ಜಯಂಟ್ಸ್ ಬ್ರಹ್ಮಾವರ ವಾರ್ಷಿಕ ಮಹಾಸಭೆ ಸಾಧಕರಿಗೆ ಅಭಿನಂದನಾ ಸಮಾರಂಭ

Upayuktha
0


ಬ್ರಹ್ಮಾವರ: ಸಮಾಜದಲ್ಲಿ ನಾವೆಲ್ಲರೂ ಹೊಸ ಚಿಂತನೆಗಳನ್ನು ಬೆಳೆಸಿಕೊಂಡು ಪರಿಸರಕ್ಕೆ ಪೂರಕವಾದ ಕಾರ್ಯ ಮಾಡಬೇಕಾಗಿದೆ ಎಂದು ಡಾ| ಎ.ವಿ ಬಾಳಿಗಾ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರಮನೆ ಹೇಳಿದರು.


ಅವರು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರದ ವತಿಯಿಂದ ಸಿಟಿ ಸೆಂಟರ್ ನಲ್ಲಿ ನಡೆದ ವಾಷಿ೯ಕ ಮಹಾಸಭೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.


ಸೇವಾ ಕಾರ್ಯಗಳನ್ನು ಮಾಡಿದಾಗ ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬೀರಿ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ ಎಂದರು. ಜಯಂಟ್ಸ್ ಫೆಡರೇಶನ್ 6 ರ ಅಧ್ಯಕ್ಷ ಎಲ್.ಬಿ ದೊಡ್ಡಮನಿ ಜಯಂಟ್ಸ್ ನ ಮುಂದಿನ ಕಾರ್ಯಕ್ರಮಗಳ ವಿವರ ನೀಡಿದರು.


ವೇದಿಕೆಯಲ್ಲಿ ಫೆಡರೇಶನ್ ಪೂರ್ವ ಅಧ್ಯಕ್ಷ ಮಧುಸೂಧನ್ ಹೇರೂರು, ಉಪಾಧ್ಯಕ್ಷ ತೇಜೇಶ್ವರ ರಾವ್, ಯೂನಿಟ್ ಡೈರೆಕ್ಟರ್ ವಿವೇಕಾನಂದ ಕಾಮತ್, ಮುಂತಾದವರು ಉಪಸ್ಥಿತರಿದ್ದರು. ಅದ್ಯಕ್ಷತೆಯನ್ನು ಜಯಂಟ್ಸ್ ಅದ್ಯಧ್ಯ ಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಮಿಯಾವಾಕಿ ತಜ್ಞ ಕೆ.ಮಹೇಶ್ ಶೆಣೈ, ಈಜು ಪಟು ಲಿಮ್ಕಾ ದಾಖಲೆಗಾರ ರೋನಾನ್ ಲೂವಿಸ್ ರವರನ್ನು ಸನ್ಮಾನಿಸಲಾಯಿತು.


ಇತ್ತೀಚೆಗೆ ನಿಧನರಾದ ಜಯಂಟ್ಸ್ ಉಡುಪಿ ಮಾಜಿ ಅಧ್ಯಕ್ಷ ಜಯರಾಂ ರಾವ್, ಡಾ. ಎ.ರಾಜಾ ರವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಡಾ. ಜೀವನ್ ಕೃಷ್ಣ ಯುಎಸ್ಐ ರವರ ಪ್ರಾಯೋಜಕತ್ವದಲ್ಲಿ ಅನಾಥ ಶ್ರಮಗಳಿಗೆ  ವಿಲ್ ಚೈರ್ ಗಳನ್ನು ಹಸ್ತಾಂತರಿಸಲಾಯಿತು. ಕಾರ್ಯದರ್ಶಿ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಶ್ರೀನಾಥ ಕೋಟ, ರೊನಾಲ್ಡ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಎ.ಜಿ ಸುವಣ೯ ಮುಂಬಯಿ, ಡಾ. ಅಜಿತ್ ಕುಮಾರ್, ಡಾ. ವಿಶ್ವನಾಥ್, ಜಯಂಟ್ಸ್ ಸದಸ್ಯರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top