ಅಮ್ಮಾ ಎಂಬ ಎರಡಕ್ಷರದಲ್ಲಿ ಎಷ್ಟೊಂದು ಭಾವನೆ ಅಡಗಿದೆ ಅಲ್ಲವೇ.. ಬಿದ್ದಾಗ ಅಮ್ಮಾ, ಎದ್ದಾಗ ಅಮ್ಮಾ, ನೋವಾದಾಗ ಅಮ್ಮಾ, ಖುಷಿಯದಾಗ ಅಮ್ಮಾ.. ನಮ್ಮ ಸರ್ವಸ್ವವೇ ಅಮ್ಮಾನಾಗಿರುವಾಗ ಅವಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತೆವಾ ಎಂಬ ಪ್ರಶ್ನೆ ಎಲ್ಲೋ ಒಂದು ಮನಸ್ಸಿನ ಮೂಲೆಯಲ್ಲಿ ಮೂಡುತ್ತಿದೆ.
ಈ ಭೂಮಿಯಲ್ಲಿ ನಮ್ಮ ಮುಖ ನೋಡದೆ ನಿಷ್ಕಲ್ಮಶವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಪ್ರೀತಿಸಿದವಳು ಆಕೆ ಒಬ್ಬಳೇ. ಒಂಬತ್ತು ತಿಂಗಳು ತನ್ನ ಗರ್ಭ ಎಂಬ ಗುಡಿಯಲ್ಲಿ ನಮ್ಮನ್ನು ಬಂಧಿಸಿ ಜೋಪಾನವಾಗಿ ನಮ್ಮನ್ನು ಕಾಪಾಡಿದವಳು ಆಕೆ. ತನ್ನ ಮಗುವಿನ ಮೂಲಕ ತನ್ನ ಕನಸನ್ನು ನನಸು ಮಾಡುವವಳು ಆಕೆ. ತನ್ನ ಮಗುವಿನ ನೋವು ಸಹಿಸಿಕೊಳ್ಳದ ಆಕೆ ಮೊದಲ ಬಾರಿಗೆ ತನ್ನ ಮಗುವಿನ ಆಳುವಿನಲ್ಲಿ ತನ್ನ ಖುಷಿ ಕಂಡುಕೊಳ್ಳುವುದು ಆಕೆ ತನ್ನ ಹೆರಿಗೆ ಸಮಯದಲ್ಲಿ.
ಎಲ್ಲರ ಮೊದಲ ನುಡಿ ಅಮ್ಮಾ. ಎಳೇ ವಯಸ್ಸಿನಲ್ಲಿ ಅಮ್ಮಾ ಅಮ್ಮಾ ಎಂದು ಅವಳ ಹಿಂದೆ ಓಡಾಡುತ್ತಿದ್ದ ನಾವು ಇವತ್ತು ಯಾಕಿಷ್ಟು ಬದಲಾಗಿದ್ದೇವೆ. "ಮಾತೃ ದೇವೋಭವ" ಅನ್ನೋ ವಾಕ್ಯ ಎಲ್ಲರಿಗೂ ಗೊತ್ತು ಆದರೆ ಅದನ್ನು ಎಷ್ಟು ಜನ ಅಳವಡಿಸಿಕೊಂಡಿದ್ದೇವೆ. ಮದರ್ಸ್ ಡೇ ಗೆ ಅಮ್ಮನ ಫೋಟೋ ಹಾಕಿ ಸ್ಟೇಟಸ್, ಸ್ಟೋರಿ ಹಾಕುವ ನಾವು ಅವಳ ಮುಂದೆ ನಿಂತು ಎಷ್ಟು ಜನ ಅವಳಿಗೆ ಶುಭಾಶಯ ಹೇಳಿದ್ದೇವೆ, ಎಷ್ಟು ಜನ ಅವಳ ಆಶೀರ್ವಾದ ಪಡೆದಿದ್ದೇವೆ... ಬರಿ ಬೆರಳಣಿಕೆಯಷ್ಟು ಮಾತ್ರ. ಆಕೆಗೆ ಬೇಕಾಗಿರುವುದು ಸ್ಟೇಟಸ್ ಅಲ್ಲ ಆದರ ಬದಲಾಗಿ ತನ್ನ ಮಕ್ಕಳ ಪ್ರೀತಿ.
ಆಕೆ ನಿಷ್ಕಲ್ಮಶ ಮನಸ್ಸಿನ ಮುಗ್ದ ಸ್ವಭಾವದವಳು. ತನ್ನ ಮಗುವಿನ ಖುಷಿಯಲ್ಲಿ ತನ್ನೆಲ್ಲಾ ನೋವನ್ನು ಮರೆತವಳು ಅವಳು. ಆಕೆ ದೇವರಿಗಿಂತಲೂ ಮಿಗಿಲಾದವಳು.
"ಗರ್ಭ ಎಂಬ ಗುಡಿಯಲ್ಲಿ
ರಕ್ತದಲ್ಲಿ ಅಭಿಷೇಕ ಮಾಡಿ
ಕರುಳನ್ನೇ ಹಾರ ಮಾಡಿ
ಒಂಬತ್ತು ತಿಂಗಳು ಪೂಜಿಸಿದ ಆಕೆಗೆ
ತಾಯಂದಿರ ದಿನದ ಶುಭಾಶಯಗಳು"
- ಧನ್ಯಶ್ರೀ
ತೃತೀಯ ಬಿ.ಎಸ್ಸಿ
ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ