ನಮ್ಮಿಂದ ಯಾವ ಅಕ್ರಮ ನಡೆಯಿತು ಎಂದು ಹೇಳದೆ ನಮ್ಮಿಂದ ಶುಲ್ಕ ಪಡೆದು ಅಕ್ರಮ ಸಕ್ರಮಕ್ಕೆ ಬರೆಯಿಸಿಕೊಂಡಿದ್ದಾರೆ. 'ಅದ್ಯಾಕೆ' ಎಂದು ಹೈಕೋರ್ಟ್, ಸುಪ್ರೀಂ ಕೋರ್ಟ್ ಕೇಳಿಲ್ಲ. ಒಂದು ರಾತ್ರಿ ಕಳೆಯಲೂ ಪುರುಸೊತ್ತು ಕೊಡದೆ ಅಪರಾಧಿಗಳಿಗೆ ಜಾಮೀನು ನೀಡಲು ಕಾಳಜಿ ವಹಿಸುವ ಕೋರ್ಟುಗಳಿಗೆ 15-20 ವರ್ಷಗಳಾದರೂ ನಮ್ಮ ದಾವೆಯನ್ನು ಮುಟ್ಟಲು ಪುರುಸೊತ್ತು ಆಗಲಿಲ್ಲ. ನಮ್ಮ Impleadmentಗೆ ಕೂಡ ಅವರು ಗಮನ ಕೊಡಲಿಲ್ಲ.
ನಮ್ಮನ್ನೇ ಪ್ರಶ್ನೆ ಮಾಡುತ್ತಾರೆ:
"ನಿವೇಶನ ಖರೀದಿಸಲು ನಾವು ಹೇಳಿದ್ದೇವಾ?"
"ನೋಡಿ ಖರೀದಿಸಬೇಕಾಗಿತ್ತು. ನೀವೇನು ಅನಕ್ಷರಸ್ಥರಾ?"
"ನೀವು ಕೊಲೆಗಡುಕರು"
ಇತ್ಯಾದಿ ಇತ್ಯಾದಿ.
ನಾವೆಲ್ಲರೂ ವಯಸ್ಸು 60-70 ದಾಟಿದವರು ಶತಮಾನಗಳ ಹಿಂದೆ ತೀರಿಕೊಂಡವರ ಹೆಸರಲ್ಲಿ ಪಾದಯಾತ್ರೆ ಹೊರಟರೆ ಅಡಿಗಡಿಗೆ ಪೋಲಿಸರು ವಿಚಾರಿಸಿಕೊಳ್ಳುವುದು, ಬೆದರಿಸುವುದು, ತಡೆಯುವುದು!!
ಇವತ್ತು ನೋಡಿ ಜೈಲಿನಲ್ಲಿ ಇರುವ ಇಬ್ಬರು ಘೋಷಿತ ಭಯೋತ್ಪಾದಕರು, ಅಪರಾಧಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ; ನಾಳೆ ಸಂಸದರಾಗುತ್ತಾರೆ; ನಮ್ಮನ್ನೆಲ್ಲ ಕಾಪಾಡುವ ಹೊಣೆ ಹೊರುತ್ತಾರೆ.
ಇದನ್ನು ವಿಚಾರಿಸಲು ಯಾವ ನ್ಯಾಯಾಲಯ, ಪೊಲೀಸ್ ಇಲ್ಲ! ಮಾಧ್ಯಮವೂ ಇಲ್ಲ! ನ್ಯಾಯಾಲಯಕ್ಕೆ, ಅಂತಸ್ಸಾಕ್ಷಿಗೆ ರಜೆ. ದೊಡ್ಡ ರಜೆ. ಹೌದು. ರಜೆ. ನಮ್ಮ File ನೋಡಬೇಕಾಗಿರುವರು ರಜೆಯ ಸುಖ ಅನುಭವಿಸುತ್ತಿದ್ದಾರೆ.
- ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಬಡಾವಣೆ ಮತ್ತು ಏಕ ನಿವೇಶನ ವಿನ್ಯಾಸ ಹಗರಣದ ಸಂತ್ರಸ್ತರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ