ನೋಟಾ ಅಭಿಯಾನ ಹೆಸರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ: ಕ್ಯಾಂಪಸ್‌ನಲ್ಲಿ ಬಿಗು ವಾತಾವರಣ

Upayuktha
0


ಮಂಗಳೂರು: ನೋಟಾ ಅಭಿಯಾನಕ್ಕೆ ಬಂದ ತಂಡವೊಂದು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಏಪ್ರಿಲ್ 20 ರಂದು ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯು, ಕಾಲೇಜಿನ ಪ್ರಾಂಶುಪಾಲರ ಅನುಮತಿ ಪಡೆಯದೆ ಏಕಾಏಕಿ ಮಂಗಳೂರಿನ ಖಾಸಗಿ ಕಾಲೇಜೊಂದರ ಕ್ಯಾಂಪಸ್ ಒಳಗೆ ನುಗ್ಗಿ ನೋಟಾ ಅಭಿಯಾನದ ಹೆಸರಿನಲ್ಲಿ ಯುವ ವಿದ್ಯಾರ್ಥಿಗಳಿಗೆ ನೋಟಾ ಹಾಕುವಂತೆ ಪ್ರಚಾರ ಮಾಡತೊಡಗಿತ್ತು. ಇದಕ್ಕೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.


ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತಕ್ಕೂ ಅದರದ್ದೇ ಆದ ಪ್ರಾಧಾನ್ಯತೆ ಇದೆ. ನೋಟಾ ಹಾಕುವುದಾದರೆ ಅದು ಆಯಾ ಮತದಾರನ ಸ್ವಂತ ಆಯ್ಕೆ ಆಗಿರಬೇಕೇ ಹೊರತು ಈ ರೀತಿ ಅಭಿಯಾನದ ಮೂಲಕ ಅವರ ಮೇಲೆ ಒತ್ತಡ ಹೇರಬಾರದು. ಈ ಬಾರಿ ತುಂಬಾ ವಿದ್ಯಾರ್ಥಿಗಳು ಪ್ರಥಮ ಬಾರಿಗೆ ಮತ ಚಲಾಯಿಸಲಿದ್ದಾರೆ. ಆ ಮೂಲಕ ತಮ್ಮ ಹಕ್ಕು ಮೆರೆಯಲಿದ್ದಾರೆ. ಈ ಹಂತದಲ್ಲಿ ನೋಟಾ ಪರ ಮತ ಹಾಕುವಂತೆ ಅವರ ಮನ ಪರಿವರ್ತಿಸುವ ಕಾರ್ಯ ಸರಿಯಲ್ಲ ಎಂದು ವಿದ್ಯಾರ್ಥಿಗಳು ಅಭಿಯಾನಕ್ಕೆ ಬಂದವರಿಗೆ ತಿಳಿಹೇಳುತ್ತಿದ್ದರು. 



ಆಗ ಇದರಿಂದ ಕೆರಳಿದ ಅಭಿಯಾನಕ್ಕೆ ಬಂದ ವ್ಯಕ್ತಿಯೊಬ್ಬ ಅವಾಚ್ಯ ಶಬ್ದ ಬಳಸಿ ವಿದ್ಯಾರ್ಥಿಗಳಿಗೆ ದಬಾಯಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಅಭಿಯಾನಕ್ಕೆ ಬಂದ ತಂಡದ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಆಗಲೂ ಆ ತಂಡ ತನ್ನ ಎಲ್ಲೆ ಮೀರಿ ವರ್ತಿಸಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿ, ಅನುಮತಿ ಪಡೆಯದೆ ಕ್ಯಾಂಪಸ್ ಒಳಗೆ ಬಂದದ್ದು ಏಕೆ? ಎಂದು ಪ್ರಶ್ನಿಸಿದ ಪ್ರಾಧ್ಯಾಪಕರ ಮೇಲೂ ರೇಗಿದ ತಂಡದ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಒಟ್ಟಾಗಿ ಅವಾಚ್ಯ ಶಬ್ದ ಬಳಸಿದ ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯನ್ನು ಕ್ಯಾಂಪಸ್ ನಿಂದ ಹೊರ ಕಳುಹಿಸಿದ ಘಟನೆ ವರದಿಯಾಗಿದೆ.


ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಪ್ರಾಮುಖ್ಯವನ್ನು ಪ್ರಚುರಪಡಿಸಿ, ಎಲ್ಲರೂ ತಮ್ಮ ಹಕ್ಕು ಚಲಾಯಿಸಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂಬ ಕುರಿತಾಗಿ ಹಲವು ಜನಪರ ಅಭಿಯಾನಗಳು ನಡೆಯುತ್ತಿವೆ. ಆದರೆ ಮಂಗಳೂರಿನಲ್ಲಿ ನಡೆದ ಈ ಪ್ರಕರಣವು ಯುವ ಮತದಾರರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಸಿ, ನೋಟಾದ ಮೂಲ ಉದ್ದೇಶವನ್ನು ಮರೆಮಾಚಿ, ವಿವಿಧ ಹಿತಾಸಕ್ತಿಗಳಿಗೆ ಅನುಗುಣವಾಗಿ ನೋಟಾ ಚಲಾಯಿಸಿ ಎಂದು ಪ್ರಚಾರ ಮಾಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಹುಟ್ಟುಹಾಕಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top