ಮತದಾನ ಹಕ್ಕು ಮಾತ್ರವಲ್ಲ, ಅದು ದೇಶ ಕಟ್ಟುವ ಕರ್ತವ್ಯ

Upayuktha
0


"ನನ್ನ ಒಂದು ಮತ ಹಾಕಲಿಲ್ಲ ಅಂದರೆ ಏನಾಗುತ್ತೆ? ಒಂದು ಮತದಿಂದ ದೇಶ ಏನು ಬಿದ್ದು ಹೋಗಲ್ಲ" ಹಾಗಂತ ಯೋಚಿಸಿ ಮತದಾನಕ್ಕೆ ನಿರಾಸಕ್ತಿ ತೋರುವವರೂ ಕೆಲವರು ಇರ್ತಾರೆ. ಹಾಗಾಗಿಯೇ ಒಟ್ಟಾರೆ ಮತದಾನ 70% ದಾಟುವುದಿಲ್ಲ.  


ಈ ಅಭಿಪ್ರಾಯ ವೈಯಕ್ತಿಕ ನೆಲೆಗಟ್ಟಿನಲ್ಲಿ ಸರಿ ಅನಿಸಬಹುದು, ಆದರೆ ಲೆಕ್ಕಾಚಾರ ಹಾಕಿ ನೋಡಿದರೆ, ಇದು ಒಪ್ಪುವ ಮಾತಲ್ಲ.


ಪ್ರತಿಯೊಬ್ಬರ ಒಂದೊಂದು ಮತಕ್ಕೂ ವಿಶೇಷ ಮಹತ್ವ ಇದ್ದೇ ಇದೆ. ಬೇರೆ ಎಲ್ಲರ ಮತಕ್ಕಿಂತ ನನ್ನ ಮತ ನನಗೆ ಮಹತ್ವದ್ದು ಎಂಬ ಭಾವ ನಮ್ಮದಾಗಬೇಕು. ಗುಜರಾತಿನ ಗಿರ್ ಅರಣ್ಯದಲ್ಲಿ ಭಾರತ್ ದಾಸ್ ಎಂಬ ಮತದಾರ ಇದ್ದಾರೆ. ಸಣ್ಣ ಕುಟುಂಬ ಇದ್ದರೂ, ಕುಟುಂಬದಲ್ಲಿ ಓಟಿನ ಹಕ್ಕು ಇದ್ದು ಮತದಾರ ಆಗಿರುವುದು ಇವರೊಬ್ಬರೆ. ಅವರ ಒಂದು ಓಟಿಗಾಗಿ ಐದು ಜನ ಅಧಿಕಾರಿಗಳನ್ನು ನಿಯೋಜಿಸಿದ ಒಂದು ಮತಗಟ್ಟೆ ನಿರ್ಮಾಣ ಆಗಬೇಕು ಮತ್ತು ಆಗಿದೆ.  


ಭಾರತ್ ದಾಸ್ ಓಟು ಮಾಡ್ತಾರಾ? NOTA ಹಾಕ್ತಾರಾ?  ಸಂಜೆ ಆರು ಗಂಟೆಗೆ ಓಟ್ ಹಾಕ್ತಾರಾ? ಎನ್ನುವ ವಿಚಾರಗಳಿಗಿಂತ ಒಂದು ಓಟಿಗೆ ಎಷ್ಟು ಪ್ರಮುಖ್ಯತೆ ಕೊಡಲಾಗಿದೆ ಎನ್ನುವುದು ಇಲ್ಲಿ ಗಮನಿಸಬೇಕು.


ಇತಿಹಾಸದ ಚುನಾವಣೆಗಳಲ್ಲಿ ಅನೇಕ ಅಭ್ಯರ್ಥಿಗಳು ಒಂದು ಎರಡು ಮತಗಳಿಂದ ಗೆದ್ದವರಿದ್ದಾರೆ, ಸೋತವರಿದ್ದಾರೆ.  ಹಾಗೆ ಸೋತವರ ಮನೆಯ ಕಾರ್ ಡ್ರೈವರ್ರೋ, ಸೋತ ಅಭ್ಯರ್ಥಿಯ ಮನೆಯ ವಯೋವೃದ್ದ ಸದಸ್ಯರೋ ಓಟು ಮಾಡದೆ ಇರುವುದೂ ಸೋಲಿಗೆ ಕಾರಣವಾದ ಪ್ರಕರಣಗಳಿವೆ.  ಅಭ್ಯರ್ಥಿಯ ಮಗನೇ ವಿದೇಶದಲ್ಲಿದ್ದ ಕಾರಣ, ಒಂದು ಓಟಿಂದ ಅಭ್ಯರ್ಥಿ ಸೋತ ಕತೆಯೂ ಇದೆ!!. ಹಾಗಾಗಿ ಪ್ರತಿ ಒಂದು ಓಟೂ ಮಹತ್ವದ್ದು.  ನಮ್ಮ ಓಟು ಅತ್ಯಂತ ಮಹತ್ವದ್ದು.


ಈ ಬಾರಿಯ ಒಟ್ಟಾರೆ ಮತದಾನ 100% ಆಗಲೇಬೇಕು.   


ವ್ಯವಸ್ಥೆಯಿಂದ ನಮಗೇನಾದರೂ ಕುಂದು ಕೊರತೆಗಳು ಉಂಟಾದರೆ ಅದನ್ನು ಸರಿಪಡಿಸುವ, ಪರಿಹಾರ ಕೇಳುವ ಹಕ್ಕು ನೈತಿಕವಾಗಿ ನಮಗೆ ಬರುವುದು ಮತದಾನದ ಕರ್ತವ್ಯದಲ್ಲಿ ನಾವು ಜವಾಬ್ದಾರಿಯಿಂದ ಮತ ಹಾಕಿದಾಗ. ಮತದಾನದ ಲೆಕ್ಕಾಚಾರ ದಲ್ಲಿ ನಮ್ಮ ಮತ ಅತ್ಯಂತ ಮಹತ್ವ ಪೂರ್ಣವಾದುದು. ಮತದಾನದ ದಿನ ಮತ ಚಲಾವಣೆ ಆದ ಮೇಲೆಯೇ ನಮ್ಮ ಬೇರೆ ಕೆಲಸಗಳ ಕಡೆ ಗಮನ ಕೊಡೋಣ.  ಮತದಾನ ಮುಗಿದ ಮೇಲೆಯೇ ಊಟದ ಮನೆ, ಸಿನಿಮಾ, ಪ್ರವಾಸ, ಶಾಪಿಂಗ್ ಇತ್ಯಾದಿ. ಚುನಾವಣೆಯ ದಿನದ ಮೊದಲ ಆಧ್ಯತೆ ಮತದಾನವೇ ನಮ್ಮ ಸಂಕಲ್ಪವಾಗಲಿ.


ತಂತ್ರಜ್ಞಾನ ವ್ಯವಸ್ಥೆಗಳು ವಿಸ್ತರಿಸಿದ ಮೇಲೆ ಪ್ರತಿಯೊಬ್ಬ ಮತದಾರರೂ ಈಗ ಮತ್ತಷ್ಟು ಪ್ರಬುದ್ಧರಾಗಿದ್ದಾರೆ. ಮತದಾನ ಲೆಕ್ಕಾಚಾರ ಕ್ಕೆ ಬೇಕಾಗುವ ಎಲ್ಲ ಮಾಹಿತಿಗಳು ನಮ್ಮ ಬೆರಳ ತುದಿಯಲ್ಲಿವೆ. ನಾವೆಲ್ಲ ಈಗೀಗ ಚುನಾವಣಾ ವಿಚಾರಗಳನ್ನು ಚಿಂತಿಸುವಾಗ, ಅಭಿವೃದ್ದಿ, ಭಧ್ರತೆ, ಅರ್ಥ ವ್ಯವಸ್ಥೆ, ಧರ್ಮಗಳ ವಿಚಾರವನ್ನೂ ಪ್ರಜಾಪ್ರಭುತ್ವದ ಅಧಿಕಾರ ವ್ಯವಸ್ಥೆಯಲ್ಲಿ ಮತದಾರನಾಗಿ ಹೇಗೆ ನೋಡಬೇಕು ಎಂದು ಆಲೋಚಿಸುತ್ತೇವೆ.  ಯಾವುದೇ ಸಾಂಸ್ಕೃತಿಕ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸೇರಿದಾಗ ದೇಶದ ಎಲ್ಲ ಆಗು ಹೋಗುಗಳನ್ನು ಚರ್ಚಿಸುತ್ತೇವೆ. ಯಾರಿಗೆ ಮತ ಹಾಕಬೇಕು ಎಂದು ಒಂದು ಲೆಕ್ಕಾಚಾರಕ್ಕೆ ತೀರ್ಮಾನ ಮಾಡುತ್ತಿರುತ್ತೇವೆ. 


ಉದಾಹರಣೆಗೆ, ಚುನಾವಣಾ ಬಾಂಡ್‌ ತರುವ ಮೊದಲು ಎಷ್ಟು ಕಪ್ಪು ಹಣ ಎಷ್ಟು ದಶಕಗಳಿಂದ ಎಲ್ಲಾ ಪಕ್ಷಗಳಿಗೆ ಹರಿದು ಬರುತ್ತಿತ್ತು? ಒಂದು ಪಕ್ಷ ಅಧಿಕಾರಕ್ಕೆ ಬಂದು ಕಪ್ಪು ಹಣ ನಿಯಂತ್ರಣ ಮಾಡಿದ್ದು ಹೇಗೆ?


ಕೆಲವು ಪಕ್ಷಗಳು ಚುನಾವಣಾ ಬಾಂಡನ್ನು ಒಂದು ಕಡೆ ವಿರೋಧಿಸುತ್ತ ಮತ್ತೊಂದು ಕಡೆ ಅದೇ ಪಕ್ಷಗಳು ಅದೇ ಬಾಂಡ್‌ಗಳಿಂದ ಆದಾಯ ವುದ್ಧಿ ಮಾಡಿಕೊಂಡ ಹಿನ್ನಲೆ ಹೇಗೆ? ಚುನಾವಣಾ ಬಾಂಡ್ ವಿರುದ್ದ ಕೋರ್ಟಿಗೆ ಹೋದ ಪಕ್ಷ ಯಾವುದು? ಸುಪ್ರೀಂ ಕೋರ್ಟ್‌ ಪೀಠವು ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿದ್ದೇಕೆ? ಇದರಿಂದ ಮತ್ತೆ ಕಪ್ಪು ಹಣ ವೃದ್ಧಿಯಾಗಲಿದೆಯಾ? ಚುನಾವಣಾ ಬಾಂಡ್ ವಿಚಾರದಲ್ಲಿ ಪಾರದರ್ಶಕತೆ ಕಮ್ಮಿಯಾಯಿತಾ?  ಪುನಃ ಮತ್ತಷ್ಟು ಪಾರದರ್ಶಕತೆಯಿಂದ, ಸುಪ್ರೀಮ್ ಕೋರ್ಟ್ ಅನುಮೋದನೆಯೊಂದಿಗೆ ಮತ್ತೆ ಚುನಾವಣಾ ಬಾಂಡ್ ಅಸ್ತಿತ್ವಕ್ಕೆ ಬರಬಹುದಾ? ಯಾವ ಪಕ್ಷ ಅಥವಾ ಯಾವ ಮೈತ್ರಿ ಕೂಟ ಅಧಿಕಾರಕ್ಕೆ ಬಂದರೆ ರಾಜಕೀಯ ಪಕ್ಷಗಳಿಗೆ ಕಪ್ಪು ಹಣ ನಿಂತು ಹೋಗಿ, ಲೀಗಲ್ ಮನಿ ಮಾತ್ರ ಆದಾಯವಾಗಲಿದೆ?- ಇಂತಹ ವಿಚಾರಗಳನ್ನು ಮತದಾರರು ಹಳ್ಳಿಗಳ ಮೂಲೆ ಅಂಗಡಿಯಲ್ಲಿ ಅರ್ಧ ಕೆಜಿ ಈರುಳ್ಳಿ ಕೊಳ್ಳಲು ಬಂದಾಗಲೂ ಚರ್ಚೆ ಮಾಡುವಷ್ಟು ಪ್ರಬದ್ಧರಾಗಿದ್ದಾರೆ, ಮಾಹಿತಿ ಹೊಂದಿದ್ದಾರೆ. ಯಾವ ಸಮರ್ಥ ನಾಯಕನಿಗೆ ಮತ ಹಾಕಿದರೆ ದೇಶದ ಕಪ್ಪು ಹಣ ನಿಂತು ಹೋಗುವ ಪ್ರಕ್ರಿಯೆ ಶುರುವಾಗುತ್ತದೆ? 


ಚುನಾವಣಾ ಬಾಂಡ್ ಮಾತ್ರ ಅಲ್ಲ, ಇಂತಹ ಎಲ್ಲ ವಿಚಾರಗಳಲ್ಲೂ.... ಯಾವ ದಕ್ಷ ನಾಯಕ ಪ್ರಮಾಣಿಕವಾಗಿ, ದೇಶದ ಹಿತ ಬಯಸುವ ನಾಯಕನಾಗಿದ್ದಾನೆ?  ಯಾವ ನಾಯಕ ಭಾರತವನ್ನು ಗಟ್ಟಿ, ಸುಭದ್ರ ಮತ್ತು ಶಾಂತಿಯ ರಾಷ್ಟ್ರವಾಗಿಸಬಲ್ಲ ಎಂದು ಮತದಾರ ಯೋಚಿಸುತ್ತಿದ್ದಾನೆ.  


ಹಾಗೆ ಯೋಚಿಸಿ ಒಟ್ಟಾರೆ ಮತ ಹಾಕುವವರ ಸಂಖ್ಯೆ ಈ ಬಾರಿ 70% ನಿಂದ 85% ದಾಟಲಿದೆ ಎಂದು ಅಂದಾಜಿಸಲಾಗುತ್ತಿದೆ. ರಾಷ್ಟ್ರದ ಮತದಾನ 100% ಮುಟ್ಟಬೇಕು. ಹಾಗೆ ಆಗಬೇಕಾದರೆ ಒಬ್ಬರೂ ಬಿಡದೆ, ನಾವೆಲ್ಲ ಮತದಾನ ಮಾಡಬೇಕು.

ಶಲ್ ವಿ? 


========== 


ರಾಮ + ಅಯನ = ರಾಮಾಯಣ


ಜಗತ್ತಿನ ಮೊದಲ ಗ್ರಂಥ ರಾಮಾಯಣ ರಾಮನ ಸಂಚಾರದ ಕತೆ. ರಾಮನಂತೆ ನಾವೂ ಜಾಡ್ಯವನ್ನು ತೊರೆದು, ಮತದಾನ ಕೇಂದ್ರದವರೆಗೆ ಸಂಚರಿಸಿ, ಪವಿತ್ರ ಮತದಾನ ಮಾಡುವುದು ನಮ್ಮ ಕರ್ತವ್ಯ ಆಗಬೇಕು.


ಮತದಾನ ಲೆಕ್ಕಾಚಾರ ಕ್ಕೆ ಪವಿತ್ರ ಧರ್ಮಕ್ಷೇತ್ರ ಉಡುಪಿ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮಿಜಿಯವರು ಮತದಾನ ಮಾಡುವ ಪ್ರೇರೇಪಣಾ ಮಾತುಗಳನ್ನು ಈ ವೀಡಿಯೋದಲ್ಲಿ ಹರಿಸಿದ್ದಾರೆ.


ಗುರುಗಳ ಆ ಆಶೀರ್ವಾದದ ಮಾತುಗಳೊಂದಿಗೆ, ರಾಮನ ಕೆಲವು ಗುಣಗಳನ್ನಾದರೂ ಧರಿಸಿರಬಹುದಾದ ಒಬ್ಬ ಸಮರ್ಥ ನಾಯಕನ ಆಯ್ಕೆ ಮಾಡಲು ನಾವೆಲ್ಲರು ನಮ್ಮ ಜಾಡ್ಯವನ್ನು ಬಿಟ್ಟು, ಮತದಾನ ಕೇಂದ್ರಕ್ಕೆ ತೆರಳಿ, ಮತದಾನ ಮಾಡಿ ಬರೋಣ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top