ಡಾ. ಮುರಲೀಮೋಹನ್ ಚೂಂತಾರು ಬಣ್ಣನೆ
ಮಂಗಳೂರು: ಝೀ ಕನ್ನಡ ವಾಹಿನಿ ಐದನೆಯ ಆವೃತ್ತಿಯ ಡ್ರಾಮಾ ಜ್ಯೂನಿಯರ್ಸ್ ವಿನ್ನರ್ ರಿಷಿಕಾ ಕುಂದೇಶ್ವರ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಕ ಸಾ ಪ ಮಾರ್ಗದರ್ಶಕ ಸಮಿತಿಯ ಡಾ. ಮುರಲೀಮೋಹನ್ ಚೂಂತಾರು , ಈಕೆಯ ಪ್ರದರ್ಶನಗಳು , ಕನ್ನಡ ಭಾಷಾ ಶುದ್ಧಿ ಮತ್ತು ಗಾಯನ ಕೌಶಲ್ಯಗಳನ್ನು ಕೊಂಡಾಡುತ್ತಾ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದಿರುವ ಈಕೆ ದಕ್ಷಿಣ ಕನ್ನಡದ ಹೆಮ್ಮೆ ಮತ್ತು ಮಂಗಳೂರಿನ ಕುಂದಣ ಎಂದು ಬಣ್ಣಿಸಿದರು. ಈಕೆಯ ಪ್ರತಿಭೆಗೆ ಸಂಪೂರ್ಣ ಬೆಂಬಲ ನೀಡಿದ ತಂದೆ ಜಿತೇಂದ್ರ ಕುಂದೇಶ್ವರ , ತಾಯಿ ಸಂಧ್ಯಾ ಕುಂದೇಶ್ವರ ಮತ್ತು ತಮ್ಮ ವಿಶ್ವತೇಜ ಅವರ ಆಸಕ್ತಿ ನಿಜಕ್ಕೂ ಶ್ಲಾಘನೀಯ ಎಂದರು.
ಘಟಕದ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ಸನ್ಮಾನಿಸಿ ಶುಭ ಕೋರಿದರು.
ಸನ್ಮಾನ ಸ್ವೀಕರಿಸಿದ ರಿಷಿಕಾ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆ ಸಲ್ಲಿಸುತ್ತಾ , ಗುರುಗಳ ಮತ್ತು ಹೆತ್ತವರ ನಿರಂತರ ಪ್ರೋತ್ಸಾಹದಿಂದ ತನಗೆ ಇಂತಹ ಸಾಧನೆ ಸಾಧ್ಯವಾಗಿದೆ ಎಂದಳು. ಝೀ ಕನ್ನಡ ವಾಹಿನಿಗೆ ವಂದನೆಗಳನ್ನು ತಿಳಿಸಿದಳು.
ಡಾ | ಮೀನಾಕ್ಷಿ ರಾಮಚಂದ್ರ , ರತ್ನಾವತಿ ಬೈಕಾಡಿ , ಗುರುಪ್ರಸಾದ್ ಮತ್ತು ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು. ಗೌ. ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಸ್ವಾಗತಿಸಿದರು. ಗೌ. ಕೋಶಾಧಿಕಾರಿ ಎನ್. ಸುಬ್ರಾಯ ಭಟ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ