ಕಾಯುವುದಕ್ಕಿಂತ ತಪವು ಬೇರೊಂದಿಲ್ಲ. ಈ ಮಾತು ಈ ಬಾರಿಯ ಉಡುಪಿ ಚಿಕ್ಕಮಗಳೂರು ರಾಜಕೀಯ ಪಕ್ಷದವರಿಗೂ ಅಭ್ಯರ್ಥಿಗಳಿಗೂ ಮತದಾರರಿಗೂ ಹೇಳಿಸಿ ಮಾಡಿಸಿದಂತಿದೆ. ಕಾಯುವುದರಲ್ಲಿಯೂ ಒಂದು ಸುಖವಿದೆ ಆನಂದವೂ ಇದೆ. ಏನೇ ಇರಲಿ ಈ ಬಾರಿ ಉಡುಪಿ ಚಿಕ್ಕಮಗಳೂರು ಮತದಾರ ಯಾರ ಕೊರಳಿಗೆ ಕುಸುಮ ಮಾಲೆ ಹಾಕಬಹುದು? ಅಥವಾ ಇದಾಗಲೇ ಹಾಕಿರಬಹುದು ಅನ್ನುವ ಲೆಕ್ಕಾಚಾರ ಪ್ರತಿ ರಾಜಕೀಯ ಪಡಸಾಲೆಗಳಲ್ಲಿ ವಿವಿಧ ಆಯಾಮಗಳಲ್ಲಿ ಲೆಕ್ಕ ಹಾಕುತ್ತಿರುವುದಂತೂ ಸತ್ಯ. ಪ್ರತಿಯೊಬ್ಬರು ಅವರವರ ಪಕ್ಷ ಅಭ್ಯರ್ಥಿಗಳ ಪರ ಧನಾತ್ಮಕವಾಗಿ ಅಭಿಪ್ರಾಯ ಹೊರಹಾಕುತ್ತಿರುವುದು ಸಹಜ.
ಒಂದಂತೂ ಸತ್ಯ ಈ ಬಾರಿ ಉಡುಪಿ ಚಿಕ್ಕಮಗಳೂರು ಲೇೂಕ ಸಭಾ ಕ್ಷೇತ್ರದಲ್ಲಿ ಬಿಜೆಪಿಯೂ ಗೆಲುವುದಿಲ್ಲ! ಕಾಂಗ್ರೆಸ್ ಪಕ್ಷವೂ ಗೆಲುವುದಿಲ್ಲ..!ಹಾಗಾದರೆ ಗೆಲುವುದು ಯಾರಪ್ಪ? ನಿಖರವಾಗಿ ಹೇಳ ಬೇಕಾದರೆ ಈ ಬಾರಿ ಗೆಲುವುದು ಅಥವಾ ಸೇೂಲುವುದು; ಹಿಂದುತ್ವ ಅರ್ಥಾತ್ ಮೇೂದಿ; ಅಥವಾ ಗ್ಯಾರಂಟಿ ಅರ್ಥಾತ್ ಸಿದ್ದರಾಮಯ್ಯ ಅಥವಾ ಭಾವನಾತ್ಮಕತೆ ಯಾ ಅಭಿವೃದ್ಧಿ. ವರ್ಚಸ್ಸು ಸರಳತೆ. ಇವಿಷ್ಟು ವಿಚಾರಗಳು ಮತದಾರರ ಮನದಾಳದಲ್ಲಿ ಪ್ರತಿನಿತ್ಯ ಚಚಿ೯ತವಾಗುತ್ತಿರುವ ಸೇೂಲು ಗೆಲುವಿನ ಲೆಕ್ಕಾಚಾರಗಳು. ಅಂತೂ ಯಾರ ಬಾಯಿಯಲ್ಲೂ ಕಾಂಗ್ರೆಸ್ ಬಿಜೆಪಿ ಗೆಲುವ ಹೆಸರೇ ಇಲ್ಲ.
ಹಾಗಾದರೆ ಮತದಾರರನ ಆಯ್ಕೆ ಏನಿರಬಹುದು? ಒಂದಂತೂ ಸತ್ಯ. 2019 ರೀತಿಯಲ್ಲಿ ಬಂದ ರೀತಿಯಲ್ಲಿ 2024ರ ಫಲಿತಾಂಶ ಏಕಮುಖಿಯಾಗಿ ಖಂಡಿತವಾಗಿಯೂ ಬರುವುದಿಲ್ಲ. ಸೇೂಲು ಗೆಲುವುಗಳು ಕೇವಲ ಅಲ್ಪ ಮತ ಮತಗಳಿಂದಲೇ ನಿರ್ಣಯವಾಗುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿ ಗೇೂಚರಿಸುತ್ತಿದೆ. ಈ ಬಾರಿ ಕ್ಷೇತ್ರ ಕ್ಷೇತ್ರಕ್ಕೂ ಮತದಾರರ ಮೂಡ್ ಬದಲಾಗಿದೆ ಅನ್ನುವುದು ಮೇಲ್ನೋಟಕ್ಕೆ ಕಾಣುವ ಲೆಕ್ಕಾಚಾರದ ಸಮೀಕ್ಷೆ.
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಿಂದುತ್ವಕ್ಕೆ ಮಣೆಗಳು ಜಾಸ್ತಿ ಬಿದ್ದಿದರೆ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಗ್ಯಾರಂಟಿಗಳಿಗೆ ಹೆಚ್ಚಿನ ಮಣೆ ಬಿದ್ದಿರ ಬಹುದು ಅನ್ನುವುದು ಇನ್ನೊಂದು ಸೂಕ್ಷ್ಮ ಲೆಕ್ಕಾಚಾರ. ಕುಂದಾಪುರ ಬ್ರಹ್ಮಾವರ ಕಡೆ ಜಾತಿ ವರ್ಚಸ್ಸಿಗೆ ಹೆಚ್ಚು ಶಾಲು ಹಾಸಿರಬಹುದು ಅನ್ನುವ ಮಾತು ಕೇಳಿ ಬರುತ್ತಿದೆ. ಉಡುಪಿ ಕಾಪು ಕಡೆಯ ಒಂದಿಷ್ಟು ಕಮಿಟೆಡ್ ವೇೂಟರ್ಸ್ ಯಾರು ಏನೇ ಹೇಳಲಿ ಕಣ್ಣು ಮುಚ್ಚಿ ಕೊಂಡು ತಮ್ಮ ಚಿಹ್ನೆಯ ಗುಂಡಿಯನ್ನು ಗಟ್ಟಿಯಾಗಿ ಒತ್ತಿದ್ದಾರೆ ಅನ್ನುವುದು ಕೂಡಾ ಅಷ್ಟೇ ಸತ್ಯ.
ಕಾಕ೯ಳದ ಹೊರ ವಲಯದಲ್ಲಿ ಅಭಿವೃದ್ಧಿಯ ಕಡೆಗೆ ಹೆಚ್ಚಿನ ನೇೂಟ ಬೀರಿದ್ದರೆ ಅದೇ ಕಾಕ೯ಳದ ಪುರವಾಸಿಗಳು ಹೆಚ್ಚಿನ ಮನಸ್ಸು ಹಿಂದುತ್ವಕ್ಕೆ ಮಣಿದಿದೆಅನ್ನುವುದು ಇನ್ನೊಂದು ದೂರದ ಲೆಕ್ಕಾಚಾರ.
ಬಹುದೂರದ ಚಿಕ್ಕಮಗಳೂರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿಯ ಕಡೆ ನಗೆ ಬೀರಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ. ಉಡುಪಿ ಕಡೆಯ ಹಿಂದುತ್ವದ ಸಂಕಲನ ವ್ಯವಕಲನ ಲೆಕ್ಕಾಚಾರ ವನ್ನು ಚಿಕ್ಕಮಗಳೂರಿನ ಅಭಿವೃದ್ಧಿ ವಚ೯ಸ್ಸಿನ ಲೆಕ್ಕಾಚಾರದ ಮತಗಳು ಸರಿದೂಗಿಸಿದರೆ ಗೆಲ್ಲ ಬಹುದು ಅನ್ನುವ ಆಶಾಭಾವನೆಯಲ್ಲಿ ಅಭಿವೃದ್ಧಿ ಪರ ಚಿಂತಕರು ಇದ್ದಾರೆ.
ಒಟ್ಟಿನಲ್ಲಿ ಮೇೂದಿ ಹಿಂದುತ್ವ ಅಲೆಯನ್ನು ಸಿದ್ದರಾಮಯ್ಯನವರ ಗ್ಯಾರಂಟಿಯ ಜೊತೆಗೆ ಅಭಿವೃದ್ಧಿಯ ಮತಗಳು ಎಷ್ಟರ ಮಟ್ಟಿಗೆ ಕಟ್ಟಿ ಹಾಕಬಹುದು ಅನ್ನುವುದು ಜಯಪ್ರಕಾಶ್ ಹೆಗ್ಡೆ ಮತ್ತು ಶ್ರೀನಿವಾಸ ಪೂಜಾರಿ ಅವರ ಸೇೂಲು ಗೆಲುವಿನ ಭವಿಷ್ಯ ನಿಂತಿರುವುದಂತೂ ನೂರಕ್ಕೆ ನೂರು ಸತ್ಯ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ