ಹಾಸನ: ನಗರಸಭೆ ವತಿಯಿಂದ ಎಲ್ಲಾ ವಾರ್ಡ್‌ಗಳಲ್ಲಿ ನಾಮಫಲಕ ಅಳವಡಿಸುವಂತೆ ಚನ್ನರಾಯಪಟ್ಟಣ ತಾಲ್ಲೂಕು 23 ವಾರ್ಡ್‌ಗಳಿಗೂ ನಾಮಫಲಕ ರಸ್ತೆ ಹೆಸರು ವಾರ್ಡ್ ನಂಬರ್, ಬೋರ್ಡ್ ಅಳವಡಿಸುವಂತೆ ಸಾರ್ವಜನಿಕವಾಗಿ ಮನವಿ ಸಲ್ಲಿಸಲಾಯಿತು.
ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್ಗಳಲ್ಲಿ ಹೆಸರು ಮತ್ತು ವಾರ್ಡ್ ನಂಬರ್ ತಿಳಿಸುವ ಯಾವುದೇ ಇರುವುದಿಲ್ಲ. ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುವ ಪುರಸಭೆಗೆ ಅರ್ಥವಾಗದ ವಿಷಯವೇನಲ್ಲ. ಪ್ರತಿನಿತ್ಯ ಸಾವಿರಾರು ಮಂದಿ ಚನ್ನರಾಯಪಟ್ಟಣಕ್ಕೆ ವ್ಯಾಪಾರ ವಹಿವಾಟು ಇತರೆ ಕೆಲಸ ಕಾರ್ಯಗಳಿಗೆ ಆಗಮಿಸುತ್ತಾರೆ. ಅವರಿಗೆ ಬೇಕಾದ ವಿಳಾಸ ಹುಡುಕಲು ಪರದಾಡುತ್ತಾರೆ. ಹಾಲಿ ವಾಸ ಇರುವ ನಿವಾಸಿಗಳಿಗೆ ಬಹುತೇಕ ಯಾವ ವಾರ್ಡಿನಲ್ಲಿ ಇದ್ದೇವೆ ಎಂಬುದು ಅವು ಯಾವ ರಸ್ತೆಯಲ್ಲಿ ಇದ್ದೇವೆ ಎಂಬುದು ತಿಳಿಯದೆ ಗೊಂದಲದ ಗೂಡಾಗಿದೆ. ಪಟ್ಟಣದ ಕೆಲವೊಂದು ರಸ್ತೆ ಮತ್ತು ವಾರ್ಡ್ಗಳಲ್ಲಿ ಮತ್ತು ರಸ್ತೆಗಳಲ್ಲಿ ವಾರ್ಡ್ ಹೆಸರು ತಿಳಿಸುವ ಫಲಕವೂ ಇರುವುದಿಲ್ಲ.
ಆದಷ್ಟು ಬೇಗ ಅಧಿಕಾರಿಗಳು ಇದರ ಬಗ್ಗೆ ಅತಿ ಶೀಘ್ರದಲ್ಲಿ ನಾಮಫಲಕ ಅಳವಡಿಸಬೇಕು. ವರ್ಷಗಳ ಹಿಂದೆ ಪಟ್ಟಣದ ಅದ್ಯಂತ ಎಲ್ಲಾ ವಾರ್ಡ್ ಮತ್ತು ರಸ್ತೆಗಳಲ್ಲಿ ಅಳವಡಿಸಿದ್ದಂತಹ ಕಾಂಕ್ರೀಟ್ ರಸ್ತೆ ಮತ್ತು ಕಾಮಗಾರಿಗಳ ಹೊಡೆತಕ್ಕೆ ನಶಿಸಿಹೋಗಿದೆ. ಆದುದರಿಂದ ಪುರಸಭಾ ಅಧಿಕಾರಿಗಳು ಇದರ ಬಗ್ಗೆ ಖುದ್ದಾಗಿ ಶೀಘ್ರದಲ್ಲೇ ನಾಮಫಲಕ ಅಳವಡಿಸಬೇಕು. ಇದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಸಂಬಂಧ ವಿವಿಧ ಸಂಘಟನೆಗಳ ಮುಖಂಡರು ಪುರಸಭೆ ಮುಖ್ಯ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
-ವರುಣ್ ಚಕ್ರವರ್ತಿ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ