ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸುಶಿಕ್ಷಿತನಾಗಲಿ: ಡಾ. ಪಿ. ವಾಮನ್ ಶೆಣೈ

Upayuktha
0


ಮಂಗಳೂರು: ನಮ್ಮ ಸಮಾಜದಲ್ಲಿ ಇನ್ನೂ ಬಹಳ ಮಂದಿ ಶಿಕ್ಷಣ ವಂಚಿತರಿದ್ದಾರೆ. ಅನ್ಯಾನ್ಯ ಕಾರಣಗಳಿಂದ ಶಿಕ್ಷಣ ಅವರಿಗೆ ಕೈಗೆಟುಕದ ಹಣ್ಣಾಗಿದೆ. ಹಾಗಾಗಿ ಈ ಅವಕಾಶ ವಂಚಿತರಿಗಾಗಿಯೇ ಸ್ಥಾಪಿತವಾದುದು ಈ ನವಭಾರತ ರಾತ್ರಿ ಪ್ರೌಢಶಾಲೆ. 81 ವರ್ಷಗಳಿಂದ ನಿರಂತರ ಶಿಕ್ಷಣ ಸೇವೆಯನ್ನು ನೀಡುತ್ತಾ ಸಮಾಜಕ್ಕೆ ಆಧಾರವಾಗಿ ನಿಂತಿದೆ ನವಭಾರತ ಎಜ್ಯುಕೇಶನ್ ಸೊಸೈಟಿಯ ನೆರಳಿನಲ್ಲಿ ಸೇನಾ ಶಿಕ್ಷಣ ನನ್ನು ನೀಡುವ ಈ ಪ್ರೌಢಶಾಲೆ. ಅಲ್ಲದೇ, ಹಗಲು ಹೊತ್ತಿನಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸುತ್ತಾ ಕ್ರಾಂತಿಕಾರಿ ಹೆಜ್ಜೆಯಿರಿಸಿಕೊಂಡು ಎಗ್ಗಿಲ್ಲದೇ ಸಾಗುತ್ತದೆ ಈ ಸಂಸ್ಥೆ, ಸಂಸ್ಥಾಪಕರ ಆಶಯದಂತೆ ಉಚಿತ ಶಿಕ್ಷಣವನ್ನು ನೀಡುತ್ತಾ ಬರುತ್ತಿದ್ದೇವೆ. ಸಿ. ಎ ಫೌಂಡೆಶನ್ ಕೋರ್ಸನ್ನು ಅತ್ಯಂತ ಕಡಿಮೆ ಶುಲ್ಕ ಪಡೆದು ಯ್ಯೋಗ್ಯ ಅಧ್ಯಾಪಕರಿಂದ ಶಿಕ್ಷಣ ಒದಗಿಸುತ್ತಿದ್ದೇವೆ. ಇಲ್ಲೂ ಎಲ್ಲರಿಗೂ ಸಿ ಎ ಶಿಕ್ಷಣ ಸಿಗಲೆಂಬುದೇ ನಮ್ಮ ಆಶಯ ಎಂದು ನಗರದ ಖ್ಯಾತ ವೈದ್ಯರೂ ಆದ ಡಾ|| ಪಿ.ವಾಮನ್ ಶೆಣೈಯವರು ಹೇಳಿದರು.


ಅವರು ನವಭಾರತ ರಾತ್ರಿ ಪ್ರೌಢಶಾಲೆಯ 81ನೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷರಾಗಿ ಅವರು ನುಡಿದರು.


ಮುಖ್ಯ ಅತಿಥಿಯಾಗಿದ್ದ ಸ್ಯಾನ್ ಮಾರ್ಕೆಟಿಂಗ್‌ನ ಅಜಿತ್ ಕಿಣಿಯವರು, ನಗರದ ಹೃದಯಭಾಗದಲ್ಲಿ ಇರುವ ಈ ಸಂಧ್ಯಾಶಾಲೆಯ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿದು ಸಂತಸಪಟ್ಟೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶುಭವಾಗಲಿ ಎಂದು ಹಾರೈಸಿದರು..


ಶಾಲಾ ಖಚಾಂಚಿ ಗಣೇಶ ರಾವ್ ರವರು ಪ್ರಸ್ತಾವನೆಗೈದರು. ಶಾಲಾ ಮುಖ್ಯೋಪಾಧ್ಯಾಯರಾದ ವರ್ಕಾಡಿ ರವಿ ಅಲೆವೂರಾಯರು ಸ್ವಾಗತಿಸಿದರು. ವರ್ಕಾಡಿ ಮಾಧವ ನಾವಡರು ನಿರ್ವಹಿಸಿದರು, ದಿನೇಶ್ ಕುಮಾರ್ ಬಿ. ವರದಿ ವಾಚನ ಮಾಡಿದರು.


ಫಕ್ರುದ್ದೀನ್ ಆಲಿ, ಜಯಧರ್, ಆನಂದ, ಕೆ.ಎಂ.ರಾಮಚಂದ್ರ, ಬಸವರಾಜ್, ಬಾಲಕೃಷ್ಣ ಸುವರ್ಣ, ಸಂಸ್ಥೆಯ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ನವ ಭಾರತ ಯಕ್ಷಗಾನ ಅಕಾಡೆಮಿಯ ಸದಸ್ಯರಿಂದ ವೀರ ವೀರೇಶ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top