ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ನಮ್ಮ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಅನೇಕ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಈ ಕಲೆಯಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದ ಹೆಚ್ ನಿಖಿಲ್ ಪೈ. 04.05.1996ರಂದು ಮಂಜುನಾಥ್ ಪೈ ಹಾಗೂ ಭಾರತಿ ಪೈ ಇವರ ಮಗನಾಗಿ ಜನನ. MBA ಇವರ ವಿದ್ಯಾಭ್ಯಾಸ. ಮಾಂಬಾಡಿ ಸುಬ್ರಮಣ್ಯ ಭಟ್ ಹಾಗೂ ಮಯೂರ ನಾಯ್ಗ ಇವರ ಯಕ್ಷಗಾನ ಗುರುಗಳು.
ಯಕ್ಷಗಾನಕ್ಕೆ ಚೆಂಡೆ ಹಾಗೂ ಮದ್ದಳೆ ಕಲಿಯಲು ಪ್ರೇರಣೆ:-
9ನೇ ವಯಸ್ಸಿನಲ್ಲಿ ಇರುವಾಗ ತಬಲ ಕಲಿಯಲು ಪ್ರಾರಂಭಿಸಿದೆ. ಅನೇಕ ಕಡೆಗಳಲ್ಲಿ ಭಜನೆ ಹಾಗೂ Light vocals ಗಳಲ್ಲಿ ತಬಲವನ್ನು ನುಡಿಸಿದೆ. ಸಾಂಸ್ಕೃತಿಕ ವಿಭಾಗದಲ್ಲಿ ನನ್ನ ಪ್ರತಿಭೆಯನ್ನು ಗುರುತಿಸಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿಗೆ ಫ್ರೀ ಸೀಟು ದೊರೆಯಿತು. ಆಳ್ವಾಸ್ ಗೆ ಸೇರಿದ ಮೇಲೆ ಅಲ್ಲಿನ ಮಕ್ಕಳು ಆಳ್ವಾಸ್ ಯಕ್ಷಗಾನ ಕೇಂದ್ರದಲ್ಲಿ ಪ್ರತೀ ದಿನ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದರು. ಇದನ್ನು ನೋಡಿದ ನಾನು ಯಕ್ಷಗಾನ ಚೆಂಡೆ ಹಾಗೂ ಮದ್ದಳೆ ಕಲಿಯಬೇಕು ಎಂದು ಆಸೆಯಾಗಿ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು.
ನೆಚ್ಚಿನ ಚೆಂಡೆ ಹಾಗೂ ಮದ್ದಲೆ ವಾದಕರು:-
ಚೆಂಡೆ:- ಪದ್ಯಾಣ ಶಂಕರನಾರಾಯಣ ಭಟ್.
ಮದ್ದಳೆ:- ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್.
ನೆಚ್ಚಿನ ಪ್ರಸಂಗಗಳು:-
ಮಾನಿಷಾದ, ತರಣಿಸೇನ ಕಾಳಗ, ರುಕ್ಮಾಂಗದ ಚರಿತ್ರೆ.
ನೆಚ್ಚಿನ ಭಾಗವತರು:- ಬಲಿಪ ನಾರಾಯಣ ಭಾಗವತರು.
ಯಕ್ಷಗಾನದಲ್ಲಿ ವೇಷ ಮಾಡುವ ಅಥವಾ ಭಾಗವತಿಕೆ ಮಾಡುವ ಆಸಕ್ತಿ ಇದೆಯಾ:- ಹಿಂದುಸ್ತಾನಿ ಕ್ಲಾಸಿಕಲ್ ಸಂಗೀತ ಕಲಿತಿರುವ ಕಾರಣ ರಾಗಗಳ ಬಗ್ಗೆ ಜ್ಞಾನ ಇರುವುದರಿಂದ ಯಕ್ಷಗಾನ ಭಾಗವತಿಕೆ ಬಗ್ಗೆ ಆಸಕ್ತಿ ಇದೆ ಎಂದು ಹೇಳುತ್ತಾರೆ ನಿಖಿಲ್.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಕರಾವಳಿಯ ಅನೇಕ ಜನರಿಗೆ ಯಕ್ಷಗಾನದ ಮೇಲೆ ತುಂಬಾನೇ ಅಭಿಮಾನ ಇದೆ. ಯಕ್ಷಗಾನಕ್ಕೆ ಇಂದು ಅನೇಕ ಪ್ರೇಕ್ಷಕರು ಇದ್ದಾರೆ. ಬೇರೆ ಕಡೆ ಇರುವ ಜನರಿಗೆ ಯಕ್ಷಗಾನದ ಮೇಲೆ ಒಲವು ಕೂಡ ಮೂಡುತ್ತಿದೆ. ಆದರೆ ಅವರಿಗೆ ಯಕ್ಷಗಾನದ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ ಅಥವಾ ಅವರಿಗೆ ಯಕ್ಷಗಾನದ ಬಗ್ಗೆ ಅರ್ಥವಾಗುತ್ತಿಲ್ಲ. ಕೆಲವರಿಗೆ ಯಕ್ಷಗಾನವೆಂದರೆ ಬರೀ ನಾಟ್ಯ ಎಂದುಕೊಂಡಿದ್ದಾರೆ.
ಯಕ್ಷಗಾನದ ಭಾಗವತಿಕೆ, ಬರೆಯುವ ಪದ್ಯ, ವಿವಿಧ ಬಗೆಯ ತಾಳಗಳು, ಬಗೆ ಬಗೆಯ ವೇಷ ಭೂಷಣಗಳನ್ನು, ಬೇರೆ ರಾಜ್ಯದ ಅಥವಾ ದೇಶದ ಜನರು ನೋಡುತ್ತಾರೆ. ಹಾಗಾಗಿ ಯಕ್ಷಗಾನವು ಭರತನಾಟ್ಯ, ಕಥಕ್ ಇತ್ಯಾದಿ ಕಲಾ ಪ್ರಕಾರದ ಜೊತೆಗೆ ರಾಷ್ಟ್ರ ಮಟ್ಟದ ಒಂದು ಕಲೆಯಾಗಬೇಕು ಎಂದು ಹೇಳುತ್ತಾರೆ ನಿಖಿಲ್.
ಯಕ್ಷರಂಗದಲ್ಲಿ ಮುಂದಿನ ಯೋಜನೆ:-
2018ರಲ್ಲಿ ಇವರು ಬೆಂಗಳೂರಿಗೆ ತಮ್ಮ ಕೆಲಸದ ನಿಮಿತ್ತ ಬರುತ್ತಾರೆ. ಅಲ್ಲಿಂದ ವಿದ್ಯಾರ್ಥಿಗಳಿಗೆ ಯಕ್ಷಗಾನ ಹೇಳಿ ಕೊಡುತ್ತಿದ್ದಾರೆ. ಯಕ್ಷಗಾನ ಕಲಿಯಲು ಆಸಕ್ತಿ ಇದ್ದರೂ ಯಕ್ಷಗಾನ ಕಲಿಯಲು ಆಗದವರಿಗೆ ಯಕ್ಷಗಾನ ಹೇಳಿ ಕೊಡುತ್ತಿದ್ದಾರೆ. IT engineer, Doctors, Yoga teachers, Govt employees ಹಾಗೂ 8-18, 20-30, 40+ ವಯಸ್ಸಿನ ಜನರು ಇವರ ಬಳಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
2015ರಲ್ಲಿ ಕಟೀಲು 5ನೇ ಮೇಳದಲ್ಲಿ ಹಾಗೂ 2016ರಲ್ಲಿ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ಮಾಡಿದ ಅನುಭವ. ಯಕ್ಷಗಾನ ರಂಗದಲ್ಲಿ ಒಟ್ಟು 11 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಿಖಿಲ್. ಫೋಟೋಗ್ರಾಫಿ, ವಿಡಿಯೋ ಹಾಗೂ ಫೋಟೋ ಎಡಿಟಿಂಗ್, ಬೈಕ್ ರೈಡಿಂಗ್, ಸ್ವಿಮ್ಮಿಂಗ್ ಇತ್ಯಾದಿ ಇವರ ಹವ್ಯಾಸಗಳು.
ಹೆಚ್ ನಿಖಿಲ್ ಪೈ ಅವರು 07.05.2023ರಂದು ದೀಕ್ಷಾ ನಾಯಕ್ ಅವರನ್ನು ಮದುವೆಯಾಗಿ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ನಿಖಿಲ್ ಪೈ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್
ಶಕ್ತಿನಗರ, ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


