ಮಂಗಳೂರು: ಕ್ರಿಯೇಟರ್ ಯೂನಿವರ್ಸಿಟಿ ಹಾಗೂ ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮಗಳನ್ನು ಅಮೆಜಾನ್.ಇನ್ ಆರಂಭಿಸಿದೆ.
ಕ್ರಿಯೇಟರ್ ವ್ಯವಸ್ಥೆಯಡಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುವಂತೆ ಕಂಟೆಂಟ್ ಕ್ರಿಯೇಟರ್ ಗಳಿಗೆ ಮಾಹಿತಿ ಮತ್ತು ಅಗತ್ಯ ಪರಿಕರಗಳನ್ನು ಒದಗಿಸುವ ಉದ್ದೇಶದಿಂದ ಕಂಟೆಂಟ್ ಯೂನಿವರ್ಸಿಟಿ ಹೆಸರಿನಲ್ಲಿ ಕಲಿಕಾ ಕಾರ್ಯಕ್ರಮ ರೂಪಿಸಲಾಗಿದೆ. ಬೇರೆ ಬೇರೆ ವರ್ಗಗಳಿಗೆ ಸೇರಿದ ಕಂಟೆಂಟ್ ಕ್ರಿಯೇಟರ್ ಗಳಿಗೆ, ಹಳಬರಿಗೆ ಹಾಗೂ ಈ ಕ್ಷೇತ್ರದಲ್ಲಿ ಛಾಪು ಮೂಡಿಸುವ ಆಸಕ್ತಿ ಹೊಂದಿರುವವರಿಗೆ ಈ ಕಾರ್ಯಕ್ರಮವು ನೆರವಾಗಲಿದೆ.
ಸಂಪನ್ಮೂಲಗಳನ್ನು ಬಹಳ ಎಚ್ಚರಿಕೆಯಿಂದ ಇಲ್ಲಿ ಆಯ್ಕೆ ಮಾಡಲಾಗಿದ್ದು, ಅಮೆಜಾನ್ ಮಾರುಕಟ್ಟೆ ಯಲ್ಲಿ ಸುಸ್ಥಿರವಾದ ವಹಿವಾಟನ್ನು ಬೆಳೆಸಲು ಅಗತ್ಯವಿರುವ ಮೂಲಭೂತ ಮಾಹಿತಿಯನ್ನು ಹಾಗೂ ಪ್ರಾಯೋಗಿಕವಾದ ಕಾರ್ಯತಂತ್ರಗಳನ್ನು ಈ ಕಾರ್ಯಕ್ರಮವು ಒದಗಿಸುತ್ತದೆ ಎಂದು ಕಂಪನಿಯ ಭಾರತ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳ ಶಾಪಿಂಗ್ ಎಕ್ಸ್ ಪೀರಿಯೆನ್ಸ್ ವಿಭಾಗದ ನಿರ್ದೇಶಕ ಕಿಶೋರ್ ಥೋಟಾ ಹೇಳಿದ್ದಾರೆ.
ಅಮೆಜಾನ್ ವ್ಯವಸ್ಥೆಯಲ್ಲಿ ಕ್ರಿಯೇಟರ್ ಗಳಿಗೆ ಬೆಳವಣಿಗೆ ಸಾಧಿಸಲು ನೆರವು ನೀಡುವ ಉದ್ದೇಶದಿಂದ ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮ ರೂಪಿಸಲಾಗಿದೆ. ಇದು ಕ್ರಿಯೇಟರ್ ಗಳಿಗೆ ಹೆಚ್ಚಿನ ಸಂಪರ್ಕಗಳನ್ನು ಕಟ್ಟಿಕೊಳ್ಳಲು, ಕಲಿಯಲು ಹಾಗೂ ಬೆಳೆಯಲು ಸಹಾಯ ಮಾಡುತ್ತದೆ.
ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮವು ಹಲವು ಬಗೆಯ ಸಂವಾದದ ಅವಕಾಶಗಳನ್ನು ಒದಗಿಸುತ್ತದೆ. ಇನ್‍ಫ್ಲುಯೆನ್ಸರ್ ಗಳು ಆಯೋಜಿಸುವ ಕಾರ್ಯಾಗಾರಗಳು, ಅಮೆಜಾನ್‍ನ ನಾಯಕರನ್ನು ಹಾಗೂ ಈಗಾಗಲೇ ಹೆಸರು ಮಾಡಿರುವ ಕ್ರಿಯೇಟರ್ ಗಳನ್ನು ಭೇಟಿ ಮಾಡುವ ಅವಕಾಶ, ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಯಾವುದು ಎಂಬ ಬಗ್ಗೆ ಚರ್ಚೆ ಸೇರಿದಂತೆ ಹಲವು ಅವಕಾಶಗಳು ಇಲ್ಲಿ ಇರಲಿವೆ. ಮೊದಲ ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮ 'ಸಮ್ಮರ್ ಎಸ್ಕೇಪ್' ಮುಂಬೈನಲ್ಲಿ ಜೂನ್ 3ಕ್ಕೆ ಆರಂಭವಾಗಿದೆ ಎಂದು ಪ್ರಕಟಣೆ ಹೇಳಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ