ಮಾತಾ ಅಮೃತಾನಂದಮಯಿ ಮಠದಿಂದ ಗುರು ಪೂರ್ಣಿಮಾ ಉತ್ಸವ

Upayuktha
0


ಮಂಗಳೂರು: ಗುರುಪೂರ್ಣಿಮೆಯು ವ್ಯಕ್ತಿಯೊಳಗಿನ ದೋಷಗಳನ್ನೆಲ್ಲ ಪರಿಹರಿಸಿ ಆತನನ್ನು ಸ್ವಯಂಪೂರ್ಣ ಮತ್ತು ಸರ್ವಾಂಗೀಣ ವ್ಯಕ್ತಿಯಾಗಿ ರೂಪಿಸುವ ದಿವ್ಯದಿನವಾಗಿದೆ. ಗುರು ಮತ್ತು ಗುರಿ ಎರಡೂ ಆತನನ್ನು ಗೊಂದಲರಹಿತನನ್ನಾಗಿ ಮಾಡುತ್ತದೆ ಎಂದು ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಹೇಳಿದರು.


ನಗರದ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಜುಲೈ21 ರಂದು ಭಾನುವಾರ ಗುರು ಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಮಠದ ಮುಖ್ಯಸ್ಥರಾದ ಸಂಪೂಜ್ಯ ಸ್ವಾಮಿನಿ ಮಂಗಳಾಮೃತ ಪ್ರಾಣರವರು ಆಶೀರ್ವಚನವಿತ್ತು ಇಂದು ಶಾಂತಿ, ಸಮಾಧಾನ ಮತ್ತು ತೃಪ್ತಿಯ ಬದುಕನ್ನು ಬಾಳಬೇಕಾದ ಅಗತ್ಯವಿದೆ. ಇಂದಿನ ಬದುಕಿನ ಅವಶ್ಯಕತೆಯನ್ನು ಮನಗಂಡು ಗುರು ಪೂರ್ಣಿಮೆಯನ್ನು ರೂಪಿಸಿದಂತಿದೆ ಎಂದರು. 


ಕಾರ್ಯಕ್ರಮದ ಅಂಗವಾಗಿ ಶ್ರೀಗುರು ಪಾದುಕಾ ಪೂಜೆ, ದೇವೀಪೂಜೆ, ಸರ್ವೈಶ್ವರ್ಯ ಪೂಜೆ,  ಆರತಿ, ಭಕ್ತರಿಂದ ಕ್ಷೀರಾಭಿಷೇಕ, ಪ್ರಸಾದ ವಿತರಣೆ ಹಾಗೂ ಮಹಾ ಪ್ರಸಾದ ವಿತರಣೆ ಜರುಗಿತು.


ಗುರು ಪೂರ್ಣಿಮಾ ದಿನದ ಶುಭ ಸಂದರ್ಭದಲ್ಲಿ ಭಾಗವಹಿಸಿದ ಭಕ್ತರ ಹಾಗೂ ಸಮಾಜದ ಸ್ವಾಸ್ಥ್ಯ ಸಂರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪೂರ್ವಾಹ್ನ ಬೋಳೂರಿನ  ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಗುರು ಹೋಮ ಮತ್ತು ಮಹಾ ಮೃತ್ಯುಂಜಯ ಹೋಮ ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಲಕ್ಷ್ಮಣ ಅಮೀನ್ ಮತ್ತು ಪದಾಧಿಕಾರಿಗಳು, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪೂರ್ವಾಧ್ಯಕ್ಷ ಡಾ. ಜೀವರಾಜ್ ಸೊರಕೆ, ಅಧ್ಯಕ್ಷ ಡಾ. ವಸಂತಕುಮಾರ ಪೆರ್ಲ, ಉಪಾಧ್ಯಕ್ಷ ಸುರೇಶ್ ಅಮೀನ್, ಕಾರ್ಯದರ್ಶಿ ಡಾ. ಕೆ. ಅಶೋಕ್ ಶೆಣೈ, ಯುವಘಟಕ ಆಯುಧ್ ನ ಪದಾಧಿಕಾರಿಗಳು, ಉಡುಪಿ- ಕುಂದಾಪುರ ಘಟಕಗಳ ಪದಾಧಿಕಾರಿಗಳು, ಸದಸ್ಯರು, ಅಮ್ಮನ ಭಕ್ತರು, ವಿವಿಧ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top