ಪುಟಾಣಿ ಕಥೆ: ಜಾಣ ಹಕ್ಕಿ

Upayuktha
0


ಒಂದು ಕಾಡಿನಲ್ಲಿ ಒಂದು ಮುದ್ದಾದ ಬುಲ್ ಬುಲ್ ಹಕ್ಕಿ ಇತ್ತು. ಒಮ್ಮೆ ಆ ಊರಿಗೆ ಬರಗಾಲ ಬಂದಿತು. ಎಲ್ಲಾ ಪ್ರಾಣಿ-ಪಕ್ಷಿಗಳು ನೀರಿಲ್ಲದೆ ತೊಂದರೆ ಪಡುವ ಹಾಗಾಯಿತು. ಆಗ ಈ ಮುದ್ದಾದ ಬುಲ್ ಬುಲ್ ಹಕ್ಕಿಯೂ ನೀರಿಗಾಗಿ ಒದ್ದಾಡಿತು. ಒಂದು ದಿನ ಬುಲ್ ಬುಲ್ ಹಕ್ಕಿಯು ನೀರನ್ನು ಅರಸುತ್ತಾ ಆಕಾಶದಲ್ಲಿ ಹಾರಾಡುತ್ತಿತ್ತು. ಆಕಾಶದಲ್ಲಿ ಅದಕ್ಕೆ ಕೆಲವು ಚಿಕ್ಕ ಚಿಕ್ಕ ಕಪ್ಪುಕಪ್ಪು ಮೋಡಗಳು ಕಂಡವು. ಹಕ್ಕಿಯು ಕೆಳಗೆ ನೋಡಿತು. ಅಲ್ಲಿ ಒಂದು ಮನೆಯ ಮೇಲೆ ಖಾಲಿ ಹೂಜಿ ಬಿದ್ದಿರುವುದನ್ನು ನೋಡಿತು. ಆಗ ಹಕ್ಕಿಗೆ ಏನೋ ಒಂದು ಉಪಾಯವು ಹೊಳೆಯಿತು.


ಅದು ಆಕಾಶದಲ್ಲಿ ಸುಮ್ಮನೆ ಅಲೆಯುತ್ತಿದ್ದ ಕಪ್ಪು ಮೋಡಗಳ ತುಂಡನ್ನು ಕೊಕ್ಕಿನಲ್ಲಿ ಹಿಡಿದು ತಂದು ಆ ಹೂಜಿಯೊಳಗೆ ಹಾಕಿತು. ಆಗ ಮೋಡಗಳು ಕರಗಿ ನೀರಾಯಿತು. ದಾಹದಿಂದ ಸೋತು ಹೋಗಿದ್ದ ಆ ಹಕ್ಕಿಯು ಆ ನೀರನ್ನು ಕುಡಿಯಿತು. ತನ್ನ ಬಳಗವನ್ನು ಕರೆದು ತಾನು ನೀರಿಗಾಗಿ ಮಾಡಿದ ಉಪಾಯವನ್ನು ತಿಳಿಸಿತು. ಅವುಗಳು ಕೂಡಾ ಬುಲ್ ಬುಲ್ ಹಕ್ಕಿಯೊಂದಿಗೆ ಸೇರಿಕೊಂಡು ಮೋಡಗಳನ್ನು ಕೊಕ್ಕಿನಲ್ಲಿ ಹಿಡಿದು ತಂದು ಹೂಜಿಯೊಳಗೆ ಹಾಕಿದವು. ಮೋಡಗಳು ಕರಗಿ ನೀರಾಯಿತು. ಹಕ್ಕಿಗಳೆಲ್ಲಾ ದಾಹ ತೀರುವವರೆಗೆ ನೀರು ಕುಡಿದವು. ಕೆಲವು ಮೈಗೆಲ್ಲ ಹಾಕಿಕೊಂಡು ಸ್ನಾನ ಮಾಡಿದವು.


ಆಮೇಲೆ ಎಲ್ಲಾ ಹಕ್ಕಿಗಳು ಸೇರಿ ಆ ಹೂಜಿಯನ್ನು ಎತ್ತಿಕೊಂಡು ತಮ್ಮ ಕಾಡಿಗೆ ಹೋದವು. ನೀರಿಲ್ಲದ ಬರಗಾಲ ಬಂದಾಗೆಲ್ಲ ಮೋಡಗಳನ್ನು ಹಿಡಿದು ತಂದು ಹೂಜಿಗೆ ಹಾಕಿ ನೀರು ಕುಡಿಯ ತೊಡಗಿದವು. ಜೊತೆಗೆ ಇತರ ಪ್ರಾಣಿ-ಪಕ್ಷಿಗಳಿಗೆ, ಮರಗಳಿಗೆ ನೀರನ್ನು ಹಂಚುತ್ತಿದ್ದವು. ಅಂದಿನಿಂದ ಎಲ್ಲಾ ಪ್ರಾಣಿ-ಪಕ್ಷಿಗಳೂ ಸುಖ-ಸಂತೋಷದಿಂದ ಇದ್ದವು.


- ಅಕ್ಷರ ಕೆ ಸಿ

6ನೇ ತರಗತಿ

ಸುದಾನ ವಸತಿ ಶಾಲೆ ಪುತ್ತೂರು ದ.ಕ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top