ಯುವವಾಹಿನಿ ಬಂಟ್ವಾಳ ಘಟಕದ ಪದಗ್ರಹಣ

Upayuktha
0


ಬಂಟ್ವಾಳ: ಯುವವಾಹಿನಿ ಯುವಕರ ಸಾಧನೆಗಳ ಹಿಂದಿನ ಶಕ್ತಿಯಾಗಿದೆ, ಎಂದು ಸಿದ್ದಕಟ್ಟೆ ಪ್ರೌಢಶಾಲಾ ಶಿಕ್ಷಕ ಮಹೇಶ್ ಕರ್ಕೇರ ಹೇಳಿದರು.

ಅವರು ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಗಾಣದಪಡ್ಪು ಬಿಸಿ ರೋಡ್ ಇಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ 2024-25 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ನಮ್ಮಲ್ಲಿ ಗುರು ಪರಂಪರೆಯ ಮೂಲಕ ಸಂಸ್ಕಾರ, ಸಂಸ್ಕೃತಿಯು ಅನುಷ್ಠಾನಗೊಳ್ಳುವ ಅಗತ್ಯವಿದೆ, ಶಿಕ್ಷಣದ ಮಹತ್ವದ ಕಡೆ  ಸಂಘಟನೆಗಳ ಗಮನ ಕೇಂದ್ರೀಕೃತಗೊಂಡಾಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ, ಈ ನಿಟ್ಟಿನಲ್ಲಿ ಯುವವಾಹಿನಿಯ ಸಾಧನೆಯು ಶ್ಲಾಘನೀಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ಹರೀಶ್ ಕೋಟ್ಯಾನ್ ಕುದನೆ, ಕಳೆದ ಒಂದು ವರ್ಷ ಯುವವಾಹಿನಿ ಬಂಟ್ವಾಳ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಲು ಸಹಕಾರ ನೀಡಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು. ಶುಭಲಕ್ಷ್ಮೀ ಸಮೂಹ ಸಂಸ್ಥೆಗಳ ಚಂದ್ರಾವತಿ ಸೇಸಪ್ಪ ಕೋಟ್ಯಾನ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಯುವವಾಹಿನಿ (ರಿ.) ಬಂಟ್ವಾಳ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.


ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಪ್ರಥಮ ಉಪಾಧ್ಯಕ್ಷ ನಾರಾಯಣ ಪೂಜಾರಿ ಪಳ್ಳಿಕಂಡ, ದ್ವಿತೀಯ ಉಪಾಧ್ಯಕ್ಷ ನಾಗೇಶ್ ಪೂಜಾರಿ ನೈಬೇಲು ಕಾರ್ಯದರ್ಶಿ ಚೇತನ್ ಮುಂಡಾಜೆ, ಜೊತೆ ಕಾರ್ಯದರ್ಶಿ ಸುನೀಲ್ ಸಾಲ್ಯಾನ್ ರಾಯಿ ಕೋಶಾಧಿಕಾರಿ ಗೀತಾ ಜಗದೀಶ್ ಕಂಜತ್ತೂರು, ಸಾಂಸ್ಕೃತಿಕ ನಿರ್ದೇಶಕ, ಧನುಷ್ ಮಧ್ವ, ಕ್ರೀಡಾ ನಿರ್ದೇಶಕ ಮಧುಸೂಧನ್ ಮಧ್ವ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಸಮಾಜ ಸೇವಾ ನಿರ್ದೇಶಕ

ಪುರುಷೋತ್ತಮ್ ಕಾಯರ್‌ಪಲ್ಕೆ, ಕಲೆ ಮತ್ತು ಸಾಹಿತ್ಯ ನಿರ್ದೇಶಕ ಲೋಹಿತ್ ಕನಪಾದೆ, ವ್ಯಕ್ತಿತ್ವ ವಿಕಸನ ನಿರ್ದೇಶಕ ರಾಜೇಂದ್ರ ಪಲ್ಲಮಜಲು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಕಿರಣ್ ರಾಜ್ ಪೂಂಜರಕೋಡಿ, ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಕುಮಾರ್, ವಿದ್ಯಾರ್ಥಿ ಸಂಘಟನೆ ನಿರ್ದೇಶಕ ಬ್ರಿಜೇಶ್ ಕಂಜತ್ತೂರು, ಪ್ರಚಾರ ನಿರ್ದೇಶಕ ಶ್ರವಣ್ ಅಗ್ರಬೈಲು, ವಿದ್ಯಾನಿಧಿ ನಿರ್ದೇಶಕ ವಿಕ್ರಮ್ ಶಾಂತಿ, 'ಮಹಿಳಾ ಸಂಘಟನಾ ನಿರ್ದೇಶಕಿ ಹರಿಣಾಕ್ಷಿ ನಾವೂರು, ಸಂಘಟನಾ ಕಾರ್ಯದರ್ಶಿ ಉದಯ್ ಪೂಜಾರಿ ಮೇನಾಡು, ಸೃಜನಿ ಬೊಳ್ಳಾಯಿ ಇವರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.


ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಕೆ ಮಾಡಿದರು. 


ಗೌರವ ಅಭಿನಂದನೆ:

ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಿಖಿಲ್ ಪೂಜಾರಿ, ವಿನಿಲ್ ಪೂಜಾರಿ ಹಾಗೂ ಬಂಟ್ವಾಳ ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಹಾಗೂ ಬಂಟ್ವಾಳ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ಸುಧೀರ್ ಪೂಂಜರೆಕೋಡಿ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಸದಸ್ಯರು ಯುವವಾಹಿನಿ ಬಂಟ್ವಾಳ ಘಟಕದ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.


ಎಲ್ಲರ ಸಹಕಾರದಿಂದ ಯುವವಾಹಿನಿ ಬಂಟ್ವಾಳ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ತನ್ನಲ್ಲಿದೆ ಎಂದು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ಸುವರ್ಣ ರಾಯಿ ತಿಳಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಹಾಗೂ ಕಳೆದ ಒಂದು ವರ್ಷದಲ್ಲಿ ಘಟಕವನ್ನು ಯಶಸ್ವಿಯಾಗಿ ಮುನ್ನಡೆಸಿದ ಹರೀಶ್ ಕೋಟ್ಯಾನ್ ಕುದನೆ ಮತ್ತು ನಿಕೇಶ್ ಕೋಟ್ಯಾನ್ ಇವರನ್ನು ಈ ಸಂದರ್ಭದಲ್ಲಿ ಬಂಟ್ವಾಳ ಘಟಕದ ಪರವಾಗಿ ಅಭಿನಂದಿಸಲಾಯಿತು.


ಯುವವಾಹಿನಿಯ ವಿವಿಧ ಘಟಕಗಳಿಂದ ಆಗಮಿಸಿದ ಸದಸ್ಯರು ನೂತನ ತಂಡಕ್ಕೆ ಶುಭ ಹಾರೈಕೆ ಮಾಡಿದರು. ಸಹನಾ ಕರ್ಕೇರ ಪ್ರಾರ್ಥಿಸಿ, ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಸ್ವಾಗತಿಸಿದರು, ಮಾಜಿ ಅಧ್ಯಕ್ಷ ರಾಜೇಶ್ ಬಿ ಪ್ರಾಸ್ತಾವಿಕ ಮಾತಾಡಿದರು.  ಕಾರ್ಯದರ್ಶಿ ನಿಕೇಶ್ ಕೋಟ್ಯಾನ್ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ಚೇತನ್ ಮುಂಡಾಜೆ ವಂದಿಸಿ, ಯುವವಾಹಿನಿ ಬೆಳ್ತಂಗಡಿ ಘಟಕದ ಸದಸ್ಯೆ ಪ್ರಜ್ಞಾ ಪೂಜಾರಿ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top