ಕುಂಬಳೆ: ಸರೋವರ ಕ್ಷೇತ್ರ ಶ್ರೀ ಅನಂತಪುರದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ ಇದೇ ಮೊದಲ ಬಾರಿಗೆ ಇಂದು ಸಂಜೆ (ಶುಕ್ರವಾರ, ಜೂ.14) ಕ್ಷೇತ್ರದ ಪ್ರಾಂಗಣವನ್ನು ಏರಿದೆ.
ದೇಗುಲದ ಗರ್ಭಗುಡಿಯ ಹತ್ತಿರವೇ ವಿಶ್ರಾಂತಿ ಪಡೆದಿದೆ. ಈ ಹೊತ್ತಿಗೆ ಕ್ಷೇತ್ರದ ನಡೆ ಮುಚ್ಚಿತ್ತು. ಸಂಜೆ ಕ್ಷೇತ್ರದ ನಡೆ ತೆರೆದ ಅರ್ಚಕರಿಗೆ ಈ ಭವ್ಯ ದೃಶ್ಯ ಗೋಚರವಾಗಿದ್ದು ಅವರು ಇದನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಭಕ್ತಿ, ಭಾವುಕತೆಯಿಂದ ಹಂಚಿಕೊಂಡಿದ್ದಾರೆ. ಈ ಚಿತ್ರ ಮಾಹಿತಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಣಿಪುರ ಮ್ಯಾಗಜಿನ್ ಫೇಸ್‌ಬುಕ್ ಪುಟದಲ್ಲಿ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ ಚಂಬಿಲ್ತಿಮಾರ್ ಈ ಚಿತ್ರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅನಂತಪುರ ಕ್ಷೇತ್ರದ ಕೆರೆಯಲ್ಲಿ ವಾಸವಾಗಿದ್ದ ದೇವರ ಮೊಸಳೆ ಬಬಿಯಾ-2 ತೀರಿಕೊಂಡು ಸರಿಯಾಗಿ ಒಂದು ವರ್ಷದ ಹೊತ್ತಿಗೆ ಈ ಮರಿ ಮೊಸಳೆ ಬಬಿಯಾ-3 ಕೆರೆಯಲ್ಲಿ ಕಾಣಿಸಿಕೊಂಡು ವ್ಯಾಪಕ ಸುದ್ದಿಯಾಗಿತ್ತು. ಆದರೆ ಆಗ ಒಮ್ಮೆ ಮಾತ್ರ ಅಸ್ಪಷ್ಟವಾಗಿ ಗೋಚರಿಸಿದ್ದ ಈ ಮರಿ ಮೊಸಳೆ ಇದೀಗ ಅತ್ಯಂತ ಸ್ಪಷ್ಟ ರೂಪದಲ್ಲಿ ಕಾಣಿಸಿಕೊಂಡಿದ್ದು, ನಂಬದವರೆಲ್ಲರೂ ನಂಬುವಂತಹ ಸಾಕ್ಷ್ಯವನ್ನು ತೋರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ