ನಮ್ಮೆಲ್ಲರ ಸಾವಿರಾರು ಸಮಸ್ಯೆಯ ಪರಿಹರಿಸುವ ಒಂದೇ ಸೂತ್ರವನ್ನು ಪರಿವರ್ತಿಸುವವಳು ಅಂದರೆ ಅದು ಅಮ್ಮ. ಹೀಗೆ ತಾಯಿಯ ಬಗ್ಗೆ ಹೇಳುತ್ತಾ ಹೋದರೆ ಬರೆಯಲು ಪದ ಗಳೇ ಸಾಲದು. ಅಷ್ಟು ಮಹತ್ವವನ್ನು ಹೊಂದಿದವಳು ತಾಯಿ ಇಂತಹ ದೈವತ್ವದ ಗುಣ ಹೊಂದಿದ ತಾಯಿಯನ್ನು ನಾವೆಲ್ಲ ಎಷ್ಟು ಅರ್ಥ ಮಾಡಿಕೊಂಡಿದ್ದೇನೆ. ಪ್ರತಿನಿತ್ಯದ ಪ್ರತಿಯೊಂದು ಆಗು ಹೋಗುಗಳಲ್ಲಿಯೂ ತಾಯಿಯ ಪಾತ್ರ ಅಪಾರವಾದುದು, ಅತಿಮುಖ್ಯವಾಗಿ ಬೇಕಾದುದಾಗಿದೆ. ನಮ್ಮೆಲ್ಲರ ನೋವಿನಲ್ಲಿ ಸಂತೈಸುವ, ನಲಿವಿನಲ್ಲಿ ಜತೆನಿಂತು ನಾವೆಷ್ಟು ಅರ್ಥಮಾಡಿಕೊಂಡೇವು, ಅವಳ ನಗು ನಲಿವಲ್ಲಿ ನಾವೆಷ್ಟು ಪಾಲು ಕೊಂಡೇವು... ನಲಿಯುವ ಮನವು ಅವಳದು. ಇಂತಹ ತಾಯಿಯನ್ನು ಪಡೆದ ನಾವುಗಳು ಧನ್ಯರು.
ಪ್ರತೀ ದಿನ ಪ್ರತೀ ನಿಮಿಷ ನಮ್ಮ ಎಳಿಗೆಗಾಗಿಯೇ, ನಮ್ಮ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವ ಕರುಣಾಮಯಿ ತಾಯಿಯನ್ನು ನಾವೆಷ್ಟು ತಿಳಿದುಕೊಂಡೇವು, ಅವಳ ಕೆಲಸಗಳಲ್ಲಿ ನಾವೆಷ್ಟು ಭಾಗಿಯಾದೇವ ಸಲ್ಲವೂ ಬೇಸರವಿಲ್ಲದೆ ಪ್ರತಿನಿತ್ಯ ದುಡಿಯುವ ಜೀವನ ಅವಳದು. ಮನೆ, ಗಂಡ, ಮಕ್ಕಳೆಂದು ಮನೆಯವರಿಗಾಗಿಯೇ ಜೀವ ಮುಡಿಪಾಗಿಟ್ಟ ತ್ಯಾಗಮಯಿ ಅವಳು.
ಅರಿಯಿರಿ, ತಿಳಿಯಿರಿ ಇನ್ನು ಮುಂದಾದರೂ ಅವಳ ಬಗ್ಗೆ ಆಲೋಚಿಸಿ. ಅವಳ ಕೆಲಸಗಳಲ್ಲಿ ಸಣ್ಣದಾಗಿಯಾದರೂ ಭಾಗವಹಿಸಿ, ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳೇ ನಿಮ್ಮ ಅಮ್ಮನನ್ನು ಕೀಳಾಗಿ, ಕೇವಲವಾಗಿ ಕಾಣಬೇಡಿ. ಅವಳು ಹೇಗಿದ್ದರೂ ಅಮ್ಮ ಅಮ್ಮನೇ. ಅಮ್ಮ ಕೊಡುವ ಪ್ರೀತಿಯನ್ನು ಬೇರೆ ಯಾರೂ ಕೊಡಲಾರರು. ಪಕ್ಕದ ಮನೆಯ ಆಂಟಿ
ತುಂಬಾ ಚೆನ್ನಾಗಿದ್ದಾರೆಂದು ಅವರನ್ನು ಅಮ್ಮನೆಂದು ಕರೆಯಲು ಸಾಧ್ಯವೇ...? ಅಮ್ಮನನ್ನು ನೀನು ಓದಿಲ್ಲ ನಿನಗೆ ಇದರ ಬಗ್ಗೆ ತಿಳಿದಿಲ್ಲ ಎಂದಲ್ಲ ಜರಿಯಬೇಡಿ, ಅವಳ ಅನುಭವದ ಪ್ರೀತಿಯ ಮುಂದೆ ನಿದ್ದು ತಿಳುವಳಿಕೆ ಶೂನ್ನ, ಆವಳಿಗೆ ಸಿಗಬೇಕಾದ ಸ್ಥಾನಮಾನ, ಪ್ರೀತಿ ಪ್ರೇಮದನ್ನು ನೀಡಿ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ವಿಚಾರವನ್ನು ಅವಳ ಮುಂದೆ ಹಂಚಿಕೊಳ್ಳಿ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಕಾರ ಮೂರ್ತಿಯೇ ಅವಳು ಎಂಬುದನ್ನು ಮರೆಯದಿರಿ.
ಆದರೂ... ಅಮ್ಮನ ಮಡಿಲಲ್ಲಿ ಆಡಿ ಕಳೆದ ಆ ಕ್ಷಣಗಳು ಅಮ್ಮನ ಲಾಲಿಹಾಡು ಆಟ ಆಡಿಸುತ್ತಾ ಊಟ ಮಾಡಿಸುತ್ತಿದ್ದ ರೀತಿ, ಆಡಿ ಬಿದ್ದು ಬಂದಾಗ ಸಂತೈಸುತ್ತಿದ್ದ ರೀತಿ ಇವೆಲ್ಲವು ಮತ್ತಾದ ಜನ್ಮದಲ್ಲೂ ನಮಗೆ ಮತ್ತೆ ದೊರೆಯದ ಅನಂದದ ಕ್ಷಣಗಳು.
ಅಮ್ಮನ ನಡೆ ನುಡಿಯನ್ನು ಕಲಿಯಿರಿ, ಅವಳ ಮಮಕಾರದ ಆರಿಯಿರಿ, ಇನ್ನಾದರೂ ಅವಳ ತು ನಡೆಯಿರಿ ಮರೆಯಾದರೆ ಮತ್ತೆ ಸಿಗಲಾರದ ಮಾಣಿಕ್ಯವು ಅವಳು ಹಾಗಾಗಿ ನಮ್ಮ ಜನುಮ ಇರುವವರೆಗೆ ಕೈ ತುತ್ತು ತಿನ್ನಿಸಿದ ಜೀವ ನಲುಗದಿರಲಿ, ಅವಳ ಮನವು ನಮ್ಮಿಂದಾಗಿ, ನಮ್ಮ ನಡವಳಿಕೆಯಿಂದಾಗಿ ಬೇಸರಿಸದಿರಲಿ, ಅವಳ ಅರಿತು ಬಾಳಿರಿ.
-ಜಯಶ್ರೀ. ಸಂಪ ,ಪಂಜ
ತೃತೀಯ ಬಿ ಎ ಪತ್ರಿಕೋದ್ಯಮ ವಿಭಾಗ
ಅಂಬಿಕಾ ಮಹಾವಿದ್ಯಾಲಯ ಬಪ್ಪಳಿಗೆ, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ