|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತದಾನದಲ್ಲಿ ತಪ್ಪದೆ ಪಾಲ್ಗೊಳ್ಳಿ: ಹನಮ ರೆಡ್ಡಿ

ಮತದಾನದಲ್ಲಿ ತಪ್ಪದೆ ಪಾಲ್ಗೊಳ್ಳಿ: ಹನಮ ರೆಡ್ಡಿ

 ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಮತದಾನ ಜಾಗೃತಿ 



ಪುತ್ತೂರು: ದೇಶದ ಅತಿ ದೊಡ್ಡ ಚುನಾವಣೆಯಾದ ಲೋಕಸಭಾ ಚುನಾವಣೆಯ ಮತದಾನದಲ್ಲಿ ತಪ್ಪದೆ ಎಲ್ಲರೂ ಪಾಲ್ಗೊಳ್ಳಬೇಕು. ದೇಶ ಪ್ರಗತಿಯನ್ನು ಕಾಣುವ ಹಾಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಮತದಾನ ಪ್ರಮಾಣದಲ್ಲಿ ಏರಿಕೆಯಾಗಬೇಕು ಎಂದು ತಾಲೂಕು ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಹನಮ ರೆಡ್ಡಿ ಅಭಿಪ್ರಾಯಪಟ್ಟರು.

 

ಎ.23 ರಂದು ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಸ್ವೀಪ್‌ ಸಮಿತಿ ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಆಶ್ರಯದಲ್ಲಿ ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 210 ಗೋಳಿತ್ತಡಿ, 208 ಕರ್ನೂರು ಮತಗಟ್ಟೆಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ವಿಶೇಷವಾಗಿ ಮತದಾರರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಮತದಾನದಿಂದ ಯಾವೊಬ್ಬ ಮತದಾರರು ಹೊರಗುಳಿಯಬಾರದೆಂಬ ನಿಟ್ಟಿನಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಹೀಗಿದ್ದರೂ ಮತದಾನದಿಂದ ಹೊರಗುಳಿಯುವ ಮತದಾರಿಗೆ ಅರಿವು ಮೂಡಿಸುವ ಕಾರ್ಯ ನಮ್ಮದು. ಈಗಾಗಲೇ ಆಯೋಗ ನಾನಾ ಮಾಹಿತಿಯುಳ್ಳ ಮೊಬೈಲ್‌ ಅಪ್ಲಿಕೇಶ್‌ ಗಳ ಮೂಲಕ ಮತದಾರರಿಗೆ ಕೈಯಲ್ಲೆ ಎಲ್ಲಾ ಮಾಹಿತಿ, ಸಂದೇಶಗಳನ್ನು ನೀಡುತ್ತಿದೆ ಹೀಗಿರುವಾಗ ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ತಿಳಿಸಬೇಕು ಎಂದು ಹೇಳಿದರು. 


ಜಿಲ್ಲಾ ಸ್ವೀಪ್‌ ಮಾಸ್ಟರ್‌ ಟ್ರೈನರ್‌ ನಂದಕಿಶೋರ್‌ ಎಸ್‌. ಮಾತನಾಡಿ, ಬೇರೆಡೆ ಕೆಲಸದಲ್ಲಿರುವ ಮನೆಯವರನ್ನು ಮತದಾನದ ದಿನದಂದು ಮತಗಟ್ಟೆಗೆ ಬಂದು ಮತಚಲಾಯಿಸುವಂತೆ ತಿಳಿಸುವ ಕೆಲಸವಾಗಬೇಕು. ಅನಿವಾಸಿ ಭಾರತೀಯರಿದ್ದರೆ ಸಾಧ್ಯವಾದರೆ ಚುನಾವಣಾ ಸಂದರ್ಭ ಬರುವಂತೆ ಪ್ರೇರೇಪಿಸುವ ಹಾಗೂ ಊರಿನಲ್ಲೇ ಇದ್ದು ಮತಚಲಾಯಿಸದೆ ಇರುವ ಮತದಾರರಿಗೆ ತಿಳಿ ಹೇಳಿ ಮತಚಲಾಯಿಸುವಂತಾಗಬೇಕು. ಆಗ ಶೇ.100 ಮತದಾನವಾಗಲು ಸಾಧ್ಯ ಎಂದು ಹೇಳಿದರು. 

ಮತದಾನ ಜಾಗೃತಿ ಕುರಿತ ಕರಪತ್ರವನ್ನು ಹಂಚಲಾಯಿತು.


ತಾಲೂಕು ಪಂಚಾಯತ್‌ ಸ್ವೀಪ್‌ ಸಂಯೋಜಕರಾದ ತುಳಸಿ, ಭರತ್‌ ರಾಜ್‌, ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್‌ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಶಾರದಾ, ಮತಗಟ್ಟೆ ಅಧಿಕಾರಿಗಳಾದ ಸೀತಾರತ್ನ, ಪದ್ಮಾವತಿ,  


ಶಾಲಾ ಶಿಕ್ಷಕರಾದ ಶ್ರೀಲತಾ, ಶಾಹಿನಾ ಬೇಗಂ, ಗ್ರಾ.ಪಂ. ಸಿಬ್ಬಂದಿಗಳಾದ ಶೀನಪ್ಪ, ಚಂದ್ರಶೇಖರ ಉಪಸ್ಥಿತರಿದ್ದರು.


ಬಳಿಕ ಪೆರುವಾಯಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 86 ಕೊಲ್ಲತಡ್ಕ ಮತಗಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಶೋಕ್‌, ಮತಗಟ್ಟೆ ಅಧಿಕಾರಿ ಯಶೋಧಾ, ಸಿಬ್ಬಂದಿಗಳು, ಮತದಾರರು ಉಪಸ್ಥಿತರಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post