ಬಜೆಟ್ ವಿಶ್ಲೇಷಣೆ ಒಂದು ರೀತಿಯ ವೈಜ್ಞಾನಿಕ ಪ್ರಕ್ರಿಯೆ: ಡಾ. ಶ್ರೀನಿವಾಸ ಮೂರ್ತಿ

Upayuktha
0


ಶಿವಮೊಗ್ಗ: ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ‘ಕೌಟಿಲ್ಯ ವೇದಿಕೆ’ ಹಾಗೂ ವಾಣಿಜ್ಯ ವಿಭಾಗದ ಸಹಯೋಗದಲ್ಲಿ ‘ಬಜೆಟ್ 2024 ರ ವಿಶ್ಲೇಷಣೆ’ ಎಂಬ ವಿಶೇಷ ಉಪನ್ಯಾಸವನ್ನು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿತ್ತು. ಈ ಉಪನ್ಯಾಸಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಜೆಎನ್ ಎನ್ ಸಿ ಇ ಕಾಲೇಜಿನ ನಿರ್ವಹಣಾ ವಿಭಾಗದ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ಮೂರ್ತಿಯವರು ಬಜೆಟ್ ವಿಶ್ಲೇಷಣೆ ಎಂಬುದು ಒಂದು ವೈಜ್ಞಾನಿಕ ಪ್ರಕ್ರಿಯೆ ಎಂದು ಹೇಳಿದರು. ಕೇಂದ್ರ ಸರ್ಕಾರ ಮಂಡಿಸಿದ 2024 ರ ಬಜೆಟ್‌ನ ಸೂಕ್ಷ್ಮ ಅಂಶಗಳ ವಿಶ್ಲೇಷಣೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು "ಭಾರತದ ಬಜೆಟ್ ಭಾರತದ ಸರ್ವತೋಮುಖ ಪ್ರಗತಿ ಹಾಗೂ ಅಭಿವೃದ್ಧಿಯ ದಿಕ್ಸೂಚಿ, ಬದಲಾಗುತ್ತಿರುವ ಕಾಲದಲ್ಲಿ ಬದಲಾದ ಆಲೋಚನಾಕ್ರಮ, ಬದಲಾದ ಆದ್ಯತೆಗಳನ್ನು ಗಮನಿಸಿ ಬಜೆಟ್‌ ಅನ್ನು ತಯಾರಿಸಬೇಕಾಗುತ್ತದೆ" ಎಂದು ಹೇಳುತ್ತಾ ಪರಿವರ್ತನೆಯ ದೂರದೃಷ್ಟಿತ್ವಕ್ಕೆ ಈ ಸಲದ ಬಜೆಟ್ ಪೂರಕವಾಗಿದೆಯೇ ಎಂಬುದನ್ನು ವಿಶ್ಲೇಷಿಸಲು ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಶ್ರೀನಿವಾಸಮೂರ್ತಿಯವರು ಡಿಜಿಟಲೀಕರಣ ಹಾಗೂ ಅದರ ಪಾತ್ರವನ್ನು ವಿವರಿಸಿದರು.


ಕಾಲೇಜಿನ ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ.ರಾಮಚಂದ್ರ ಬಾಳಿಗರವರು ಇದೊಂದು ಉತ್ತಮ ಉಪನ್ಯಾಸ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿ ವಹಿಸಿದ್ದರು. ಇದರೊಂದಿಗೆ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಾದ ಶಂಕರ್ ಭಾರದ್ವಾಜ್, ಗೌಸ್‌ಪೀರ್ ಹಾಗೂ ನಿಸರ್ಗರವರಿಗೆ ಬಹುಮಾನ ವಿತರಿಸಲಾಯಿತು.  ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕಾವ್ಯ, ಉಪನ್ಯಾಸಕರಾದ  ವೀಣಾ ಭಟ್ ಹಾಗೂ  ಪ್ರಿಯಾ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ಗೌಸ್‌ಪೀರ್ ಕಾರ್ಯಕ್ರಮವನ್ನು ನಿರೂಪಿಸಿ. ಬಿಂದಿಯ ಪ್ರಾರ್ಥಿಸಿ, ನಿಸರ್ಗ ಸ್ವಾಗತಿಸಿ, ತನುಶ್ರೀ ವಂದಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top