ಮಂಗಳೂರು: ಸುಣ್ಣಂಬಳ ಹಾಗೂ ವಾದಿರಾಜರಿಗೆ ಮಸ್ಕತ್‌ನಲ್ಲಿ ಬಿರುದು ಪ್ರದಾನ" ಬಿರುವ ಜವನರ್ 'ಬಿರ್ಸೆರ್' ಕೂಡ ಹೌದು. ವಿದೇಶದಲ್ಲಿ ವಿಜೃಂಭಣೆಯ ಆಟ ಆಡಿಸಿದ ಅವರ ಈ ಸಾಹಸ ಮೆಚ್ಚುವಂತಹದು" ಖ್ಯಾತ ಕಲಾವಿದ ಎಂದು ಸುಣ್ಣಂಬಳ ವಿಶ್ವೇಶ್ವರ ಭಟ್ ನುಡಿದರು.
ಮಸ್ಕತ್ ನ "ಶ್ರೀ ದೇವೀ ಮಹಾತ್ಮೆ" ಯಕ್ಷಗಾನ ಪ್ರದರ್ಶನ ವೇದಿಕೆಯಲ್ಲಿ ಖ್ಯಾತ ಯಕ್ಷಗಾನ ವೇಷಧಾರಿ, ಅರ್ಥಧಾರಿ ಹಾಗೂ ಶ್ರೀ ಕಟೀಲು ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರಿಗೆ "ಯಕ್ಷ ನಿಧಿ" ಹಾಗೂ ಖ್ಯಾತ ನಿರೂಪಕ, ಉಪನ್ಯಾಸಕ, ಯಕ್ಷ ಕಲಾ ವ್ಯವಸಾಯಿ, ಅರ್ಥಧಾರಿ, ಮಿಮಿಕ್ರಿ ಕಲಾ ಪ್ರವೀಣ, ಕನ್ನಡ ಪದ ಪ್ರವೀಣ ಡಾ. ವಾದಿರಾಜ ಕಲ್ಲುರಾಯ ಅವರಿಗೆ "ಯುವ ಸಿರಿ" ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಿರುವ ಜವನೆರ್ ಮಸ್ಕತ್ ಹಾಗೂ ಇನ್ಸ್ಪಿರೇಷನ್ ಡಿಸೈನ್ ಇವರು ಮಸ್ಕತ್ ನ ರೂಯಿಯ ಅಫಲಾಜ್ ಹೋಟೆಲ್ ನಡೆಸಿದ್ದ ಈ ಕಾರ್ಯಕ್ರಮವನ್ನು ಸುಮಾರು 1400 ಮಂದಿ ವೀಕ್ಷಿಸಿದ್ದಾರೆ. ಆಟ ಮುಗಿದ ನಂತರ ಜರಗಿದ್ದ ಕಲಾವಿದ ಗೌರವ ಕಲಾಪವನ್ನು ಸಭಾಂಗಣದಲ್ಲಿದ್ದ ಸಹಸ್ರಾರು ಯಕ್ಷಗಾನ ಅಭಿಮಾನಿಗಳು ಯಕ್ಷಗಾನ ವೀಕ್ಷಿಸಿ ಆನಂದಿಸಿದ್ದಾರೆ.
ರಕ್ತಬೀಜಾಸುರನಾಗಿ ವಿಜೃಂಭಿಸಿದ ತೆಂಕು ತಿಟ್ಟಿನ ಪ್ರಾತಿನಿಧಿಕ ವೇಷಧಾರಿ ಸುಣ್ಣಂಬಳ ಅವರನ್ನು ಆನಂದ ಸನಿಲ್, ಗಂಗಾಧರ ಪೂಜಾರಿ, ಮಿತ್ರ ಹೆರಾಜೆ, ಶಶಿಧರ ಶೆಟ್ಟಿ ಮಲ್ಲಾರ್, ದಿವಾಕರ ಶೆಟ್ಟಿ ಮಲ್ಲಾರ್, ಡಾ. ಅಂಚನ್ ಸಿ ಕೆ ಅವರು ಸನ್ಮಾನಿಸಿದರು.
ಬ್ರಹ್ಮ ಹಾಗೂ ಸುಗ್ರೀವ ಪಾತ್ರ ನಿರ್ವಹಿಸಿ, ಕಲಾವಿದರ ಸಂಯೋಜಕರಾಗಿ ಯಕ್ಷಯಾನದ ಸಾರಥಿಯಾಗಿ ಸಹಕರಿಸಿದ್ದ ಕಲ್ಲುರಾಯ ಅವರನ್ನು ನರೇಶ್ ಪೈ, ದಿನೇಶ್ ಪೂಜಾರಿ, ಎಸ್.ಡಿ. ಪ್ರಸಾದ್, ಸೂರ್ಯ ಕುಮಾರ್ ಸುವರ್ಣ, ಲೀಲಾಕ್ಷ ಬಿ ಕರ್ಕೇರ ಹಾಗೂ ಸುಚೇತನಾ ಅಂಚನ್ ಅವರು ಸನ್ಮಾನ ಮಾಡಿದರು.
ನಿತಿನ್ ಹುಣ್ಸೆಕಟ್ಟೆ ಸನ್ಮಾನ ಪತ್ರ ವಾಚನ ಮಾಡಿದರು. ಕದ್ರಿ ನವನೀತ ಶೆಟ್ಟಿ ಅವರು ಅಭಿನಂದನೆ- ನಿರೂಪಣೆ ಮಾಡಿದರು. ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಸ್ವಾಗತಿಸಿದರು. ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮರ್ಪಿಸಿದರು. ಯಕ್ಷಗಾನದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಪರಿಚಯಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ