್ಜಿತ 5 ಡೀಲರ್‌ಶಿಪ್‌ಗಳನ್ನು ಭಾರತದ 4 ರಾಜ್ಯಗಳಲ್ಲಿ ಆರಂಭಿಸಿದೆ.
ಈ ಡೀಲರ್‌ಶಿಪ್‌ಗಳಲ್ಲಿ 37 ಸೇವಾ ವಿಭಾಗಗಳು ಸೇರ್ಪಡೆಯಾಗಿವೆ. ಈ ಸೇವಾ ವಿಭಾಗಗಳು ಪ್ರತಿದಿನ 75ಕ್ಕಿಂತ ಹೆಚ್ಚಿನ ವಾಹನಗಳಿಗೆ ಸೇವೆ ಒದಗಿಸುತ್ತವೆ. ಇದಲ್ಲದೆ, ಚಾಲಕರಿಗೆ ವಸತಿ ಸೌಲಭ್ಯ, 24 ತಾಸುಗಳ ರಸ್ತೆ ಬದಿ (ಬ್ರೇಕ್|ಡೌನ್) ಸಹಾಯ ಮತ್ತು ಡೀಸೆಲ್ ನಿಷ್ಕಾಸ ದ್ರವ ಲಭ್ಯತೆಯನ್ನು ಒದಗಿಸುತ್ತವೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ನ ವಾಣಿಜ್ಯ ವಾಹನಗಳ ವಿಭಾಗದ ವಹಿವಾಟು ಮುಖ್ಯಸ್ಥ ಜಲಜ್ ಗುಪ್ತಾ ಹೇಳಿದ್ದಾರೆ.
ಮಹೀಂದ್ರಾ ಬ್ಲೇಝೊ ಎಕ್ಸ್, ಫ್ಯೂರಿಯೊ, ಆಪ್ಟಿಮೊ ಮತ್ತು ಜಯೊ ಭಾರತದಲ್ಲಿರುವ ಏಕೈಕ ಸಿವಿ ಟ್ರಕ್ ಶ್ರೇಣಿಗಳಾಗಿವೆ. ಇದು ಅತ್ಯುತ್ತಮ ದರ್ಜೆಯ ಇಂಧನ ದಕ್ಷತೆ ಸೇರಿದಂತೆ ಡಬಲ್ ಸೇವಾ ಖಾತರಿಗಳನ್ನು ನೀಡುತ್ತದೆ. ಎಂಟಿಬಿಡಿ 48 ತಾಸುಗಳಲ್ಲಿ ರಸ್ತೆಯಲ್ಲೇ ಟ್ರಕ್ ಅನ್ನು ಹಿಂಪಡೆಯುವ ಮೂಲಕ, ತನ್ನ ರಸ್ತೆ ಬದಿ (ಬ್ರೇಕ್‌ಡೌನ್) ಸೇವಾ ಸಮಯವನ್ನು ಖಾತರಿಪಡಿಸಿದೆ. ಈ ಸೇವೆ ಒದಗಿಸದಿದ್ದರೆ ಕಂಪನಿಯು ಗ್ರಾಹಕರಿಗೆ ದಿನಕ್ಕೆ 1000ರೂ. ಪಾವತಿಸುತ್ತದೆ.
ಹೆಚ್ಚುವರಿಯಾಗಿ, 36 ಗಂಟೆಗಳಲ್ಲಿ "ವಾಹನದ ಪುನಶ್ಚೇತನ ಖಾತರಿ ಯೋಜನೆ"ಯಡಿ, ಡೀಲರ್ ವರ್ಕ್ಶಾಪ್ ಅಥವಾ ಕಂಪನಿಯು ವಾಹನ ಮಾಲಿಕರಿಗೆ ದಿನಕ್ಕೆ 3000 ರೂ. ಪಾವತಿಸುತ್ತದೆ. ನಿರಂತರವಾಗಿ ಉತ್ಪನ್ನಗಳ ನಾವೀನ್ಯತೆ ಮತ್ತು ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಎಂಟಿಬಿಡಿಯ ಪ್ರಮುಖ ಧ್ಯೇಯವಾಗಿದೆ. ಈ ಧ್ಯೇಯವೇ ಈ ಎಲ್ಲಾ ಖಾತರಿಗಳನ್ನು ಒದಗಿಸಲು ಸಾಧ್ಯವಾಗಿಸಿದೆ ಎಂದು ವಿವರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ