ಕುಮಾರಿ ತನ್ಮಯಿ ಉಪ್ಪಂಗಳ. ಹೆಸರಿಗೆ ತಕ್ಕಂತೆ ಅತ್ಯಂತ ತನ್ಮಯವಾಗಿ ವಯೊಲಿನ್ ನುಡಿಸುವ ಈಕೆ ನಮ್ಮೂರಿನ ಉದಯೋನ್ಮುಖ ಸಂಗೀತ ಪ್ರತಿಭೆ. ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (PCMC) ವಿದ್ಯಾರ್ಥಿನಿ (2022-2024) ಯಾಗಿರುವ ಈಕೆ ವಿದುಷಿ ಶ್ರೀಮತಿ ಎಂ. ಟಿ. ವೀಣಾ ರಾಘವೇಂದ್ರ ಮತ್ತು ವಿದುಷಿ ಶ್ರೀಮತಿ ಶೈಲಜಾ ಶ್ರೀರಾಮ್ ಅವರಲ್ಲಿ ಗಾಯನ ಅಭ್ಯಾಸ ಮಾಡುತ್ತಿದ್ದಾರೆ. ವಯೊಲಿನ್ ಅನ್ನು ವಿದ್ವಾನ್ ಶ್ರೀ ವೇಣುಗೋಪಾಲ್ ಶಾನಭಾಗ ಹಾಗೂ ವಿದ್ವಾನ್ ಶ್ರೀ ಮಾಥೂರ್. ಆರ್. ಶ್ರೀನಿಧಿ ಅವರಿಂದ ಕಲಿಯುತ್ತಿದ್ದಾರೆ.
• ರಾಜ್ಯ ಮಟ್ಟದ ಹಿರಿಯ ಗಾಯನ ಪರೀಕ್ಷೆಯಲ್ಲಿ 93% ಅಂಕಗಳೊಂದಿಗೆ ಉನ್ನತ ಶ್ರೇಣಿಯನ್ನು ಪಡೆದಿದ್ದಾರೆ.
• ರಾಜ್ಯ ಮಟ್ಟದ ಜೂನಿಯರ್‌ನಲ್ಲಿ 5ನೇ ರ್‍ಯಾಂಕ್ ಮತ್ತು ಸೀನಿಯರ್ ವಯಲಿನ್ ಪರೀಕ್ಷೆಯಲ್ಲಿ 98% ಗಳಿಸಿದ್ದಾರೆ. ಪ್ರಸ್ತುತ ಗಾಯನ ಮತ್ತು ವಯಲಿನ್‌ನಲ್ಲಿ ವಿದ್ವತ್ ಕಲಿಯುತ್ತಿದ್ದಾರೆ.
• ಹಲವು ಕಡೆ ಗಾಯನ ಮತ್ತು ಪಿಟೀಲು ಕಛೇರಿಗಳನ್ನು ನೀಡಿದ್ದಾರೆ. ಕಿರಿಯ ಮತ್ತು ಹಿರಿಯ ಕಲಾವಿದರಿಗೆ 200 ಕ್ಕೂ ಹೆಚ್ಚು ಸಂಗೀತ ಕಚೇರಿಗಳಿಗೆ ಪಿಟೀಲು ಪಕ್ಕವಾದ್ಯದಲ್ಲಿ ಸಾಥ್ ನೀಡಿದ್ದಾರೆ.
ರಾಗ ಧನ ಉಡುಪಿ, ರಂಜನಿ ಮೆಮೋರಿಯಲ್ ಟ್ರಸ್ಟ್, ಉಡುಪಿ; ಮಣಿ ಕೃಷ್ಣಸ್ವಾಮಿ ಅಕಾಡೆಮಿ, ಮಂಗಳೂರು; ಸಂಗೀತ ಪರಿಷತ್ತು, ಮಂಗಳೂರು; ಮಹಾಬಲ-ಲಲಿತ ಕಲಾ ಸಭಾ (ಆರ್.), ಪುತ್ತೂರು; ನಾದ ಸುಧಾ, ಶಿವಮೊಗ್ಗ; ಭಾರತೀಯ ವಿದ್ಯಾ ಭವನ, ಶಿವಮೊಗ್ಗ; ಶ್ರೀ ರಾಮ ಲಲಿತ ಕಲಾ ಮಂದಿರ, ಬೆಂಗಳೂರು ಸೇರಿದಂತೆ ಹಲವೆಡೆ ಸಂಗೀತ ಹಾಗೂ ವಯೊಲಿನ್ ಕಛೇರಿ ನೀಡಿದ್ದಾರೆ.
ಹರಿಹರಪುರ, ಶೃಂಗೇರಿ, ಬೆಂಗಳೂರಿನ ವಸಂತಪುರ, ಶಕಟಪುರ ಮತ್ತು ಕರ್ನಾಟಕ ಮತ್ತು ಕೇರಳದ ಇತರ ಸ್ಥಳಗಳಲ್ಲಿ ಶ್ರೀ ತ್ಯಾಗರಾಜ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ್ದಾರೆ.
ವಿವಿಧ ಸ್ಥಳಗಳಲ್ಲಿ ನವರಾತ್ರಿ ಉತ್ಸವದ ಸಂಗೀತ ಕಛೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ.
2023ರಲ್ಲಿ ಎಡನೀರು ಶ್ರೀಗಳಲ್ಲಿ ಚಾತುರ್ಮಾಸ್ಯ ಸಂದರ್ಭದಲ್ಲಿ 11 ಬಾರಿ ಪ್ರದರ್ಶನ ನೀಡುವ ಅವಕಾಶ ಇವರಿಗೆ ಸಿಕ್ಕಿದ್ದು, ಪೂಜ್ಯ ಸ್ವಾಮೀಜಿಯವರಿಂದ ಆಶೀರ್ವಾದಕ್ಕೆ ಪಾತ್ರರಾಗಿದ್ದಾರೆ.
ತಮ್ಮ ಗುರುಗಳಾದ ವಿದ್ವಾನ್ ಶ್ರೀ ಮಾಥೂರ್ ಆರ್ ಶ್ರೀನಿಧಿ ಅವರ ಉಪನ್ಯಾಸ ಪ್ರಾತ್ಯಕ್ಷಿಕೆಗಾಗಿ ಶ್ರೀರಾಮ ಲಲಿತ ಕಲಾ ಮಂದಿರ, ಬೆಂಗಳೂರಿನಲ್ಲಿ ವಯೊಲಿನ್ ಸಾಥ್ ನೀಡಿದ್ದಾರೆ.
ಬಹುಮಾನಗಳು ಮತ್ತು ಪ್ರಶಸ್ತಿಗಳು:
• ಪ್ರಮಾ ಪ್ರಶಸ್ತಿ, ಮಣಿಪಾಲ -2021;
• ನೈಸ್ ವಾಯ್ಸ್-2021 ರಲ್ಲಿ 1ನೇ ಬಹುಮಾನ, ಹೊನ್ನಾವರ; ಉಡುಪುಮೂಲೆ ಪ್ರತಿಷ್ಠಾನ, ಕಾಸರಗೋಡು ನಡೆಸಿದ ಸಂಗೀತ ಸ್ಪರ್ಧೆ -2021 ರಲ್ಲಿ ಪ್ರಥಮ ಬಹುಮಾನ; ಮಂಗಳೂರಿನ ರಾಗ ತರಂಗಿಣಿ ನಡೆಸಿದ ಸಂಗೀತ ಸ್ಪರ್ಧೆ 2021 ರಲ್ಲಿ ಪ್ರಥಮ ಬಹುಮಾನ, ರಾಗ ಲಹರಿ, ಬೆಂಗಳೂರು 20221ರಲ್ಲಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ; ಕಲಾ ಸೌರಭ, 2022, ಬೆಂಗಳೂರು ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ಮೊದಲ ಬಹುಮಾನ; ಗಾಯನ ಸಮಾಜ, ಬೆಂಗಳೂರು ನಡೆಸಿದ ಸಂಗೀತ ಸ್ಪರ್ಧೆ-2022 ರಲ್ಲಿ ಮೊದಲ ಬಹುಮಾನ ಪಡೆದಿದ್ದಾರೆ. ಅಲ್ಲದೆ ಬೆಂಗಳೂರಿನಲ್ಲಿ ಗಾಯನದಲ್ಲಿ ವಿಶೇಷ ಬಹುಮಾನ ಉದಯೋನ್ಮುಖಿ- 2022 ಹಾಗೂ ಮಂಗಳೂರಿನ ಸಂಗೀತ ಪರಿಷತ್ತು ನೀಡುವ ಯುವ ಪ್ರತಿಭೆ ಪ್ರಶಸ್ತಿ-2023ಗೆ ಪಾತ್ರರಾಗಿದ್ದಾರೆ.
ಕುಮಾರಿ ನೇಹಾ. ಈಕೆ ಉಡುಪಿ ಎಂಜಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿನಿ. ಕರ್ನಾಟಕ ಸಂಗೀತ ಗಾಯನದಲ್ಲಿ ಉದಯೋನ್ಮುಖ ಪ್ರತಿಭೆ. ಸಂಗೀತ ಜೂನಿಯರ್ ಕಲಿತಿದ್ದು, ದೇವರನಾಮಗಳ ಗಾಯನ ಅಭ್ಯಾಸ ಮಾಡುತ್ತಿದ್ದಾರೆ. ಹಲವಾರು ಗಾಯನ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.
ಉಡುಪಿಯ ಪೂರ್ಣಪ್ರಜ್ಞ ಪಿಯು ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಡಾ. ಜಯಶಂಕರ ಕಂಗಣ್ಣಾರು ಮತ್ತು ಶ್ರೀಮತಿ ಶಶಿಕಲಾ ದಂಪತಿಗಳ ಪುತ್ರಿ. ಅಮ್ಮ ಶಶಿಕಲಾ ಅತ್ಯುತ್ತಮ ನೃತ್ಯಪಟುವಾಗಿದ್ದು ಮಗಳಿಗೆ ನೃತ್ಯವನ್ನು ಕಲಿಸುತ್ತಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ