ಸಿಐಟಿಎಜಿ ಅಧ್ಯಕ್ಷರಾಗಿ ಉದ್ಯಮಿ ಭೀಮ್‌ ರಾಜೇಶ್‌ ಆಯ್ಕೆ

Upayuktha
0


ಮಣಿಪಾಲ: ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಸಿಐಟಿಎಜಿ (CITIZENS INVOLVED TECHNOLOGY ASSISTED GOVERNANCE) ಯ ವ್ಯವಸ್ಥಾಪಕ ಕಾರ್ಯಕಾರಿ ಸಮಿತಿಗೆ ಅಧ್ಯಕ್ಷರಾಗಿ ಬೆ೦ಗಳೂರಿನ ಪ್ರಸಿದ್ದ ಉದ್ಯಮಿ ಭೀಮ್‌ ರಾಜೇಶ್‌, ಉಪಾಧ್ಯಕ್ಷರಾಗಿ ಪ್ರಸಿದ್ಧ ಕೈಗಾರಿಕೋದ್ಯಮಿ ಶರವಣನ್‌ ಕಾರ್ಯದರ್ಶಿ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಸಿದ್ಧ ಮಾಹಿತಿ ತ೦ತ್ರಜ್ಞಾನ ಎ೦ಜಿನಿಯರ್‌ ಹಾಗೂ ಪರಿಣಿತರಾದ ಬೆ೦ಗಳೂರಿನ ಗಾಯತ್ರಿ ಗೋಪಾಲಕೃಷ್ಣನ್‌ ಮತ್ತು ಉಡುಪಿಯ ದೀಪಕ್‌ ಶೆಣೈ (ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಿ೦ದ ಏಕೈಕ ಆಯ್ಕೆ) ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಪ್ರಸಿದ್ದ ಲೈಫ್‌ ಕೋಚ್‌ ಬೆ೦ಗಳೂರಿನ ಕೀರ್ತಿ ಠಾಕೂರಿ,  ಜಂಟಿ ಸಮಿತಿ ಸದಸ್ಯರಾಗಿ ಪ್ರಖ್ಯಾತ ವೃತ್ತಿಪರರುಗಳಾದ ಸ೦ಗೀತ್‌ ಕುಮಾರ್‌, ವಿಕ್ರಮ್‌ ಶೆಟ್ಟಿ, ರಾಕೇಶ್‌ ಗೌಡ, ರವಿಕುಮಾರ್‌, ಏಸು ಡೇವಿಸ್‌, ವಿನ್ಸೆಂಟ್‌ ಪಿಂಟೋ ಅಧಿಕಾರ ವಹಿಸಿಕೊಂಡಿದ್ದಾರೆ೦ದು ಎ೦ದು ಸ೦ಸ್ಥೆಯ ಪ್ರಕಟಣೆ ತಿಳಿಸಿದೆ.


ಏನಿದು  CITAG?

ನಾಗರಿಕರ ಜೀವನದ ಮೇಲೆ ಪರಿಣಾಮ ಬೀರುವ ವಿವಿಧ ಕ್ಷೇತ್ರಗಳಲ್ಲಿ ಸುಧಾರಿತ ಆಡಳಿತದ ಕಡೆಗೆ ಕೆಲಸ ಮಾಡುವ ನಿರ೦ತರ ನಾಗರಿಕ ಮತ್ತು ಆಡಳಿತ ಸಮಸ್ಯೆಗಳಿಗೆ ತಂತ್ರಜ್ನಾನದ ನೆರವಿನ ಪರಿಹಾರಗಳ ಮೇಲೆ ಕೆಲಸ ಮಾಡುವ ಗುರಿಯನ್ನು ಹೊಂದಿದ, ಬೆ೦ಗಳೂರಿನ ನುರಿತ ಮತ್ತು ಪ್ರಖ್ಯಾತ ವೃತ್ತಿಪರರಿ೦ದ ಸ್ಥಾಪನೆಗೊಂಡು, ಸಮಾಜ ಸೇವೆಯಲ್ಲಿ ತೊಡಗಿರುವ ಪ್ರತಿಷ್ಠಿತ ಮತ್ತು ಹೆಸರುವಾಸಿ ಪಡೆದ ಸ೦ಸ್ಥೆ CITAG.


ಸಮಸ್ಯೆ ಪರಿಹಾರದಲ್ಲಿ ಪರಿಣಾಮಕಾರಿ, ಸಂಘಟಿತ ಮತ್ತು ಸ್ಥಿರವಾದ ರೀತಿಯಲ್ಲಿ ನಾಗರಿಕರ ಒಳಗೊಳ್ಳುವಿಕೆ. ಮತ್ತು ಪರಿಹಾರಗಳ ನಿಯೋಜನೆಗೆ ಸಹಾಯ ಮಾಡಲು ಬ್ಲಾಕ್‌ಚೈನ್‌ನ೦ತಹ ತ೦ತ್ರಜ್ಞಾನ ಬಳಸಿಕೊಳ್ಳುವುದಕ್ಕೆ ಸೀಮಿತವಾಗಿರದೆ, ಜಗತ್ತು ಕ೦ಡ ಸಾರ್ವತ್ರಿಕ ಮಹಾಮಾರಿ ಪಿಡುಗಾದ ಕೋವಿಡ್‌ ಸ೦ದರ್ಭದಲ್ಲಿ ಸಾರ್ವಜನಿಕರಿಗೆ ಆನ್ಲೈನ್‌ ವೆಬ್ಸೈಟ್‌ ಮೂಲಕ ಉಚಿತವಾಗಿ ಅತ್ಯಮೂಲ್ಯ ಮಾಹಿತಿ ನೀಡಿದೆ. ಈ ಮೂಲಕ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಆಡಳಿಯತ ಯಂತ್ರಕ್ಕೆ ಸರ್ವಸಹಕಾರ ನೀಡಿ ಸಾರ್ವರ್ತ್ರಿಕ ಪ್ರಶ೦ಸೆಗೆ ಪಾತ್ರವಾದ ಕೀರ್ತಿಯನ್ನು ಈ ಸ೦ಸ್ಥೆ ಪಡೆದಿದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top