ಮಂಗಳೂರು: ಎಂಟಿಆರ್ ತನ್ನ 100 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ, ಎಂಟಿಆರ್ ಕರುನಾಡು ಸ್ವಾದ ಎಂಬ ವಿಶಿಷ್ಟ ಪಾಕಮೇಳ ಹಮ್ಮಿಕೊಂಡಿತ್ತು. ಗ್ರಾಹಕರನ್ನು ಮುದಗೊಳಿಸುವ ಮತ್ತು ಕರ್ನಾಟಕದ ವಿವಿಧ ಭಾಗಗಳ ಮರೆತು ಹೋಗಿರುವ ಆಹಾರವನ್ನು, ನೂತನ ಪಾಕವಿಧಾನಗಳನ್ನು ಅನುಭವಿಸುವ ಉದ್ದೇಶದಿಂದ ಈ ಆಹಾರೋತ್ಸವ ಆಯೋಜಿಸಲಾಗಿತ್ತು.
ಭಾರತದ ಮಾಜಿ ಸಾಲಿಸಿಟರ್ ಜನರಲ್ ಗೌರವಾನ್ವಿತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಉದ್ಘಾಟಿಸಿದರು. ಎಂಟಿಆರ್‍ನ ಪಾಕಶಾಲೆಯ ಸೆಂಟರ್ ಆಫ್ ಎಕ್ಸಲೆನ್ಸ್ ನೇತೃತ್ವದಲ್ಲಿ, 50 ಕ್ಕೂ ಹೆಚ್ಚು ಗೃಹ ಬಾಣಸಿಗರು ಉತ್ತರ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ, ಕಲ್ಯಾಣ ಕರ್ನಾಟಕ, ಉಡುಪಿ ಮತ್ತು ಹಳೇ ಮೈಸೂರು ಸೇರಿದಂತೆ ಕರ್ನಾಟಕದ ಆರು ಪ್ರಾಂತ್ಯಗಳ 100 ಕ್ಕೂ ಹೆಚ್ಚು ಖಾದ್ಯಗಳನ್ನು ಪ್ರದರ್ಶಿಸಿದರು ಎಂದು ಎಂಟಿಆರ್ ಸಿಇಓ ಸುನಯ್ ಭಾಸಿನ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಎಂಟಿಆರ್ ಕರುನಾಡು ಸ್ವಾದದಲ್ಲಿ ಸ್ಥಳೀಯ ಮೂಲದ ಪದಾರ್ಥಗಳು, ವಿಶಿಷ್ಟವಾದ ಮಸಾಲೆ ಮಿಶ್ರಣಗಳು ಮತ್ತು ಪೀಳಿಗೆಯಿಂದ ರವಾನಿಸಲಾದ ಪಾಕವಿಧಾನಗಳನ್ನು ಅನುಸರಿಸಲಾಗುತ್ತದೆ. ಉತ್ಸವದಲ್ಲಿ ಪ್ರದರ್ಶಿಸಲಾದ ಭಕ್ಷ್ಯಗಳ ಪಾಕವಿಧಾನ ಕೃತಿಯನ್ನೂ ಬಿಡುಗಡೆ ಮಾಡಲಾಯಿತು. ಈ ಕೃತಿ ಕರ್ನಾಟಕದಿಂದ ಮರೆತುಹೋದ 100 ಕ್ಕೂ ಹೆಚ್ಚು ಪಾಕವಿಧಾನಗಳ ಸಂಗ್ರಹವನ್ನು ಹೊಂದಿದೆ, ಜನರು ಈ ಮರೆತುಹೋದ ಭಕ್ಷ್ಯಗಳನ್ನು ಮನೆಯಲ್ಲಿಯೇ ಮರುಸೃಷ್ಟಿಸಲು ಇದು ಅನುವು ಮಾಡಿಕೊಡುವಲ್ಲಿ ಯಶಸ್ವಿಯಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ