ದೇಶದ ಮುಂದಿನ ಭವಿಷ್ಯದ ರೂವಾರಿಗಳು ನಮ್ಮ ವಿದ್ಯಾರ್ಥಿಗಳು - ಪ್ರೊ. ಪಿ.ಎಲ್. ಧರ್ಮ

Upayuktha
0

ವಿವೇಕಾನಂದ ಪದವಿ ಕಾಲೇಜಿನಲ್ಲಿ ಸಪ್ತಪರ್ಣೋತ್ಸವ-ವಿದ್ಯಾರ್ಥಿ ಸಂಘದ ದಿನಾಚರಣೆ 



ಪುತ್ತೂರು:  ವಿವೇಕಾನಂದ ಕಾಲೇಜು ಹಲವಾರು ವರ್ಷಗಳಿಂದ ವಿವಿಧ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿದೆ. ಪ್ರಸ್ತುತ  ಸ್ವಾಯತ್ತ ಸಂಸ್ಥೆಯಾಗಿ ಮುನ್ನಡೆಯುತ್ತಿದೆ.ಕಾಲೇಜು  ಈಗಾಗಲೇ ಬೆಳವಣಿಗೆ ಹೊಂದಿ, ಇನ್ನು ಹೊಸ ಹೊಸ ಪ್ರಯೋಗ ಗಳನ್ನು ಕಾಲೇಜು ಮಾಡಬೇಕಿದೆ ಜೊತೆಗೆ. ಇಲ್ಲಿನ ವಿದ್ಯಾರ್ಥಿಗಳಲ್ಲಿ ಶಿಸ್ತು,ಉತ್ತಮ ಮೌಲ್ಯಗಳಿವೆ.  ವಿದ್ಯಾರ್ಥಿ ಮತ್ತು ಅಧ್ಯಾಪಕ ಪರಂಪರೆಯನ್ನು ಬೆಳೆಯಬೇಕು. ಇಂದಿನ ವಿದ್ಯಾರ್ಥಿ ಸಮೂಹವೇ ನಮ್ಮ ದೇಶದ ಮುಂದಿನ ಭವಿಷ್ಯದ ರೂವಾರಿಗಳು. ಆದ್ದರಿಂದ ನಾವೆಲ್ಲರು ಒಗ್ಗಟ್ಟಾಗಿ ಶ್ರಮಿಸಬೇಕು. ಪರಸ್ಪರ ಗೌರವ ಕೊಡುವುದನ್ನು ಬೆಳೆಸಿಕೊಳ್ಳೋಣ ಎಲ್ಲರಲ್ಲೂ ಸಮಾನತೆ ಕಾಣೋಣ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್ ಧರ್ಮ ಹೇಳಿದರು.

 

ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ನಡೆದ ಸಪ್ತಪರ್ಣೊತ್ಸವ, ವಿದ್ಯಾರ್ಥಿ ಸಂಘದ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ  ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಅಧ್ಯಕ್ಷೀಯಮಾತುಗಳನ್ನಾಡಿ,ಹೊಸ ಚಿಂತನೆ ಹೊಸ ಕಲ್ಪನೆಯೊಂದಿಗೆ ಹಳೆಯ ಆಚರಣೆಗಳು ಮುನ್ನೆಲೆಗೆ ಬರಬೇಕು. ವಿದ್ಯಾರ್ಥಿ ಶಕ್ತಿ ರಾಷ್ಟ್ರ ಶಕ್ತಿ. ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ವಿಶೇಷ ಚೈತನ್ಯ ಇವರಲ್ಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗೋಣ ಎಂದು ಹೇಳಿದರು.

 

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಇಂದು ವಿದ್ಯಾರ್ಥಿಗಳು ಶಿಕ್ಷಣವಂತರಾಗುತ್ತಿದ್ದಾರೆ, ಆದರೆ ನಮ್ಮ ಮುಂದಿರುವ ಸಮಸ್ಯೆ ಅವರನ್ನು ಉದ್ಯೋಗಸ್ಥರನ್ನಾಗಿ ಮಾಡುವುದು. ವಿದ್ಯಾರ್ಥಿಗಳ ಮುಂದೆ ನಮ್ಮ ಆಚರಣೆ, ಸಂಪ್ರದಾಯ, ಮತ್ತು ಸಂಸ್ಕೃತಿಯನ್ನು ಉಳಿಸಿ ಅದನ್ನು ಮುಂದುವರಿಸುವ ದೊಡ್ಡ ಜವಾಬ್ದಾರಿ ಇದೆ ಎಂದು ಅಭಿಪ್ರಾಯಪಟ್ಟರು.


ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳೀ ಕೃಷ್ಣ  ಕೆ.ಎನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ  ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ,ಕ್ರೀಡಾಕೂಟಗಳಲ್ಲಿ ವಿಜೇತರಾದ ಮತ್ತು ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.


ಕಾಲೇಜಿನ ಈ ಬಾರಿಯ ವಿದ್ಯಾರ್ಥಿ ಸಂಘದ ವರದಿಯನ್ನು ತೃತೀಯ ಬಿಕಾಂ ವಿದ್ಯಾರ್ಥಿ ಪವನ್ ರಾಜ್ ವಾಚಿಸಿದರು.


ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣುಗಣಪತಿ ಭಟ್, ಆಡಳಿತ ಮಂಡಳಿಯ ಖಜಾಂಜಿ ಎಂ.ಶ್ರೀನಿವಾಸ ಸಾಮಂತ, ಆಡಳಿತ ಮಂಡಳಿಯ ಸದಸ್ಯರುಗಳಾದ ಜಗನ್ನಾಥ ಎ, ಶುಭ ಅಡಿಗ, ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ಹೆಚ್. ಜಿ ಶ್ರೀಧರ್, ಕಾಲೇಜಿನ ವಿಶೇಷ ಅಧಿಕಾರಿ ಡಾ. ಶ್ರೀಧರ್ ನಾಯ್ಕ್ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ವಿದ್ಯಾರ್ಥಿ ಸಂಘದ ಅಧ್ಯಕ್ಷ ತೇಜಸ್ ಸ್ವಾಗತಿಸಿ,ಜೊತೆ ಕಾರ್ಯದರ್ಶಿ ಅನಿಷಾ ಎಮ್.ಎನ್ ವಂದಿಸಿ, ದ್ವಿತೀಯ ಎಂಕಾA ವಿದ್ಯಾರ್ಥಿನಿ ಸ್ವಾತಿ. ಎನ್ ಹಾಗೂ ತೃತೀಯ ಬಿಕಾಂ ವಿದ್ಯಾರ್ಥಿನಿ ಕೀರ್ತನಾ ನಿರ್ವಹಿಸಿದರು.


ಈ ಸಂದರ್ಭದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ಪ್ರಥಮ ಬಿಎ ಯ ಸುಬ್ರಮಣ್ಯ ಇವರನ್ನು ಅಭಿನಂದಿಸಲಾಯಿತು.


ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಲ್ ಧರ್ಮ ಅವರನ್ನು ಕಾಲೇಜು ಪರವಾಗಿ ಮತ್ತು ವಿವೇಕಾನಂದ ಬಿ. ಎಡ್ ಕಾಲೇಜು ಪರವಾಗಿ ಸನ್ಮಾನಿಸಲಾಯಿತು ಮತ್ತು ವಿಶೇಷ ಸಾಧನೆ ಮಾಡಿದ ಕಾಲೇಜಿನ ಉಪನ್ಯಾಸಕರನ್ನು ಗೌರವಿಸಲಾಯಿತು.


ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top