ಮಂಗಳೂರು: 'ಅದಾನಿ ಒನ್' ಮತ್ತು 'ಐಸಿಐಸಿಐ ಬ್ಯಾಂಕ್' ಇಂದು 'ವೀಸಾ' ಸಂಸ್ಥೆಯ ಸಹಯೋಗದೊಂದಿಗೆ ವಿಮಾನ ನಿಲ್ದಾಣ ಸಂಬಂಧಿತ ಪ್ರಯೋಜನಗಳನ್ನು ಹೊಂದಿದ ಭಾರತದ ಮೊದಲ ಕೋ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‍ಗಳನ್ನು ಬಿಡುಗಡೆ ಮಾಡಿವೆ. ಅದಾನಿ ಒನ್ ಐಸಿಐಸಿಐ ಬ್ಯಾಂಕ್ ಸಿಗ್ನೇಚರ್ ಕ್ರೆಡಿಟ್ ಕಾರ್ಡ್ ಮತ್ತು ಅದಾನಿ ಒನ್ ಐಸಿಐಸಿಐ ಬ್ಯಾಂಕ್ ಪ್ಲಾಟಿನಂ ಕ್ರೆಡಿಟ್ ಕಾರ್ಡ್' ಎಂಬ ಎರಡು ರೂಪಾಂತರಗಳಲ್ಲಿ ಇವು ಲಭ್ಯವಿವೆ.
'ಅದಾನಿ ಒನ್' ಅಪ್ಲಿಕೇಶನ್‍ನಂತಹ ಅದಾನಿ ಗ್ರೂಪ್'ನ ಗ್ರಾಹಕ ಪರಿಸರ ವ್ಯವಸ್ಥೆಯಲ್ಲಿ ಮಾಡುವ ವೆಚ್ಚಗಳಿಗೆ ಇವುಗಳನ್ನು ಬಳಸಿದರೆ ಶೇಕಡ 7 ರ ವರೆಗೆ ಅದಾನಿ ರಿವಾರ್ಡ್ ಪಾಯಿಂಟ್'ಗಳನ್ನು ಪಡೆಯಬಹುದು ಎಂದು ಅದಾನಿ ಗ್ರೂಪ್‍ನ ಅಧ್ಯಕ್ಷ ಗೌತಮ್ ಅದಾನಿ ಮತ್ತು ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಝಾ ಹೇಳಿದ್ದಾರೆ.
ವಿಮಾನ, ಹೋಟೆಲ್, ರೈಲು, ಬಸ್ಸು ಮತ್ತು ಕ್ಯಾಬ್‍ಗಳನ್ನು ಇದರ ಮೂಲಕ ಕಾಯ್ದಿರಿಸಬಹುದು; ಅದಾನಿ ನಿರ್ವಹಿಸುವ ವಿಮಾನ ನಿಲ್ದಾಣಗಳು; ಅದಾನಿ ಸಿಎನ್‍ಜಿ ಪಂಪ್‍ಗಳು; ಅದಾನಿ ವಿದ್ಯುತ್ ಬಿಲ್‍ಗಳು, ಮತ್ತು ಆನ್‍ಲೈನ್ ರೈಲು ಬುಕಿಂಗ್ ವೇದಿಕೆಯಾದ 'ಟ್ರೈನ್‍ಮ್ಯಾನ್'ನಲ್ಲೂ ಈ ಕಾರ್ಡ್‍ಗಳನ್ನು ಬಳಸಿ, ಪ್ರಯೋಜನ ಪಡೆಯಬಹುದು. ವಿಶೇಷವೆಂದರೆ ಕಾರ್ಡ್ ಬಳಕೆಯಿಂದ ಬರುವ ರಿವಾರ್ಡ್‍ಗಳಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಪ್ರಕಟಣೆ ಹೇಳಿದೆ.
ಉಚಿತ ವಿಮಾನ ಟಿಕೆಟ್‍ಗಳು ಮತ್ತು ಪ್ರೀಮಿಯಂ ಲಾಂಜ್ ಪ್ರವೇಶ, 'ಪ್ರಾಣಾಮ್ ಮೀಟ್ & ಗ್ರೀಟ್', ಪೋರ್ಟರ್, ವ್ಯಾಲೆಟ್ ಮತ್ತು ಪ್ರೀಮಿಯಂ ಕಾರ್ ಪಾರ್ಕಿಂಗ್‍ನಂತಹ ವಿಮಾನ ನಿಲ್ದಾಣ ಸಂಬಂಧಿತ ಆರಂಭಿಕ ಪ್ರಯೋಜನಗಳು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಈ ಕಾರ್ಡ್‍ಗಳು ನೀಡುತ್ತವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ