ಮಂಗಳೂರು: ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ.ಶಾಮರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್, ಮಂಗಳೂರು ಇವರ 21ನೇ ಬಿ.ಎಸ್ಸಿ ನರ್ಸಿಂಗ್ ಮತ್ತು 19ನೇ ಜಿಎನ್ಎಂ ನರ್ಸಿಂಗ್ ಬ್ಯಾಚ್ನ ಪ್ರತಿಜ್ಞಾ ಸ್ವೀಕಾರ ಸಮಾರಂಭ ಶ್ರೀನಿವಾಸ ಗ್ರೂಫ್ ಆಫ್ ಕಾಲೇಜ್ನ ವಳಚ್ಚಿಲ್ ಕ್ಯಾಂಪಸ್ನಲ್ಲಿ ಮೇ. 30ರಂದು ನಡೆಯಿತು.
ಡಾ. ಸಿ.ಎ. ಎ. ರಾಘವೇಂದ್ರರಾವ್ ಗೌರವಾನ್ವಿತ ಕುಲಾಧಿಪತಿಗಳು ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜಯಲಕ್ಷ್ಮಿ ಆರ್.ರಾವ್ ಟ್ರಸ್ಟ್ ಸದಸ್ಯರು ಆಡಳಿತ ಮಂಡಳಿ, ಶ್ರೀನಿವಾಸ ಮಹಾವಿದ್ಯಾಲಯ, ಮತ್ತು ಟ್ರಸ್ಟ್ ಸದಸ್ಯರು ಆಡಳಿತ ಮಂಡಳಿ ಎ.ಶಾಮರಾವ್ ಫೌಂಡೇಶನ್ ಮಂಗಳೂರು, ಪ್ರೊ.ಇಂಜಿನಿಯರ್ ಎ ಮಿತ್ರ ಎಸ್ ರಾವ್ ಟ್ರಸ್ಟ್ ಸದಸ್ಯರು ಆಡಳಿತ ಮಂಡಳಿ, ಶ್ರೀನಿವಾಸ ಮಹಾವಿದ್ಯಾಲಯ ಮತ್ತು ಕಾರ್ಯದರ್ಶಿಗಳು ಎ.ಶಾಮರಾವ್ ಫೌಂಡೇಶನ್ ಅವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು.
ಮಂಗಳೂರಿನ ಆಥೇನ ಕಾಲೇಜ್ ಆಫ್ ನರ್ಸಿಂಗ್ನ ಪ್ರಾಂಶುಪಾಲರಾದ ಸಿಸ್ಟರ್ ದೀಪ ಪೀಟರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದಾತ್ತ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಮತ್ತು ದೇವರ ಆಶೀರ್ವಾದದಿಂದ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ರೋಗಿಗಳ ಸೇವೆ ಮತ್ತು ರೋಗಿಗಳ ಆರೈಕೆ ನಿಮ್ಮ ಮೊದಲ ಆದ್ಯತೆಯಾಗಿರಬೇಕು ಎಂದು ಹೇಳಿದರು.
ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮತ್ತು ಎ.ಶಾಮರಾವ್ ನರ್ಸಿಂಗ್ ಸ್ಕೂಲ್, ವಳಚ್ಚಿಲ್ನ ಪ್ರಾಂಶುಪಾಲರಾದ ಪ್ರೋ. ಪ್ರದೀಪ ಎಂ ಹಾಗೂ ಸಂಚಾಲಕರಾದ ಪ್ರೊ.ಶಾಂತಿ ರೆನಿಟಾ ಮೊರಾಸ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ