ಮಂಗಳೂರು: ನಗರದ ಫಿಜಾ ಬೈ ನೆಕ್ಸಸ್‍ನಲ್ಲಿ ಈ ತಿಂಗಳ 7 ರಿಂದ 9ರವರೆಗೆ ಹಲಸಿನ ಹಬ್ಬ ಆಯೋಜಿಸಲಾಗಿದೆ. ಜತೆಗೆ ಜೂನ್ 21ರಿಂದ 23ರವರೆಗೆ ಬಹು ನಿರೀಕ್ಷಿತ ಮಾನ್ಸೂನ್ ಬೈಟ್ಸ್ ಮೇಳ ನಡೆಯಲಿದೆ.
ಕಳೆದ ವರ್ಷದ ಅದ್ಭುತ ಯಶಸ್ಸಿನ ನಂತರ ಈ ಬಾರಿ 2ನೇ ಆವೃತ್ತಿಯನ್ನು ಇನ್ನಷ್ಟು ವಿಸ್ತೃತವಾಗಿ ಮತ್ತು ವೈವಿಧ್ಯಮಯವಾಗಿ ನೆಲಮಹಡಿಯ ಓಪನ್ ಪ್ಲಾಜಾದಲ್ಲಿ ಹಮ್ಮಿಕೊಳ್ಳಲಾಗಿದೆ. ಆಹಾರಪ್ರಿಯರಿಗೆ ಮುದ ನೀಡುವ ಮತ್ತು ಸ್ಥಳೀಯ ಮಾರಾಟಗಾರರನ್ನು ಬೆಂಬಲಿಸುವ ಉದ್ದೇಶದಿಂದ ಈ ಎರಡೂ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿ ಹೆಚ್ಚಿನ ಮಳಿಗೆಗಳು, ಹೆಚ್ಚಿದ ಜನಸಂದಣಿ ಮತ್ತು ವೈವಿಧ್ಯಮಯ ಚಟುವಟಿಕೆಗಳು ಹಬ್ಬಕ್ಕೆ ಮೆರುಗು ನೀಡಲಿವೆ ಎಂದು ಪ್ರಕಟಣೆ ಹೇಳಿದೆ.
ಹಲಸಿನ ಹಬ್ಬವು ಹಲಸಿನ ಹಣ್ಣಿನ ಹಲವಾರು ಆರೋಗ್ಯ ಪ್ರಯೋಜನಗಳು ಮತ್ತು ಮಾರುಕಟ್ಟೆ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಸ್ಥಳೀಯ ಮಾರಾಟಗಾರರು ಈ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಲಸಿನ ಹಣ್ಣಿನ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯನ್ನು ಪ್ರದರ್ಶಿಸುತ್ತಾರೆ.
ಮಂಗಳೂರಿನ ಪ್ರಾದೇಶಿಕ ಪಾಕಪದ್ಧತಿಯನ್ನು ಉತ್ತೇಜಿಸುವ ಉದ್ದೇಶದ ಮಾನ್ಸೂನ್ ಬೈಟ್ಸ್‌ನಲ್ಲಿ ಮಂಗಳೂರು ಬನ್ಸ್, ಗೋಳಿಬಜೆಯಂತಹ ಗರಿಗರಿಯಾದ ಬಿಸಿ ಆಹಾರ ಪದಾರ್ಥಗಳು, ಪೋಡಿಗಳು, ಪಕೋಡಗಳು ಇತ್ಯಾದಿ ಮತ್ತು ಮಳೆಗಾಲಕ್ಕೆ ವಿಶೇಷ ಕಷಾಯದಂತಹ ಪ್ರಾದೇಶಿಕ ಪಾನೀಯಗಳು ಒಂದೇ ಸೂರಿನಡಿ ಲಭ್ಯ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ