ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ
ಮೈಸೂರು: ಹಿಂದೂ ಜನಜಾಗೃತಿ ಸಮಿತಿಯು ಕಳೆದ 20 ವರ್ಷಗಳಿಂದ ಸಮಾಜದಲ್ಲಿನ ಹಿಂದೂಗಳಿಗೆ ಧರ್ಮಜಾಗೃತಿ ಮತ್ತು ಧರ್ಮಶಿಕ್ಷಣವನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಹಾಗೆಯೇ ಅದರ ಒಂದು ಭಾಗವಾಗಿ ಮೈಸೂರಿನ ಶ್ರೀ ಚಿದಂಬರೇಶ್ವರ ಸ್ವಾಮಿ ಮತ್ತು ಶ್ರೀ ಆನಂದವಲ್ಲಿ ದೇವಸ್ಥಾನದಲ್ಲಿ ಧರ್ಮಶಿಕ್ಷಣ ವರ್ಗವನ್ನು ಪ್ರಾರಂಭಿಸಿ ಅಲ್ಲಿಯ ಸ್ಥಳೀಯ ಧರ್ಮಪ್ರೆಮಿಗಳಿಗೆ ದೇವಸ್ಥಾನದ ಮಹತ್ವ, ದೇವಸ್ಥಾನದ ಪಾವಿತ್ರ್ಯವನ್ನು ಉಳಿಸುವಲ್ಲಿ ನಮ್ಮೆಲ್ಲರ ಪಾತ್ರ ಹಾಗೂ ದೇವಸ್ಥಾನಕ್ಕೆ ಹೋಗುವಾಗ ನಾವೆಲ್ಲರೂ ಯಾವ ಭಾವವನ್ನು ಇಟ್ಟುಕೊಂಡು ಹೋಗಬೇಕು, ಹಾಗೆಯೇ ದೇವಸ್ಥಾನದ ದರ್ಶನವನ್ನು ಯೋಗ್ಯ ರೀತಿಯಲ್ಲಿ ಹೇಗೆ ಪಡೆಯಬೇಕು.
ಈ ಎಲ್ಲಾ ವಿಷಯದ ಕುರಿತು ಮಾಹಿತಿ ಮತ್ತು ಸಾಮೂಹಿಕವಾಗಿ ದೇವರ ನಾಮಜಪವನ್ನು ಮಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಲ್ಲಿಯ ಸ್ಥಳೀಯರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಮತ್ತು ಮೈಸೂರು ಜಿಲ್ಲಾ ಸಮನ್ವಯಕಾರರಾದ ಶರತ್ ಕುಮಾರ್ ಇವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ