ಬೆಂಗಳೂರು: ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಜಯತೀರ್ಥರ ಆರಾಧನೆ ಪ್ರಯುಕ್ತ ಜುಲೈ 25, ಗುರುವಾರ ಸಂಜೆ 6-30ಕ್ಕೆ ಯುವ ಗಾಯಕ ಶ್ರೀ ವರದೇಂದ್ರ ಗಂಗಾಖೇಡ್ ಇವರಿಂದ ದಾಸರ ಪದಗಳ ಗಾಯನ ಮತ್ತು ಮ||ಶಾ||ಸಂ|| ಡಾ|| ವೇಣುಗೋಪಾಲಾಚಾರ್ ಅಗ್ನಿಹೋತ್ರಿ ಇವರಿಂದ ವ್ಯಾಖ್ಯಾನ ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೆ ವಾದ್ಯ ಸಹಕಾರದಲ್ಲಿ ಶ್ರೀ ತೇಜಸ್ ಕಾಟೋಟಿ (ಹಾರ್ಮೋನಿಯಂ), ಶ್ರೀ ಪ್ರಮೋದ್ ಗಬ್ಬೂರ್ (ತಬಲಾ) ಮತ್ತು ಶ್ರೀ ವೆಂಕಟೇಶ್ ಪುರೋಹಿತ್ (ತಾಳ) ಸಹಕರಿಸಲಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ಲಾಟ್ ಫಾರ್ಮ್ ರಸ್ತೆ, ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದ ಎದುರು, ಶೇಷಾದ್ರಿಪುರಂ, ಬೆಂಗಳೂರು-560020.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ