ಪುತ್ತೂರು: 300 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳ ವಿತರಣೆ

Upayuktha
0



ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಡಾ. ಹರ್ಷಕುಮಾರ್ ರೈ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ತಾನು ಕಲಿತ ಕೆಯ್ಯೂರು ಸರಕಾರಿ ಶಾಲೆಯ ಸುಮಾರು 300 ವಿದ್ಯಾರ್ಥಿಗಳಿಗೆ ಸುಮಾರು 40 ಸಾವಿರ ಮೌಲ್ಯದ ಬರೆಯುವ ಪುಸ್ತಕ ಕೊಡುಗೆಯಾಗಿ ನೀಡಿದರು.

ಈ ಕಾರ್ಯಕ್ರಮದ ಜೊತೆಗೆ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶರತ್ ಕುಮಾರ್, ಕೆಪಿಎಸ್‌ ಕೆಯ್ಯೂರು ಪ್ರಾಂಶುಪಾಲರಾದ ಇಸ್ಮಾಯಿಲ್, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಾಬು ಎಂ ಮುಂತಾದವರು ಉಪಸ್ಥಿತರಿದ್ದರು.



Post a Comment

0 Comments
Post a Comment (0)
To Top