"ಮಾತೃ ದೇವೋಭವ" ಅನ್ನೋ ವಾಕ್ಯ ನಮಗೆಲ್ಲರಿಗೂ ಗೊತ್ತು.ಆದರೆ ಈ ವಾಕ್ಯವನ್ನು ಎಷ್ಟು ಜನ ಪಾಲನೆ ಮಾಡುತ್ತೀವಿ ಅನ್ನೋದು ಮಾತ್ರ ಪ್ರಶ್ನೆಯಾಗಿ ಉಳಿದಿದೆ. ಸಾಮಾನ್ಯವಾಗಿ ನಮಗೆಲ್ಲರಿಗೂ ಪ್ರೇಮಿಗಳ ದಿನಾಚರಣೆ, ಫ್ರೆಂಡ್ಶಿಪ್ ಎಲ್ಲಾ ಅಚ್ಚಳಿಯದೇ ನೆನಪಿರುತ್ತದೆ. ಆದರೆ ನಮ್ಮನ್ನು ಹೆತ್ತು ಹೊತ್ತು ಸಲಹಿದ ಮಾತೆಯರ ದಿನವನ್ನು ನಾವು ಮರೆತೇ ಹೋಗಿದ್ದೇವೆ ಅಲ್ಲವೇ?
ಅದು ಯಾಕೋ ಗೊತ್ತಿಲ್ಲ ಒಂದು ತಾಯಿಯ ಮನ ಮಿಡಿಯುವ ಕತೆ ನನ್ನ ಮನಸಲ್ಲಿ ಓಡಾಡುತ್ತಿದೆ. ಆಕೆ ತನ್ನ ಮಕ್ಕಳ ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಮಡಿಪಾಗಿ ಇರಿಸಿದ್ದಾಳೆ. ಇಂದು ನಾವು ಯಾವುದೇ ಕಟ್ಟು ಕತೆಯನ್ನು ಹೇಳುತ್ತಿಲ್ಲ ಬದಲಿಗೆ ತನ್ನ ಸ್ವಾರ್ಥವನ್ನು ಬಿಟ್ಟು ತನ್ನ ಮಕ್ಕಳಿಗೋಸ್ಕರ ಬದುಕಿದ ಮಹಾ ತಾಯಿಯ ಬಗ್ಗೆ ತಿಳಿಯೋಣ.
ಅವಳು ತನ್ನ ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗಿ ಗಂಡನ ಮನೆಗೆ ಹೋದಳು. ಜೀವನದ ಬಗ್ಗೆ ಏನೂ ಗೊತ್ತಿರದ ಅವಳಿಗೆ ಗಂಡನ ಮನೆಯಲ್ಲಿ ಬಾವಿಯಲ್ಲಿ ಇರುವ ಕಪ್ಪೆಯ ಹಾಗೆ ಆಯಿತು.
ಮದುವೆಯಾದ ಗಂಡನ ಕರ್ತವ್ಯ ಎಂದರೆ ಅದು ಮದುವೆಯಾದ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದು. ಆದರೆ ಅವಳ ಗಂಡ ಇದಕ್ಕೆ ವಿರುದ್ಧ ಎಂಬಂತೆ ಕಂಠ ಪೂರ್ತಿ ಕುಡಿದು ಹೆಂಡತಿಯನ್ನು ಅತ್ಯಂತ ಹೀನಾಯವಾಗಿ ನಿಂದಿಸುತ್ತಿದ್ದ. ಈ ಗಂಡನ ಮನೆಯಲ್ಲಿ ಕೇವಲ ಗಂಡನ ತೊಂದರೆ ಅಷ್ಟೇ ಅಲ್ಲದೇ ಅತ್ತೆಯ ತೊಂದರೆ ಅಷ್ಟೇಕ್ಕೆ ಮುಗಿದಿಲ್ಲ ಇಡೀ ಗಂಡನ ಕುಟುಂಬದವರಿಂದ ತೊಂದರೆ ಅತ್ತ ತಾಯಿಯ ಮನೆಗೂ ಹೋಗುವ ಹಾಗಿಲ್ಲ.
ಇವೆಲ್ಲದರ ನಡುವೆ ಒಂದು ಮಗುವಿಗೆ ಜನ್ಮ ನೀಡಿದರು ಮಗುವಿನ ಜನ್ಮದ ಬಳಿಕವೂ ಗಂಡನದು ಇದೇ ಚಾಳಿ... ಕಂಠ ಪೂರ್ತಿ ಕುಡಿದು ಬಂದು ಆ ಎಳೆಯ ಮಗುವಿನ ಮುಂದೆಯೇ ತಾಯಿಯ ಮೇಲೆ ಹಲ್ಲೆ ನಡೆಸುತ್ತಿದ್ದನು. ಆದರೆ ಆ ತಾಯಿಗೆ ಯಾರಿಗೂ ಹೇಳದೇ ಇರುವಷ್ಟು ಸಂಕಷ್ಟ ಕೆಲವೊಂದು ಬಾರಿ ಆ ತಾಯಿಗೆ ಇಷ್ಟೊಂದು ಸಮಸ್ಯೆ ಕಷ್ಟಗಳ ನಡುವೆಯೂ ಬದುಕಬೇಕೇ.....? ಆತ್ಮಹತ್ಯೆ ಮಾಡಿಕೊಂಡು ಬಿಡೋಣ ಎಂದು ಅನಿಸುತ್ತಿತ್ತು. ಆದರೆ ಇಂತಹ ಯೋಚನೆ ಮನದಲ್ಲಿ ಬರುವಾಗ ತಾನೇನಾದರೂ ಮಾಡಿಕೊಂಡರೆ ಆ ಮಗುವಿನ ಗತಿಯೇನು ಆ ಕಟುಕ ತನ್ನ ಮಗುವನ್ನು ನೋಡಿ ಕೊಳ್ಳುವನೇ...?
ನೋಡುವ ಅದೀನಾಗುತ್ತದೋ ಆಗಲಿ ತಾನು ಇಡುವ ಹೆಜ್ಜೆ ಸರಿಯಾಗಿದ್ದರೆ ಆ ದೇವರು ಎಂದಿಗೂ ಕೈ ಕೊಡುವುದಿಲ್ಲ ಎಂಬ ದೈರ್ಯವನ್ನು ಇಟ್ಟುಕೊಂಡು ಪ್ರತಿನಿತ್ಯ ದೇವಾಲಯಕ್ಕೆ ಹೋಗಿ ತನ್ನ ಕಷ್ಟಗಳನ್ನು ಕೇವಲ ಆ ದೇವರ ಬಳಿ ಹೇಳುತ್ತಿದ್ದಳು.
ಅದೇನೇ ಆದರೂ ಆಗಲಿ ಬದುಕಿಯೇ ತೀರುತ್ತೇನೆ ಎಂಬ ಹಠವನ್ನು ಇಟ್ಟುಕೊಂಡಿದ್ದ ಆ ಮಹಾ ತಾಯಿಯ ಮಕ್ಕಳು ಈಗ ಉತ್ತಮ ಜೀವನವನ್ನು ನಡೆಸುತ್ತಿರುವರು. ಮಗನಂತೂ ತನ್ನ ತಾಯಿಯ ಖುಷಿಗೆ ತನ್ನ ಜೀವನವನ್ನೇ ಮೂಡಿಪಾಗಿ ಇಟ್ಟಿದ್ದಾನೆ. ಏನೇ ಆಗಲಿ ಜೀವನದಲ್ಲಿ ಆ ತಾಯಿಯೂ ಮಕ್ಕಳೂ ಇಂದಿಗೂ ಅತ್ಯಂತ ಪ್ರೀತಿ ಸಹಬಾಳ್ವೆ ಹಾಗೂ ಅತ್ಯಂತ ಸಂತೋಷದಿಂದ ಬದುಕುತ್ತಿದ್ದಾರೆ.
ತನ್ನ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ತನ್ನ ಮಕ್ಕಳಿಗೋಸ್ಕರ ಬದುಕಿದ ಆ ಮಹಾತಾಯಿಯನ್ನು ನಾವು ಮೆಚ್ಚಲೇ ಬೇಕಲ್ಲವೇ. ಈ ಮಾತೆಯಂದಿರ ದಿನದಂದು ಆಕೆಯನ್ನು ನೆನಪಿಸಿಕೊಳ್ಳಲೇಬೇಕು.
- ಪ್ರಜ್ವಲ್ ಬಲ್ಯಾಯ, ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ