ಪ್ರತಿದಿನದ ರಾಜಕೀಯ ಮನರಂಜನೆಯ ಮತ್ತು ರಾಜಕೀಯ ಮನೋವಿಕಾರದ ವಿದ್ಯಮಾನಗಳು ಮತದಾನದ ಫೊರ್‌ಕ್ಯಾಸ್ಟಿಂಗ್ ಲೆಕ್ಕಾಚಾರವನ್ನೇ ಬದಲಿಸುವಷ್ಟು ಪ್ರಖರಗೊಳ್ಳುತ್ತಿವೆ.
ವಾತಾವರಣದ ಉಷ್ಣತೆ ಏರುತ್ತಿರುವಂತೆ, ಇನ್ನುಳಿದ ಹಂತಗಳ ಚುನಾವಣೆಯ ಕಾವೂ ತೀವ್ರವಾಗಿ ಏರುತ್ತಿದೆ. ಬಿಸಿಲಿನ ತಾಪಕ್ಕಿಂತ ಭಯಾನಕವಾದ ರಾಜಕೀಯ ಉಷ್ಣಾಂಶ, ರಾಜಕೀಯದ ವಿದ್ಯಮಾನಗಳಿಂದ ದಾಖಲೆಯ ಮಟ್ಟ ಮೀರುತ್ತಿದೆ. ಗ್ಲೋಬಲ್ ವಾರ್ಮಿಂಗ್‌ಗಿಂತ ರಾಜಕೀಯ ಬೆಂಕಿ ಉಗುಳುವ ಭರಾಟೆಯಿಂದ ಸುದ್ದಿಗಳ ಧಗ ಧಗ!!!
ಒಂದು ದಿನ ಪೆನ್‌ಡ್ರೈವ್ ಸುದ್ದಿ ಒಂದು ಮೈತ್ರಿಯ ಓಟುಗಳನ್ನು ಮತ್ತೊಂದು ಮೈತ್ರಿಗೆ ವರ್ಗಾಯಿಸುವಂತೆ ಕೆಂಡವಾಗಿ ಕಂಡರೆ, ಮರುದಿನ ಅದೇ ಪೆನ್‌ಡ್ರೈವ್‌ನ್ನು ಬಿಡುಗಡೆ ಮಾಡಿದ 'ಮೈತ್ರಿಕೂಟ'ದಿಂದ ಓಟನ್ನು ಮರು ವರ್ಗಾವಣೆ ಮಾಡಬಹುದೇನೋ ಅನ್ನುವಷ್ಟು ಉಮಿ ಒಳಗಿನ ಬೆಂಕಿಯಂತೆ TRP ಸುದ್ದಿಗಳಾಗುತ್ತವೆ.
ಟಿವಿ, ಪೇಪರ್, ಫೇಸ್‌ಬುಕ್, ವಾಟ್ಸಪ್, ಎಕ್ಸ್, ಇನ್ಸ್ಟಾ..ಗಳಲ್ಲಿ ಬ್ರೇಕಿಂಗ್ ವಾದ, ವಿವಾದ, ಆರೋಪ, ಪ್ರತ್ಯಾರೋಪಗಳ ಸುರಿಮಳೆ, ಸ್ಪೋಟ!!!
ಪೆನ್‌ಡ್ರೈವ್ ಬಿಸಿ ಕಡಿಮೆ ಆಗುವಾಗ ಮತ್ತೊಂದು ಯಾವುದೋ ಸುದ್ದಿ ಜಾಲತಾಣಗಳಲ್ಲಿ 'ಮತ' ಹರಿಯುವಷ್ಟು ಲೀಡ್ ಪಡೆಯುತ್ತದೆ.
**
ಶ್ರೀ ........... ಸತ್ತರೆ, ಈ ದೇಶದಲ್ಲಿ ಮುಂದೆ ಯಾರೂ ಪಿಎಂ ಆಗುವುದಿಲ್ಲವೇ?
ಶ್ರೀ ....... ತೀರಿಕೊಂಡರೆ 140 ಕೋಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರೂ ಇಲ್ಲವೇ? ಎಂದು ಪ್ರಶ್ನಿಸುವ ಮೂಲಕ ಪ್ರಧಾನಿ ಪಟ್ಟಕ್ಕೆ ಅಭ್ಯರ್ಥಿಯೇ ಇಲ್ಲದ ಒಂದು ಪಕ್ಷ ಸಾವಿನ ಬೆಂಕಿಯ ಮಾತಾಡುತ್ತದೆ.
ಜಾತ್ಯಾತೀತ ಪಕ್ಷ, ಸರ್ವಧರ್ಮ ಪಕ್ಷ ಅಂತ ಬಡಿದುಕೊಳ್ಳುವ ಪಕ್ಷ ಇವತ್ತು ಜಿಹಾದಿಗೆ ಮತನೀಡಿ ಅಂತ ಕರೆ ಕೊಟ್ಟ ಸುದ್ದಿ ಇವತ್ತಿನ ಪೇಪರ್‌ನಲ್ಲಿ ಸುದ್ದಿಯಾಗಿ ಹತ್ತಿಕೊಂಡಿದೆ.
ಇನ್ನು ಏನೇನಿದೆಯೋ!!? ಬೇಗ ಎಲೆಕ್ಷನ್ ಮುಗಿಯಲಪ್ಪ, ಇದ್ದಿದ್ದರಲ್ಲಿ ಬೆಂಕಿಯ ಕಾವು ಕಮ್ಮಿ ಮಾಡುವ ವ್ಯಕ್ತಿ, ಪಕ್ಷ, ಮೈತ್ರಿಗೆ ಮತದಾರ ಓಟು ಮಾಡುವಂತಾಗಿ ಬೇಗೆ ಕಮ್ಮಿಯಾಗಲಿ. ಗ್ಲೋಬಲ್ ವಾರ್ಮಿಂಗ್ ಇಳಿಮುಖವಾಗಲಿ.
ಅರವಿಂದ ಸಿಗದಾಳ್, ಮೇಲುಕೊಪ್ಪ.
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ