ಪ್ರಶ್ನಿಸುವ ಸ್ವಾತ್ರಂತ್ರ್ಯವೇ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆ: ಡಾ. ವಿಶ್ವನಾಥ ಸುಂಕನಾಳ

Upayuktha
0


ಕಾರ್ಕಳ: ಭಾರತೀಯ ಸಂಸ್ಕೃತಿಯಲ್ಲಿ ಪ್ರಶ್ನೆಗೆ ಅವಕಾಶವಿಲ್ಲ ಎಂಬುದು ಸಾಮಾನ್ಯ ನಂಬಿಕೆ. ಆದರೆ ನಿಜವಾಗಿ ಪ್ರಶ್ನೆ ಮತ್ತು ಉತ್ತರಗಳೇ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ ಎಂದು ಶೃಂಗೇರಿ ಸಂಸ್ಕೃತ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ  ಡಾ. ವಿಶ್ವನಾಥ ಸುಂಕಸಾಳ ಅವರು ತಿಳಿಸಿದರು.


ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಘಟಕ ಮತ್ತು ಅಲ್ಲಮಪ್ರಭು ಪೀಠ  ಕಾಂತಾವರ ಇವುಗಳ ಸಹಯೋಗದಲ್ಲಿ ಜೂನ್ 22ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ  ತಿಂಗಳ ಉಪನ್ಯಾಸ   ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ಪ್ರಶ್ನೋಪನಿಷತ್  ಕುರಿತಾಗಿ ಉಪನ್ಯಾಸ ನೀಡಿದರು.


ಆತ್ಮಜ್ಞಾನಿಯಾದ ಗುರುವು ತನ್ನ ಜ್ಞಾನಸಂಪತ್ತನ್ನು ನೀಡುವುದಕ್ಕಾಗಿ ಅರ್ಹ ಶಿಷ್ಯನನ್ನು ಹುಡುಕುತ್ತಿರುತ್ತಾನೆ. ಯೋಗ್ಯ ಶಿಷ್ಯನಿಗೆ ತನ್ನ ಜ್ಞಾನವನ್ನು ಧಾರೆಯೆರೆದು ಗುರು ಶಿಷ್ಯ ಪರಂಪರೆಯು ಮುಂದುವರಿಯುವಂತೆ ಮಾಡುವುದೇ ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.


ಪ್ರಶ್ನೋಪನಿಷತ್ತಿನಲ್ಲಿ ಆರು ಜನ ಶಿಷ್ಯರು ಬ್ರಹ್ಮಾಂಡದ ರಹಸ್ಯ, ಜೀವಗಳ ಬಾಹ್ಯ ಮತ್ತು ಸೂಕ್ಷಮ ಶರೀರ, ಕರ್ಮ ಮತ್ತು ಉಪಾಸನೆ, ಆತ್ಮಜ್ಞಾನ, ಪ್ರಾಣ, ಆನಂದದ ಸ್ವರೂಪ ಮುಂತಾದ ಪ್ರಮುಖ ಪ್ರಶ್ನೆಗಳನ್ನು ಗುರುಗಳಿಗೆ ಕೇಳಿ ಅದಕ್ಕೆ ಸಂವಾದಗಳ ಮೂಲಕ ಉತ್ತರ ಕಂಡುಕೊಳ್ಳುವುದೇ ಇಲ್ಲಿನ ವಿಶೇಷತೆಯಾಗಿದೆ.


ಪ್ರಶ್ನಿಸುವ ಸ್ವಾತ್ರಂತ್ರ್ಯ ನಮ್ಮಲ್ಲಿ ಅನಾದಿ ಕಾಲದಿಂದಲೂ ಇತ್ತು ಎನ್ನುವುದಕ್ಕೂ ಉಪನಿಷತ್ತುಗಳೇ ಸಾಕ್ಷಿಯಾಗಿವೆ ಎಂದರು. ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸುಧಾಕರ ಶ್ಯಾನುಭೋಗ್ ಪ್ರಾರ್ಥಿಸಿ ಮಾಲತಿ ವಸಂತರಾಜ್ ಅವರು ಅತಿಥಿಗಳನ್ನು ಪರಿಚಯಿಸಿದರು. ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಾಲಕೃಷ್ಣ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಗಣೇಶ ಜಾಲ್ಸೂರು ವಂದಿಸಿದರು.

 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top