ಹಾಸನ: ವಿವಿಧ ತಾಲ್ಲೂಕಿನ ಗ್ರಾಮೀಣ ಭಾಗದಿಂದ ನಗರ ಪ್ರದೇಶದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
ಚನ್ನರಾಯಪಟ್ಟಣ-ಹಾಸನ- ಅರಕಲಗೂಡು- ಬೇಲೂರು- ಆಲೂರು- ಸಕಲೇಶಪುರ-ತಿಪಟೂರು ಮಾರ್ಗವಾಗಿ ಪ್ರತಿಯೊಂದು ತಾಲೂಕು ಸಂಬಂಧಪಟ್ಟಂತೆ ತಾಲ್ಲೂಕಿನ ಗ್ರಾಮದಿಂದ ನಗರಕ್ಕೆ ಬೆಳಗಿನ ಸಮಯದಲ್ಲಿ ಬರುವ ಬಸ್ಸು ಎಲ್ಲ ಮಾರ್ಗವಾಗಿ ಬರುವಾಗಲೇ ಭರ್ತಿಯಾಗಿ ಬರುತ್ತಿದ್ದು ಹೆಚ್ಚುವರಿ ಬಸ್ಸನ್ನು ಜಿಲ್ಲೆಯ ಎಲ್ಲ ಭಾಗಕ್ಕೆ ಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಈಗಾಗಲೇ ಬೆಳಗಿನ ಸಮಯ ಶಾಲಾ ಕಾಲೇಜಿಗೆ ತೆರಳುವ ನೂರಾರು ಮಕ್ಕಳಿಗೆ ಸುಮಾರು ಬಸ್ಸು ಪೂರ್ತಿ ಭರ್ತಿಯಾ ಗಿರುವುದರಿಂದ ರಸ್ತೆ ಅಕ್ಕಪಕ್ಕದಲ್ಲಿ ಬೇರೆ ಬಸ್ಸುಗಳಿಗಾಗಿ ಕಾಯುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ದೊರಕದೆ ಇರುವುದರಿಂದ ಶಾಲಾ-ಕಾಲೇಜಿಗೆ ತೆರಳಲು ಮತ್ತೊ೦ ದು ಬಸ್ಸಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಬೆಳಿಗ್ಗೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೋಸ್ಕರ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಶಿಕ್ಷಣ ಸಚಿವರಿಗೆ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಹಾಸನ ಘಟಕದ ವ್ಯವಸ್ಥಾಪಕರಿಗೆ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗ ಹಾಸನ ಜಿಲ್ಲಾ ಅಧ್ಯಕ್ಷ ವರುಣ್ ಚಕ್ರವರ್ತಿ ಒತ್ತಾಯಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ