ಬೆಂಗಳೂರು: ನಾಳೆ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ

Upayuktha
0


ಬೆಂಗಳೂರು:
ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭದ ಅಂಗವಾಗಿ ಜುಲೈ 27, ಶನಿವಾರ ಸಂಜೆ 6-00 ಗಂಟೆಗೆ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ (ಅಂಚೆ ಕಚೇರಿ ಹತ್ತಿರ) ಶ್ರೀ ರಾಮ ಮಂದಿರದಲ್ಲಿ 'ನಾದಜ್ಯೋತಿ ಪುರಸ್ಕೃತ' ವಿದುಷಿ ಡಾ|| ಹಂಸಿನಿ ನಾಗೇಂದ್ರ ಇವರಿಂದ "ಕರ್ನಾಟಕ ಶಾಸ್ತ್ರೀಯ ಸಂಗೀತ" ಕಾರ್ಯಕ್ರಮ ಏರ್ಪಡಿಸಲಾಗಿದೆ. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ವಿ|| ಬಿ.ಕೆ. ರಘು (ಪಿಟೀಲು), ವಿ|| ಬಿ.ಎಸ್. ಪ್ರಶಾಂತ್ (ಮೃದಂಗ), ವಿ|| ಎನ್. ಗುರುಮೂರ್ತಿ (ಘಟ) ಸಾಥ್ ನೀಡಲಿದ್ದಾರೆ ಎಂದು ಸಂಸ್ಥೆಯ ಕಟ್ಟೆ ಸತ್ಯನಾರಾಯಣ ತಿಳಿಸಿದ್ದಾರೆ.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top