ಪಣಜಿ: ಗೋವಾದ ವಾಸ್ಕೊ ಜುವಾರಿನಗರದ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ ಪ್ರೌಢಶಾಲೆಯಲ್ಲಿ ಕನ್ನಡ ಶಾಲಾ ಪ್ರಾರಂಭೋತ್ಸವವನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶನ, ಗೊಂಬೆಯಾಟ- ಹೀಗೆ ವಿವಿಧ ಕಾರ್ಯಕ್ರಮ ಮಾಡುವ ಮೂಲಕ ಕನ್ನಡ ಶಾಲಾ ಪ್ರಾರಂಭೋತ್ಸವವನ್ನು ಆಚರಣೆ ಮಾಡಿ ಮಕ್ಕಳನ್ನು ಶಾಲೆಯೆಡೆಗೆ ಸೆಳೆಯುವ ಪ್ರಯತ್ನ ಮಾಡಲಾಯಿತು.
ಈ ಸಂದರ್ಭದಲ್ಲಿ ಅಖಿಲ ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಹನಮಂತಪ್ಪ ಶಿರೂರ್ ರೆಡ್ಡಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ- ಗೋವಾದಲ್ಲಿ ಕನ್ನಡ ಶಾಲೆಗಳು ಉಳಿಯಬೇಕು ಮತ್ತು ಕನ್ನಡ ಶಾಲೆಗಳು ಬೆಳೆಯಬೇಕು. ಕನ್ನಡ ಸಂಘಟನೆಗಳು ಕನ್ನಡ ಶಾಲೆಯೊಂದಿಗೆ ನಿಕಟ ಸಂಬಂಧ ಹೊಂದಬೇಕು. ಕನ್ನಡ ಶಾಲೆಯಲ್ಲಿ ಕಲಿಯುವ ಮಕ್ಕಳು ಮನ್ನಡ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಹೊಂದಿರಬೇಕು. ಜನ್ನಡ ಶಾಲಾ ಪ್ರಾರಂಭೋತ್ಸವವನ್ನು ಒಂದು ಹಬ್ಬದ ರೀತಿಯಲ್ಲಿ ಆಯೋಜಿಸುವ ಮೂಲಕ ಮಕ್ಕಳನ್ನು ಮತ್ತೆ ಶಾಲೆಯತ್ತ ಆಕರ್ಷಿಸುತ್ತಿರುವುದು ಒಂದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾತಾ ಮನ್ನಿಕೇರಿ ಮತ್ತು ಕನ್ನಡ ಸಂಘ ಜುವಾರಿ ನಗರದ ಉಪಾಧ್ಯಕ್ಷರಾದ ಪರಶುರಾಮ ಚವ್ಹಾಣ, ಶಾಲೆಯ ಮುಖ್ಯ ಗುರುಗಳಾದ ಪಿ.ವ್ಪಿ ಪಾಟೀಲ, ವ್ಹಿ ಟಿ ಅರಬೆಂಚಿ ಉಪಸ್ಥಿತರಿದ್ದು ಮಾತನಾಡಿದರು.
ಕನ್ನಡ ಸಂಘ ಜುವಾರಿ ನಗರದ ಕಾರ್ಯದರ್ಶಿ ದಾವಲ ಸಾಬ್ ನದಾಫ್, ಸಹ ಕಾರ್ಯದರ್ಶಿ ಸಂಗಮೇಶ ನಾಗೋಡ, ಖಜಾಂಚಿ ಮಾರುತಿ ಹಾದಿಮನಿ, ಸಹ ಖಜಾಂಚಿ ಸಿದ್ಧನಗೌಡ ಗೌಡರ್, ನಾಮದೇವ ಲಮಾಣ, ಕಾರ್ಯಕಾರಿಣಿ ಸದಸ್ಯರಾದ ಚಂದ್ರಶೇಖರ ಬಿಂಗಿ ಮತ್ತು ಕಲಾ ತಂಡಗಳ ಮುಖ್ಯಸ್ಥರಾದ ಏ ನಾಗರಾಜ್ ಮತ್ತು ಗೋಂಬೆಯಾಟ ತಂಡದ ಮುಖ್ಯಸ್ಥರಾದ ಸಿದ್ದು ಬಿರಾದರ ಮತ್ತು ಕನ್ನಡ ಶಾಲಾ ಶಿಕ್ಷಕ ವೃಂದ ಮತ್ತು ಕನ್ನಡ ಶಾಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ