|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 Mrs. UAE ಅಂತರಾಷ್ಟ್ರೀಯ ಸ್ಪರ್ಧೆ ಸೀಸನ್‌-5: ಮಂಗಳೂರು ಮೂಲದ ಗ್ವಿನ್ ಶಿಬೋನಿ ಡಿಸೋಜಾಗೆ ಕಿರೀಟ

Mrs. UAE ಅಂತರಾಷ್ಟ್ರೀಯ ಸ್ಪರ್ಧೆ ಸೀಸನ್‌-5: ಮಂಗಳೂರು ಮೂಲದ ಗ್ವಿನ್ ಶಿಬೋನಿ ಡಿಸೋಜಾಗೆ ಕಿರೀಟ



ಮಂಗಳೂರು: ದುಬೈನ ಡೌನ್‌ಟೌನ್‌ನಲ್ಲಿ ಇತ್ತೀಚೆಗೆ (ಏ.21) ನಡೆದ Mrs. UAE ಅಂತಾರಾಷ್ಟ್ರೀಯ ಸ್ಪರ್ಧೆ 2024 - ಸೀಸನ್ 5 ನಲ್ಲಿ ಮಂಗಳೂರು ಮೂಲದ ಗ್ವಿನ್ ಶಿಬೋನಿ ಡಿಸೋಜಾ ವಿಜಯಿಯಾಗಿದ್ದಾರೆ. ಮೀನಾ ಅಸ್ರಾಣಿಯವರು ಸ್ಥಾಪಿಸಿದ 'ಬೀಯಿಂಗ್ ಮುಸ್ಕಾನ್ ಇವೆಂಟ್' ಈ ಸ್ಪರ್ಧೆಯನ್ನು ಆಯೋಜಿಸಿತ್ತು. ಇವೆಂಟ್ ನಲ್ಲಿ ರಾಣಿ ಶೇಖಾ ಫಾತಿಮಾ ಬಿಂಟ್ ಹಶರ್ ಬಿನ್ ದಲ್ಮೌಕ್ ಅಲ್ ಮಕ್ತೂಮ್, ಲೈಲಾ ರಹಲ್, ರೊಮೈನ್ ಗೆರಾರ್ಡಿನ್ - ಫ್ರೆಸ್ಸೆ ಸೇರಿದಂತೆ ರಾಜಮನೆತನದ ಗಣ್ಯರು ಮತ್ತು ದುಬೈ ಉದ್ಯಮದಲ್ಲಿನ ಪ್ರಸಿದ್ಧ ವ್ಯಕ್ತಿಗಳು ಪಾಲ್ಗೊಂಡಿದ್ದರು..


ಒಟ್ಟು 1000ಕ್ಕೂ ಹೆಚ್ಚು ಸ್ಪರ್ಧಾಳುಗಳನ್ನು  ಗೋಲ್ಡ್ ಮತ್ತು ಪ್ಲಾಟಿನಂ ವಿಭಾಗಗಳಲ್ಲಿ ಶಾರ್ಟ್ ಲಿಸ್ಟ್‌ ಮಾಡಲಾಗಿತ್ತು. ನಂತರ ವಿವಿಧ ಹಂತಗಳಲ್ಲಿ ಅವರನ್ನು ವರ್ಗೀಕರಿಸಿದ ಬಳಿಕ ಫೈನಲ್‌ ಇವೆಂಟ್‌ ಗೆ ಒಟ್ಟು 18 ಮಂದಿ ಸ್ಪರ್ಧಾಳುಗಳಿದ್ದರು.  ಟ್ಯಾಲೆಂಟ್ ರೌಂಡ್ ಮತ್ತು ಪ್ರೆಸೆಂಟೇಶನ್ ರೌಂಡ್ ಸೇರಿದಂತೆ ಇವೆಂಟ್ ಹಲವಾರು ಸುತ್ತುಗಳನ್ನು  ಒಳಗೊಂಡಿತ್ತು. ಈವ್ನಿಂಗ್ ರೌಂಡ್ಸ್‌ನಲ್ಲಿ 3 ವಿಭಿನ್ನ ಉಡುಪುಗಳಲ್ಲಿ ರಾಂಪ್ ವಾಕ್  ಕೂಡ ಸೇರಿತ್ತು. ಸಾಂಪ್ರದಾಯಿಕ ಮತ್ತು ಗೌನ್ ರೌಂಡ್ ಮುಗಿದ ನಂತರ ಪ್ರಶ್ನೋತ್ತರ ಸುತ್ತು ನಡೆಸಲಾಯಿತು. ಈ ಎಲ್ಲ ಹಂತಗಳನ್ನು ದಾಟಿ ಮಂಗಳೂರು ಮೂಲದ ಗ್ವಿನ್ ಶಿಬೋನಿ ಡಿಸೋಜಾ ಅಂತಿಮ ಗೆಲುವು ಸಾಧಿಸಿದರು.


ಅವರು ಗೋಲ್ಡ್‌ ವಿಭಾಗದಲ್ಲಿ ಮಿಸೆಸ್ ಯುಎಇ ಇಂಟರ್ನ್ಯಾಷನಲ್ 2024 ರ 2 ನೇ ರನ್ನರ್ ಅಪ್ ಪ್ರಶಸ್ತಿ ಗೆದ್ದಿದ್ದಾರೆ ಮತ್ತು ಮಿಸೆಸ್ ಬೆಸ್ಟ್ ಪರ್ಸನಾಲಿಟಿ 2024  ಸಬ್‌ ಟೈಟಲ್‌ ಕೂಡ ಗೆದ್ದಿದ್ದಾರೆ. ಟ್ಯಾಲೆಂಟ್ ಸುತ್ತಿನಲ್ಲಿ ಗ್ವಿನ್ ಬಾಲಿವುಡ್ ಮತ್ತು ಬೆಲ್ಲಿ ಡ್ಯಾನ್ಸ್‌ನ ಫ್ಯೂಷನ್ ನೃತ್ಯವನ್ನು ಪ್ರದರ್ಶಿಸಿದರು.


ಪ್ರಸ್ತುತಿ ಸುತ್ತಿನಲ್ಲಿ - ಅವರು ಯೋಗ್ಯ ಉಡುಪುಗಳಲ್ಲಿ ವೈಯಕ್ತಿಕ ಸಾಮಾಜಿಕ ಜವಾಬ್ದಾರಿಯ ವಿಷಯದ ಬಗ್ಗೆ ಪ್ರಸ್ತುತಪಡಿಸಿದರು.


ಿವೆಂಟ್‌ಗೆ ಮೊದಲು ಎರಡೂವರೆ ದಿನಗಳ ತೀವ್ರ ತರಬೇತಿ/ ಗ್ರೂಮಿಂಗ್ ಸೆಷನ್ ಅನ್ನು ಮುಸ್ಕಾನ್ ಆಯೋಜಿಸಿತ್ತು. ಅದರಲ್ಲಿ ಫಿಟ್‌ನೆಸ್ ಸೆಷನ್, ಮೇಕ್ಅಪ್, ಛಾಯಾಗ್ರಹಣ, ಆತ್ಮರಕ್ಷಣೆ, ನೃತ್ಯ ಸಂಯೋಜನೆ, ಧ್ಯಾನ, ಆರೋಗ್ಯ ಮತ್ತು ಪೋಷಣೆಯ ಅವಧಿ, ಶಿಷ್ಟಾಚಾರ ತರಬೇತಿ ಇತ್ಯಾದಿ ಒಳಗೊಂಡಿದ್ದವು.


ಹಿನ್ನೆಲೆ:

ಗ್ವಿನ್ನೆ ಅವರು 2017 ರಿಂದ ಯುಎಇಯಲ್ಲಿದ್ದಾರೆ. ದುಬೈನ ಮಿಡ್ಲ್‌ಸೆಕ್ಸ್ ವಿಶ್ವವಿದ್ಯಾಲಯದಿಂದ 'ವ್ಯಾಪಾರ ಕಾರ್ಯಾಚರಣೆಗಳು ಮತ್ತು ಪೂರೈಕೆ ಸರಪಳಿ ನಿರ್ವಹಣೆ' ಯಲ್ಲಿ ಸ್ನಾತಕೋತ್ತರ - ಎಂಬಿಎ ಮಾಡಿದ್ದಾರೆ. ಪ್ರಸ್ತುತ ಆಟೋಮೋಟಿವ್ ವಲಯದಲ್ಲಿ ಖರೀದಿ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ.

ನೃತ್ಯದ ಬಗ್ಗೆ ಒಲವು ಹೊಂದಿದ್ದು, ಶಾಲಾ ದಿನಗಳಲ್ಲಿ ಭರತನಾಟ್ಯ ಕಲಿಯುತ್ತಿದ್ದರು. ನಂತರ ಬಾಲ್ ರೂಂ ನೃತ್ಯ (ರಿಪ್ವಿನ್ಸ್ ಬಾಲ್ ರೂಂ ನೃತ್ಯ ತರಗತಿ) ತರಬೇತಿ ಪಡೆದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಜೆಪ್ಪುವಿನ ಸೇಂಟ್ ಗೆರೋಸಾ ಬಾಲಕಿಯರ ಪ್ರೌಢಶಾಲೆಯಲ್ಲಿ ಪಡೆದಿದ್ದರು. ಕಾಲೇಜು ಶಿಕ್ಷಣವನ್ನು ಬೆಂದೂರಿನ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಪಡೆದಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


0 Comments

Post a Comment

Post a Comment (0)

Previous Post Next Post