‘ಆಳ್ವಾಸ್ ವೈಭವ’ ಅರ್ಪಣಾ ಗೀತೆಯ ಬಿಡುಗಡೆ

Upayuktha
0


ವಿದ್ಯಾಗಿರಿ: ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಹಾದಿಯಲ್ಲಿ, ಪ್ರತಿ ಹಂತದ ಬೆಳವಣಿಗೆಯನ್ನು ದಾಖಲಿಸಿಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು  ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದರು.


ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ, ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಹೊರತಂದ ‘ಆಳ್ವಾಸ್ ವೈಭವ’ ಅರ್ಪಣಾ ಗೀತೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಇಂದಿನ ದಿನಗಳಲ್ಲಿ  ದಾಖಲೆಗಳು ಇಲ್ಲದೆ ಇದ್ದರೆ ಯಾರು ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮ ಸಾಧನೆಗಳನ್ನು ಮೌಖಿಕವಾಗಿ ಹೇಳಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ವಿದ್ಯಾರ್ಥಿಗಳು ತಮ್ಮ ದಿನ ನಿತ್ಯದ ಚಟುವಟಿಕೆಗಳನ್ನು ದಾಖಲೀಕರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ, ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ ಎಂದರು. ನಂತರ ತಾವು ದೇಶ- ವಿದೇಶಗಳಲ್ಲಿ ನೃತ್ಯ ಪ್ರದರ್ಶನ  ನೀಡಿದ ಅನುಭವವನ್ನು ಹಂಚಿಕೊAಡರು.


ಆಳ್ವಾಸ್ ವೈಭವ ಅರ್ಪಣಾ ಗೀತೆ ತಂಡವನ್ನು ಉದ್ದೇಶಿಸಿ ಮಾತನಾಡಿದ ಅವರು  ನಮ್ಮಿಂದ ಲಭಿಸಿದ ಚಿಕ್ಕ ಸಹಕಾರದ ಹೊರತಾಗಿಯೂ, ವಿದ್ಯಾರ್ಥಿಗಳ ಶ್ರಮದಿಂದ ಉತ್ತಮ ವೀಡಿಯೋ ಮೂಡಿಬಂದಿದೆ. ಈ ವೀಡಿಯೋ ಆಳ್ವಾಸ್‌ನ ಚಟುವಟಿಕೆಗಳನ್ನು  ಸಣ್ಣ ತುಣುಕಿನ ಮೂಲಕ ತೋರಿಸುವ ಪ್ರಯತ್ನ ಶ್ಲಾಘನೀಯ ಎಂದರು. ಸಾಹಿತ್ಯ, ಸಂಕಲನ ಹಾಗೂ ನಿರ್ದೇಶನ ಮಾಡಿದ ಸಂಕೇತ್ ಮುಳುಗುಂದ್ ತಮ್ಮ ಅನುಭವ ಹಂಚಿಕೊAಡರು. 


ಕಾರ್ಯಕ್ರಮದಲ್ಲಿ   ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಸಂಗೀತ ನಿರ್ದೇಶಕ ಗೌತಮ್ ಕೆ, ನಿರ್ದೇಶನ ವಿಭಾಗದ ದರ್ಶನ್, ಗೌತಮ್ ಕುಮಾರ್, ಸಾತ್ವಿಕ್,   ಸಿನಿಮಾಟೋಗ್ರಾಫರ್ ವಿನೀತ್‌ರಾಜ್, ಗಾಯಕಿ ಆಶಿಕಾ ಆಚಾರ್ಯ ಇದ್ದರು.


ಕಾರ್ಯಕ್ರಮವನ್ನು ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top