ಕೆನರಾ ಕಾಲೇಜಿನಲ್ಲಿ ವಿಚಾರ ಗೋಷ್ಠಿ- ಸ್ನೇಹ ಸಂವಾದ

Upayuktha
0


ಮಂಗಳೂರು: ಕೆನರಾ ಕಾಲೇಜು ಕನ್ನಡ ವಿಭಾಗದ ವತಿಯಿಂದ ದ್ವಿತೀಯ ಬಿ.ಸಿ.ಎ ನಾಲ್ಕನೇ ಚತುರ್ಮಾಸದ 'ಸ್ನೇಹ ಗಂಗೆ' ಪಠ್ಯ ಪೂರಕ ವಿಚಾರಗೋಷ್ಠಿ 'ಸ್ನೇಹ ಸಂವಾದ' ನಡೆಯಿತು. ಸಾಮಾಜಿಕ ಕಾರ್ಯಕರ್ತ ಮಂಜೇಶ್ವರದ 'ಸ್ನೇಹಾಲಯ' ಸ್ಥಾಪಕ ಜೋಸೆಫ್ ಕ್ರಾಸ್ತಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. 'ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕಿದೆ. ಎಲ್ಲರೂ ಪರಸ್ಪರ ಪ್ರೀತಿಯಿಂದ ಬಾಳಬೇಕು. ಇಂದಿನ ಯುವ ಜನತೆ ಧನಾತ್ಮಕ ಬದಲಾವಣೆ ಆಗುವುದರ ಆಗುವ ಮೂಲಕ ಸತ್ಪ್ರಜೆಯಾಗಿ ಬಾಳಬಹುದು' ಎಂದರು.


ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರು ಅತಿಥಿಗಳನ್ನು ಪರಿಚಯಿಸಿ, ಮಾನಸಿಕ ಅಸ್ವಸ್ಥರಿಗೆ ದೀನರಿಗೆ ಆರೈಕೆ ನೀಡುವ ಜೊತೆಗೆ ಉಚಿತ ಆಂಬುಲೆನ್ಸ್ ಸೇವೆ, ವಿವಾಹ, ಮದ್ಯವರ್ಜನ ಶಿಬಿರಗಳನ್ನು ನಡೆಸುತ್ತ ಬಂದಿರುವ ಸ್ನೇಹಾಲಯವು ಕೈಗೊಳ್ಳುತ್ತಿರುವ ಸಮಾಜಸೇವೆಯ ಅರಿವು ಮೂಡಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು. ಎಸ್ ಸ್ವಾಗತಿಸಿ, ಶಮಿಕಾ ವಂದಿಸಿದರು. ಲಿಖಿತ್ ನಿರೂಪಿಸಿದರು. ಶೈಲಜಾ ಪುದುಕೋಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top